Airtel Recharge Plan: ಮತ್ತೆ ವಾಪಸ್ ಬಂದಿದೆ ನೋಡಿ ಏರ್ಟೆಲ್ 49 ರೂಪಾಯಿ ರಿಚಾರ್ಜ್ ಪ್ಲಾನ್.

Advertisement
ಕಳೆದ ಸಾಕಷ್ಟು ವರ್ಷಗಳಿಂದಲೂ ಕೂಡ ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತಿ ಏರ್ಟೆಲ್ ಸಂಸ್ಥೆ ಗ್ರಾಹಕರಿಗೆ ಇಷ್ಟ ಆಗುವಂಥ ರೀಚಾರ್ಜ್ ಪ್ಲಾನ್ ಗಳನ್ನು ನೀಡುತ್ತಾ, ಟೆಲಿಕಾಂ ಕ್ಷೇತ್ರದಲ್ಲಿ ರಾಜನಂತೆ ಉಚಿತ ಬರುತ್ತಿದ್ದು ಈಗ ಮತ್ತೊಂದು ಹೊಸ ಯೋಜನೆಯ ಮೂಲಕ ತನ್ನ ಗ್ರಾಹಕರನ್ನು ಸೆಳೆಯುವಂತಹ ಪ್ರಯತ್ನವನ್ನು ಮಾಡುತ್ತಿದ್ದು ಬನ್ನಿ ಏರ್ಟೆಲ್ ನ ಹೊಸ ರಿಚಾರ್ಜ್ ಪ್ಲಾನ್(Airtel Recharge Plan) ಬಗ್ಗೆ ತಿಳಿದುಕೊಳ್ಳೋಣ.
ಹೌದು 49 ರೂಪಾಯಿಗಳ ರಿಚಾರ್ಜ್ ಪ್ಲಾನ್ ಅನ್ನು ನೀವು ಪ್ರಮುಖವಾಗಿ ಗಮನಿಸಬೇಕಾಗಿರುವುದು ಇಂಟರ್ನೆಟ್ ಹೆಚ್ಚು ಬೇಕಾಗಿರುವ ವಿಚಾರದಲ್ಲಿ ಎಂದು ಹೇಳಬಹುದಾಗಿದೆ. ಯಾಕೆಂದರೆ 49 ರೂಪಾಯಿಗಳ ರಿಚಾರ್ಜ್ ಪ್ಲಾನ್ ಕೇವಲ ಒಂದು ದಿನಕ್ಕಾಗಿ ಮಾತ್ರ ಹಾಗೂ ಇದರಲ್ಲಿ ನಿಮಗೆ 6 ಜಿಬಿ ಇಂಟರ್ನೆಟ್ ಡೇಟಾ ಸಿಗುತ್ತದೆ. ಇದರಲ್ಲಿ ನಿಮಗೆ ಪ್ರತ್ಯೇಕವಾಗಿ ಮೆಸೇಜ್ ಅಥವಾ ಕಾಲಿಂಗ್ ಮಾಡುವಂತಹ ಸೇವೆಯನ್ನು ನೀಡಲು ಸಾಧ್ಯವಿಲ್ಲ. ಒಂದು ಲೆಕ್ಕದಲ್ಲಿ ಹೇಳುವುದಾದರೆ ಇದೊಂದು ಹೆಚ್ಚುವರಿ ಇಂಟರ್ನೆಟ್ ಡೇಟಾ ರಿಚಾರ್ಜ್ ಪ್ಲಾನ್(Additional Data Recharge Plan) ಆಗಿದೆ ಎಂದು ಹೇಳಬಹುದಾಗಿದೆ.
ಯಾವಾಗ ನಿಮ್ಮ ಇಂಟರ್ನೆಟ್ ಖಾಲಿಯಾಗುತ್ತದೆಯೋ ಆಗ ಈ ರಿಚಾರ್ಜ್ ಪ್ಲಾನ್ ಅನ್ನು ಮಾಡಿದರೆ ನೀವು ಇಂಟರ್ನೆಟ್ ಸೇವೆಯನ್ನು ಬಳಸಬಹುದಾಗಿದ್ದು ಇದು ನಿಮ್ಮ ಸಾಮಾನ್ಯ ರಿಚಾರ್ಜ್ ಪ್ಲಾನ್ ಮುಗಿಯುವವರೆಗೂ ಕೂಡ ವ್ಯಾಲಿಡ್ ಆಗಿರುತ್ತದೆ. ಆಕ್ಟಿವ್ ರಿಚಾರ್ಜ್ ಪ್ಲಾನ್ ಇದ್ದಲ್ಲಿ ಮಾತ್ರ ನೀವು ಈ 49 ರೂಪಾಯಿಗಳ 6 ಜಿಬಿಯ ಇಂಟರ್ನೆಟ್ ಡೇಟಾ ಪ್ಯಾಕ್ ಅನ್ನು ಆನಂದಿಸಬಹುದಾಗಿದೆ. ಇದು ನಿಜಕ್ಕೂ ಕೂಡ ಕೆಲವೊಮ್ಮೆ ಇಂಟರ್ನೆಟ್ ಡೇಟಾ ಖಾಲಿಯಾದಾಗ ಅತ್ಯಂತ ಬೇಕಾಗಿರುವಂತಹ ರಿಚಾರ್ಜ್ ಪ್ಲಾನ್ ಆಗಿದ್ದು ಇಷ್ಟೊಂದು ಕಡಿಮೆ ಬೆಲೆಗೆ ಸಿಗ್ತಾ ಇರೋದು ಕೂಡ ಏರ್ಟೆಲ್ ಗ್ರಾಹಕರಿಗೆ ಇನ್ನಷ್ಟು ಸಂತೋಷ ಕೊಡುವ ವಿಚಾರ ಎಂದು ಹೇಳಬಹುದಾಗಿದೆ.
Airtel ತನ್ನ ರಿಚಾರ್ಜ್ ಪ್ಲಾನ್ ಗಳ ಪೋರ್ಟ್ಫೋಲಿಯೋದಲ್ಲಿ ಅಪ್ಡೇಟ್ ಮಾಡಿರುವಂತಹ ಸಾಕಷ್ಟು ಅತ್ಯಂತ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಗಳಲ್ಲಿ ಇದು ಕೂಡ ಒಂದಾಗಿದ್ದು ವಿಶೇಷವಾಗಿ ಇಂಟರ್ನೆಟ್ ಡೇಟಾ ವಿಚಾರದಲ್ಲಿ ಇದನ್ನು ಟಾಪ್ ರಿಚಾರ್ಜ್ ಪ್ಲಾನ್ ಎಂದು ಹೇಳಬಹುದಾಗಿದೆ. ಇದಕ್ಕಿಂತಲೂ ಕಡಿಮೆ ರಿಚಾರ್ಜ್ ಪ್ಲಾನ್ ಬಗ್ಗೆ ಮಾತನಾಡುವುದಾದರೆ 19 ರೂಪಾಯಿಗೆ ಒಂದು ದಿನಗಳ ವ್ಯಾಲಿಡಿಟಿಯಲ್ಲಿ 1 ಜಿಬಿ ಹಾಗೂ 29 ರೂಪಾಯಿ ಗಳಿಗೆ ಕೂಡ ಒಂದು ದಿನದ ವ್ಯಾಲಿಡಿಟಿಯಲ್ಲಿ 2 ಜಿಬಿ ಇಂಟರ್ನೆಟ್ ಡೇಟಾ ಸಿಗುತ್ತದೆ.