ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಮಾತೊಂದಿದೆ, ಮಕ್ಕಳಿಗೆ ಸಣ್ಣ ವಯಸ್ಸಿನಿಂದಲೇ ಪೋಷಕರು ಪ್ರೋತ್ಸಾಹ ನೀಡಬೇಕಿದೆ, ಮಕ್ಕಳು ತಪ್ಪು ಮಾಡಿದ್ದರು ಕೂಡ ಅವರ ತಪ್ಪನ್ನು ಕ್ಷಮಿಸಿ ಮುಂದೆ ತಪ್ಪು ಮಾಡದಂತೆ ಕ್ರಮ ಕೈ ಗೊಳ್ಳ ಬೇಕು, ಅದೇ ರೀತಿ ಮಕ್ಕಳು ಶಿಕ್ಷಣ ದಲ್ಲಿ ಮುಂದೆ ಇಲ್ಲ ಎಂದು ಸರಿಯಾಗಿ ಓದುದಿಲ್ಲ ಹೀಗೆ ನಾನಾ ಕಾರಣ ಹೇಳಿ ಪೋಷಕರು ಮಕ್ಕಳಿಗೆ ಬೈಯುದಿದೆ, ಅದರೆ ಆ ಓದುವಿಕೆಯನ್ನು ತಿದ್ದಿ ಸರಿಯಾಗಿ ಬೆಂಬಲ ಸೂಚಿಸಿದರೆ ಮಾತ್ರ ಮಕ್ಕಳುಕೂಡ ಉತ್ತಮ ಅಂಕ ತೆಗೆಯಲು ಸಾಧ್ಯ, ಇದಕ್ಕೆ ಉದಾಹರಣೆ ಎಂಬಂತೆ ತಾಯಿ ಯೊಬ್ಬರು ತನ್ನ ಮಗಳ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿದ್ದರು ಹೊಗಳಿರುವ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಗಣೆತದಲ್ಲಿ ಕಡಿಮೆ ಅಂಕ ಬಂದಿದ್ದರೂ ಪ್ರೋತ್ಸಾಹ ಮಾತು:
ಉತ್ತರ ಪತ್ರಿಕೆ (Answer Sheet) ಯಲ್ಲಿ ಪೋಷಕರ ಸಹಿ ಹಾಕಲು ಇರುತ್ತದೆ, ಹಿಂದೆಲ್ಲ ಕಡಿಮೆ ಅಂಕ ಬಂದಾಗ ಸಹಿ ಹಾಕಿಸಿ ಕೊಳ್ಳಲು ಮಕ್ಕಳು ತುಂಬ ಹೆದರುತ್ತಿದ್ದರು, ಇಲ್ಲೊಬ್ಬ ತಾಯಿ ತನ್ನ ಮಗಳಿಗೆ ಗಣಿತದಲ್ಲಿ ಕಡಿಮೆ ಅಂಕಗಳಿದ್ದರೂ ಉತ್ತರ ಪತ್ರಿಕೆಯಲ್ಲಿ ಪ್ರೋತ್ಸಾಹದ ಪದಗಳನ್ನು ಬರೆದಿದ್ದಾರೆ, ಮಕ್ಕಳಿಗೆ ಬೈದು ಕೆಟ್ಟ ಮನಸ್ಸಿನೊಂದಿಗೆ ಸಹಿ ಹಾಕುವುದು ತಪ್ಪು, ಈ ಅಂಕಗಳಿಗೆ ಸಹಿ ಹಾಕುವುದನ್ನು ಪ್ರೀತಿಸುತ್ತೇನೆ ಎಂದಿದ್ದಾರೆ
ಏನು ಹೇಳಿದ್ದಾರೆ:
ಈ ಫಲಿತಾಂಶವನ್ನು ಪಡೆಯಲು ಧೈರ್ಯವಿದೆ ಎಂದು ಅವರ ತಾಯಿ ಬರೆದಿದ್ದಾರೆ. ಈ ಮೂಲಕ ಟ್ವೀಟ್‌ನಲ್ಲಿ ಗಣಿತವನ್ನು ಅಧ್ಯಯನ ಮಾಡುವುದನ್ನು ಮತ್ತಷ್ಟು ಮುಂದುವರೆಸಿದ್ದೇನೆ, ಮತ್ತು ಅದನ್ನು ಎ ಹಂತ ಬರುವವರೆಗೆ ಪ್ರಯತ್ನಿಸಿದೆ, ಈಗ ಉತ್ತಮ ಅಂಕಗಳನ್ನು ಪಡೆದಿದ್ದೇನೆ ನಿಮ್ಮ ಮಗುವನ್ನು ಫೇಲ್ ಆಗಿದ್ದಕ್ಕಾಗಿ ನೀವು ಅವಮಾನಿಸುವುದು ತಪ್ಪು ಎಂದಿದ್ದಾರೆ.
found my grade 6 math notebook and love how precious mother was signing every bad test with an encouraging note for me! pic.twitter.com/AEJc3tUQon
— zainab (Taylor’s version) (@zaibannn) August 25, 2023
ಸಕರಾತ್ಮಕ ಕಾಮೆಂಟ್:
ಇದನ್ನು ಪೋಸ್ಟ್ ಮಾಡಿದ ನಂತರ, ನೆಟ್ಟಿಗರ ಸಕಾರಾತ್ಮಕ ಕಾಮೆಂಟ್‌ಗಳ ಸುರಿ ಮಳೆ ಗೈದಿದ್ದಾರೆ, ಇದು ಅಮೂಲ್ಯ ಮಾತು ಎಂದು ಕಾಮೆಂಟ್ ಮಾಡಿದ್ದಾರೆ, ಇದು ತುಂಬಾ ಮುದ್ದಾಗಿದೆ, ಮಕ್ಕಳ ಶಿಕ್ಷಣಕ್ಕೆ ಹೀಗೆ ಒತ್ತು ನೀಡಬೇಕು ಪ್ರೋತ್ಸಾಹ ನೀಡಬೇಕು ಎಂದಿದ್ದಾರೆ.