Karnataka Times
Trending Stories, Viral News, Gossips & Everything in Kannada

Areca Farm: ಅಡಿಕೆ‌ತೋಟದಲ್ಲಿ ಕಳೆ ನಾಶಕ ಬಳಕೆ ಬೇಕಾ?ಇಲ್ಲಿದೆ ಅಸಲಿ ಸತ್ಯ

Advertisement

ಯಾವುದೇ ಕೃಷಿ (Agriculture) ಯನ್ನು ಮಾಡುವುದಾಗಿರಲಿ, ಅದಕ್ಕೆ ಅಷ್ಟೆ ರೈತನ ಪ್ರಯತ್ನ ಅಗತ್ಯ, ತನ್ನ ಕೃಷಿ ಯನ್ನು ಅಷ್ಟೆ ಪೋಷನೆ ಯಿಂದ ನೋಡಿಕೊಂಡರೆ ಮಾತ್ರ ಕೃಷಿಯ ಫಸಲು ಸಿಗುವುದು, ತಾನು ಮಾಡಿದ ತೋಟವನ್ನು ಮಗುವಿನಂತೆಯೇ ರೈತ ಪ್ರೀತಿಸಿ ಕಪಾಡಿ ಕೊಂಡು ಬರುತ್ತಾನೆ, ಮಗುವಿನಂತೆ ಆರೈಕೆ ಮಾಡುತ್ತಾನೆ, ಯಾವುದೇ ಕೃಷಿ ಅದರೂ ಅದಕ್ಕೆ ಸರಿಯಾದ ರಸಗೊಬ್ಬರ ನೀರು ಹಾಗೂ ಮತ್ತಿತರ ಅಗತ್ಯ ಸೌಲಭ್ಯಗಳನ್ನು ಒದಗಿಸಿ ಅಡಿಕೆ‌ ಗಿಡ ವನ್ನು ಪೋಷಿಸ ಬೇಕು,

ಹೆಚ್ಚಾಗಿ ಬಳಕೆ‌ಮಾಡ್ತಾರೆ

ತೋಟದಲ್ಲಿ ಅತಿಯಾದ ಕೀಟನಾಶಕಗಳನ್ನು ಹೆಚ್ಚಾಗಿ ಬಳಕೆ ಮಾಡುತ್ತಾರೆ, ಅತಿಯಾದ ಕಳೆ ನಾಶಕ, ರಾಸಾಯನಿಕ ಗೊಬ್ಬರಗಳನ್ನ ಹಾಕುವುದು ಹಾಗೆ ಅತಿಯಾಗಿ ನೀರನ್ನು ಹಾಕಿ ಪೋಷಿಸಿದರೆ ಬೆಳೆ ಉತ್ತಮ ವಾಗಿ ಬೆಳೆದು ಫಲ ಕೊಡುತ್ತದೆ ಎಂಬುದು‌ಕೆಲವರ ನಂಬಿಕೆ, ಅದರೆ ಕೃಷಿ ಎಂಬುದು ರಸಾಯನಿಕ ‌ಗೊಬ್ಬರ ಬಳಸದೇ ಸಾವಯವ ಗೊಬ್ಬರ ಬಳಕೆ ಮಾಡಿದರೆ ಮಾತ್ರ ಉತ್ತಮ‌ ಫಸಲು ಕೊಡಲು ಸಾಧ್ಯ.

ಕಳೆ ನಾಶಕ ಅಗತ್ಯವೇ?

ಅಡಿಕೆ ತೋಟದಲ್ಲಿ ಕೆಲವರು ಅನಗತ್ಯ ಕಾಳು, ಬೆಳೆ ಗಳನ್ನು ಬೆಳೆಯುತ್ತಾರೆ. ಇದನ್ನು ಕೈಯಿಂದ ಕಿತ್ತು ನಿಯಂತ್ರಣದಲ್ಲಿಡುವುದು ಕಷ್ಟ ಸಾಧ್ಯ, ಕೆಲವೊಮ್ಮೆ ‌ಇದಕ್ಕೆ ಮದ್ದು ಸಿಂಪಡಣೆ ಮಾಡುತ್ತಾರೆ, ಇನ್ನು ಇತರೆ ಬೆಳೆ ನಾಶಕ, ಅಥವಾ ತೋಟಕ್ಕೆ ಉತ್ತಮ ಪೋಷಕಾಂಶ ಬರಲು ಸೋಗೆ, ಗರಿ ಮುಚ್ಚುವುದರಿಂದ ಗಿಡಗಳಿಗೆ ನೀಡಿದ ಗೊಬ್ಬರದ ಅಂಶ ಕಡಿಮೆ ಆಗುವುದಿಲ್ಲ .ಇದ್ದ ಎಲೆ‌ ಮಣ್ಣು ಅಲ್ಲಿಯೇ ಕರಗಿ ಎರೆಹುಳುಗಳನ್ನು ಉತ್ಪತ್ತಿ ಮಾಡುತ್ತದೆ. ಮಣ್ಣು ಬರಡಾಗದೇ ಸದಾ ಫಲವತ್ತಾಗಿಡಲು ಇದು ಸಹಾಯ ಮಾಡುತ್ತದೆ, ಹೀಗಾಗಿ ಇತರೆ ಕಳೆ ಅಂಶಗಳನ್ನು‌ಹೋಗಲಾಡಿಸಲು ಕೂಡ ಸುಲಭ

ಇನ್ನು ಅಧಿಕ ಕಳೆ ಗಳು ಇದ್ದಾಗ ಅಡಿಕೆ ಗೆ ಹಾಕಿದ ನೀರು ಪೋಷಕಾಂಶಗಳನ್ನು ಇವುಗಳೇ‌ಹೀರಿ ಕೊಳ್ಳುತ್ತವೆ, ಅಡಿಕೆ ತೋಟದಲ್ಲಿ ಹೆಚ್ಚಿನ ಕಳೆ ಇದ್ದಾಗ ಇತರೆ ಯಾವುದೇ ತೋಟ ಕೆಲಸ ಮಾಡಲು ಕಷ್ಟ ಸಾಧ್ಯ ಎನಿಸುತ್ತದೆ, ಕಳೆಗಳನ್ನು ಹೋಗಲಾಡಿಸಲು‌ ಉಪಯುಕ್ತವಾದ ಬೆಳೆಗಳನ್ನು ನೀವು ಹಾಕಬಹುದಾಗಿದೆ, ಯಾವುದಾದರೂ ದಿದ್ವಳ ಧಾನ್ಯ ಬೆಳೆ ಮಾಡಬಹುದಾಗಿದೆ

Leave A Reply

Your email address will not be published.