Shashi Rekha: ಡೋಲೊ 650ಯ ಡೈಲಾಗ್ ಹೊಡೆದ ಶಶಿರೇಖಾ ಈಗ ದೊಡ್ಡ ಸ್ಟಾರ್! ಆದಾಯ ಇಲ್ಲಿದೆ

Advertisement
ಕೊರೋನಾ ಎಂದಾಗ ತಕ್ಷಣ ನೆನಪಾಗೊದು, ಡೋಲೋ 650 ಮಾತ್ರೆ ಮಾತ್ರವಲ್ಲ, ಪಟ ಪಟನೆ ಡೈಲಾಗ್ ಹೊಡೆದ ಶಶಿರೇಖಾ (Shashi Rekha) ನೆನಪಗ್ತಾರೆ, ಸರ್ಕಾರ ಬಡವರನ್ನು ಲಾಕ್‌ಡೌನ್ ಸಂದರ್ಭದಲ್ಲಿ ಹೇಗೆ ನೋಡಿದೆ ಎಂದು ಮಾಧ್ಯಮ (Media) ಮೂಲಕ ಧ್ವನಿ ಎತ್ತಿದ್ದರು, ಅವರ ಡೈಲಾಗ್ ಗಳು ಸೋಷಿಯಾಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದವು, ಈಗ ಮಾತ್ರ ಇವರು ದೊಡ್ಡ ಸ್ಟಾರ್ ಆಗಿದ್ದಾರೆ.
ಡೈಲಾಗ್ ಫೇಮಸ್:
ಡೋಲೊ 650 ಮಾತ್ರೆ, ಬಿಸಿ ರಾಗಿ ಹಿಟ್ಟು, ಕೊರೊನಾದೋರಿಗೆ ಅದೇಯಾ, ಎಂದು ಡೈಲಾಗ್ ಹೊಡೆದ ಮೈಸೂರಿನ ಶಶಿರೇಖಾ ಅವರ ವಿಡಿಯೊ ವೈರಲ್ ಆಗಿತ್ತು. ಎರಡನೇ ಅಲೆ ಬಂದು ಮೂರನೇ ಅಲೆ ಅಂದಾಗ ಹೊದವರ್ಷ ಎಲ್ಲಾ ಆಂಟಿದೀರ್ಗೆ ಬಂತು, ಈ ವರ್ಷ ಎಲ್ಲಾ ಹುಡುಗ್ರುಗೆ ಬಂತು, ಈಗ ಹೈಕ್ಲುಗೆ, ಆಮೇಲೆ ಎಲ್ಲಾ ಹೊಟ್ಟೆಯೊಳಗೆ ಇರುತ್ತಲ ಆ ಕೂಸ್ಗೆ ಅದು ನಾಲ್ಕನೇ ಅಲೆ, ಎಂದೂ ಹೇಳಿದ್ದರು. ವಿಡಿಯೊ ವೈರಲ್ ಆದ ಬಳಿಕ ಶಶಿರೇಖಾ ಅವರಂತೂ ಸಖತ್ ಪೇಮಸ್ಸ್ ಆದರು ಅನ್ನಬಹುದು.
ಈಗ ಸೋಷಿಯಲ್ ಮೀಡಿಯಾ ಸ್ಟಾರ್:
ಸಂಘ, ಸಂಸ್ಥೆ ಅವ್ರು, ಹಲವಾರು ವ್ಯಕ್ತಿಗಳು ಹುಡುಕಿಕೊಂಡು ಬಂದು ಶಶಿರೇಖಾ (Shashi Rekha) ಗೆ ಸಹಾಯ ಮಾಡಿದ್ದಾರೆ ಇವರು ಬಡ ಕುಟುಂಬದಿಂದ ಬಂದವರು, ಇವರ ಡೈಲಾಗ್ ಫೇಮಸ್ಸ್ ಆದ ನಂತರ ಸೋಷಿಯಲ್ ಮೀಡಿಯಾ ಬಳಕೆ ಮಾಡಲು ಆರಂಭಿಸಿದರು, ಈಗ ಅವರು ಹಿಂದೆ ವೈರಲ್ ಆದ ವಿಡಿಯೋಗೂ ಈಗ ಚಂದ ಮೆಕಪ್ ಮಾಡಿ ಸ್ಟೈಲಿಸ್ ಆಗಿ ಪೋಸ್ ಕೊಟ್ಟಿರುವ ವಿಡಿಯೋ ಸಖತ್ ವೈರಲ್ ಆಗಿದೆ, ಈಗ ಇವರು ಸೋಷಿಯಲ್ ಮಿಡಿಯಾದ ದೊಡ್ಡ ಸ್ಟಾರ್ ಅನ್ನಬಹುದು, ಈ ಮೂಲಕ ಇವರನ್ನು ಫಾಲೋ ಮಾಡುವ ಅಭಿಮಾನಿಗಳಿದ್ದು ಸೋಷಿಯಲ್ ಮೀಡಿಯಾದ ಮೂಲಕ ಹೆಚ್ಚು ಹಣ ಗಳಿಕೆ ಮಾಡುತ್ತಿದ್ದಾರೆ.
ಶಶಿರೇಖಾ ಟ್ರೋಲ್ ಆಗಿದ್ರಾ:
ಶಶಿರೇಖಾ ವಿಡಿಯೊ ತುಣುಕುಗಳು ಭಾರಿ ಟ್ರೋಲ್ ಗೆ ಕಾರಣವಾದವು. ಈ ಡೈಲಾಗ್ ಗೆ ಕೆಲವರು ಡ್ಯಾನ್ಸ್ ಮಾಡಿ ವಿಡಿಯೊ ಮಾಡಿದರು, ಕೆಲವರು ಕಾಲರ್ ಟ್ಯೂನ್ ಮಾಡಿಕೊಂಡರು, ಶಶಿರೇಖಾ ತರವೇ ಮಾತನಾಡಿ ವಿಡಿಯೊಗಳನ್ನು ಶೇರ್ ಮಾಡಿಕೊಂಡರು, ಹೀಗೆ ನಾನಾ ರೀತಿಯಲ್ಲಿ ಅವರನ್ನು, ಅವರ ಮಾತುಗಳನ್ನು ಹಲವಷ್ಟು ಜನರು ಟ್ರೋಲ್ ಮಾಡಿದರು. ಆದರೆ, ಇದಕ್ಕೆ ಧೈರ್ಯಗೆಡದ ಶಶಿರೇಖಾ ತಮ್ಮನ್ನು ಟ್ರೋಲ್ ಮಾಡುತ್ತಿರುವವರಿಗೆ ಸರೀಯಾಗಿಯೇ ಉತ್ತರಿಸಿದ್ದಾರೆ. ಇದರ ಮೂಲಕ ತಮ್ಮ ಧೈರ್ಯ ಏನು ಎಂಬುದನ್ನು ತೋರಿಸಿದ್ದಾರೆ.