Madhukar Shetty: ಕರ್ನಾಟಕದ ರಿಯಲ್ ಸಿಂಗಂ ಮಧುಕರ್ ಶೆಟ್ಟಿ ಬಗ್ಗೆ ನಿಮಗೆಷ್ಟು ಗೊತ್ತು! ಇಲ್ಲಿದೆ ನೋಡಿ
ಹೈದರಾಬಾದ್‌ನ ನ್ಯಾಷನಲ್ ಪೊಲೀಸ್ ಅಕಾಡೆಮಿಯಲ್ಲಿ ಉಪನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಮಧುಕರ್ ಶೆಟ್ಟಿ (Madhukar Shetty) ಅವರ ಸಾವಿಗೆ ಕಾರಣವೇನು ಏನು ತಿಳಿದಿಲ್ಲ, ದೀರ್ಘ ತನಿಖೆ ನಡೆಸುತ್ತೇವೆ ಎಂದು ಹೇಳಿ ಇನ್ನು ಪರಿಹಾರ ಸಿಕ್ಕಿಲ್ಲ, ಅವರ ಹೆಂಡತಿ ಮಾತ್ರ ತನಿಖೆಗಾಗಿ ಒತ್ತಾಯಿಸುತ್ತಾ ಇದ್ದಾರೆ, ದಕ್ಷ ಐಪಿಎಸ್ ಅಧಿಕಾರಿ ಆಗಿದ್ದವರು ಇವರು, ಅವರ ಸಾವಿನ ಸತ್ಯದ ಬಗ್ಗೆ ನ್ಯಾಯ ಕೋರಿ ಅವರ ಪತ್ನಿ ಸುವರ್ಣ (Suvarna) ಅವರು ದೆಹಲಿಯ ಗ್ರಾಹಕ ವೇದಿಕೆ ನ್ಯಾಯಾಲಯದಲ್ಲಿ ಏಕಾಂಗಿ ಹೋರಾಟ ನಡೆಸಿದರೂ ಇದಕ್ಕೆ ಸುಳಿವು ಸಿಗಲಿಲ್ಲ.
ಕರ್ನಾಟಕ ಕಂಡ ನಿಷ್ಠಾವಂತ ಪೊಲೀಸ್ ಅಧಿಕಾರಿ:
ಕರ್ನಾಟಕದ ಅಗ್ರ ಪೋಲಿಸ್ ಸಾಲಿನಲ್ಲಿ ನಿಲ್ಲುವರು ಡಾ. ಕೆ. ಮಧುಕರಶೆಟ್ಟಿ. ರಾಜ್ಯ ಕಂಡ ಅತ್ಯಂತ ಪ್ರಾಮಾಣಿಕ ಐಪಿಎಸ್ ಅಧಿಕಾರಿಗಳಲ್ಲಿ ಒಬ್ಬರಾದ ಮಧುಕರ್ ಶೆಟ್ಟಿ, ಬಳ್ಳಾರಿ ಗಣಿಗಾರಿಕೆ ಹಗರಣ ಹೊರತೆಗೆಯುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು, ದಿಲ್ಲಿಯ ಜೆಎನ್‌ಯುನಲ್ಲಿ ಸಮಾಜಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಕೂಡ ಪಡೆದಿದ್ದರು. ಯಾವ MLA ಮಗ ಎಂದು ಕೂಡ ನೋಡದೆ ತಪ್ಪಿತಸ್ತರನ್ನು ಎಳೆದು ಜೈಲಿಗೆ ಅಟ್ಟುತ್ತಿದ್ದರು, ಇವರ ನೇರ ನಿಷ್ಠಾವಂತ ಕರ್ತವ್ಯವೇ ಇವರಿಗೆ ಮುಳುವಾಯಿತು ಎಂದು ಅನೇಕರು ಹೇಳುತ್ತಾರೆ. ಭ್ರಷ್ಟರ ಗುಂಪಿನಿಂದ ಕೂಡಿರುವ ಈ ಸಮಾಜದಲ್ಲಿ ಇಂತಹ ಒಬ್ಬ ಪೊಲೀಸ್ ಅಧಿಕಾರಿ ಮತ್ತೆ ಈ ದೇಶದಲ್ಲಿ ಹುಟ್ಟಿಬರುವುದು ಅಸಾಧ್ಯ ಎನ್ನುತ್ತಾರೆ ಹಲವರು.
ಸಾವಿಗೆ ಕಾರಣ ವೇನು:
ಆರೋಗ್ಯದ ತೊಂದರೆಯ ಹಿನ್ನೆಲೆಯಲ್ಲಿ ಡಿ.25ರಂದು ಮಧುಕರ್ ಶೆಟ್ಟಿ ಅವರನ್ನು ಹೈದರಾಬಾದ್‌ನ ಕಾಂಟಿನೆಂಟಲ್ ಆಸ್ಪತ್ರೆಗೆ ಸೇರುಸಲಾಗಿತ್ತು, ಆದರೆ, ಡಿ. 28ರಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಅವರ ಸಾವಿಗೆ ಹೆಚ್1ಎನ್1 ಕಾರಣ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದರು.
ಸಾವಿಗೆ ಈ ಆಸ್ವತ್ರೆ ಕಾರಣವಾಯಿತೇ:
ಮಧಕರಶೆಟ್ಟಿಯನ್ನು ಹಲವು ಸಮಯದ ವರೆಗೆ ಐಸಿಯುನಲ್ಲಿಟ್ಟು, ಆಸ್ಪತ್ರೆ ವೈದ್ಯರುಬ H1N1 ಅಂತಲೇ ಭಾವಿಸಿ ಚಿಕಿತ್ಸೆ ನೀಡಿದ್ದರು. ಈ ಮೂಲಕ ಹೃದಯ ಸಂಬಂಧಿ ಕಾಯಿಲೆಯು ಇವರಿಗೆ ಇತ್ತು ಆದರೆ ಖಾಯಿಲೆ ಯಾವುದೆಂದು ತ್ವರಿತವಾಗಿ ಪತ್ತೆ ಮಾಡದೇ ಇನ್ಯಾವುದೋ ಕಾಯಿಲೆಗೆ ಚಿಕಿತ್ಸೆ ಕೊಟ್ಟು ಜೀವ ಉಳಿಸಲು ಅಮೂಲ್ಯವಾಗಿದ್ದ ಸಮಯವನ್ನು ವ್ಯರ್ಥ ಮಾಡಿದ್ದರು. ಇದು ಅವರ ಸಂಬಂಧಿಕರಲ್ಲಿ ಭಾರೀ ಅನುಮಾನಕ್ಕೆ ಎಡೆ ಮಾಡಿಕೊಟ್ಟಿತ್ತು,ಈ ವಿಚಾರವಾಗಿ ನೈಜ ಪತ್ತೆಗೆ ಇನ್ನು ಪರಿಹಾರ ಸಿಕ್ಕಿಲ್ಲ.