Karnataka Times
Trending Stories, Viral News, Gossips & Everything in Kannada

Property Rules: ಕಾನೂನಿನ ಪ್ರಕಾರ ಭಾರತದಲ್ಲಿ ಒಬ್ಬ ವ್ಯಕ್ತಿ ಎಷ್ಟು ಜಮೀನನ್ನು ಮಾತ್ರ ಖರೀದಿಸಲು ಸಾಧ್ಯ?

Advertisement

ಪ್ರತಿಯೊಬ್ಬ ವ್ಯಕ್ತಿ ಕೂಡ ತಾನು ದುಡಿದಿರುವಂತಹ ಹಣದಿಂದ ತನ್ನ ಮುಂದಿನ ಭವಿಷ್ಯಕ್ಕಾಗಿ ಅಥವಾ ತನ್ನ ಹೆಂಡತಿ ಮಕ್ಕಳ ಭವಿಷ್ಯಕ್ಕಾಗಿ ಅದನ್ನು ನೀಡುವ ರೀತಿಯಲ್ಲಿ ಹೂಡಿಕೆ ಮಾಡಬೇಕು ಎನ್ನುವಂತಹ ಆಸೆಯನ್ನು ಹೊಂದಿರುತ್ತಾನೆ. ಆ ರೀತಿಯಲ್ಲಿ ಯೋಚನೆ ಮಾಡಿದಾಗ ಕಣ್ಣ ಮುಂದೆ ಬರುವಂತಹ ಆಯ್ಕೆಗಳು ಎರಡೇ ಎರಡು ಎಂದು ಹೇಳಬಹುದು. ಮೊದಲನೇದಾಗಿ ಚಿನ್ನದ ಮೇಲೆ ಹೂಡಿಕೆ(Gold Investment) ಮಾಡುವುದು ಹಾಗೂ ಎರಡನೆಯದಾಗಿ ಭೂಮಿಯ ಮೇಲೆ ಹೂಡಿಕೆ(Investment On Land) ಮಾಡುವುದು. ಚಿನ್ನವನ್ನು ಖರೀದಿಸಿದ್ರು ಕೂಡ ಮುಂದಿನ ದಿನಗಳಲ್ಲಿ ನಿಮಗೆ ಕಷ್ಟ ಬಂದಾಗ ಅದನ್ನು ಮಾರಾಟ ಮಾಡಿ ನೀವು ನಿಮ್ಮ ಆರ್ಥಿಕ ಸಂಕಷ್ಟಗಳನ್ನು ದೂರ ಮಾಡಬಹುದು ಹಾಗೂ ಜಮೀನನ್ನು ಖರೀದಿಸಿದ್ರು ಕೂಡ ಅದಕ್ಕೆ ಇರುವಂತಹ ಬೆಲೆಗೆ ಖಂಡಿತವಾಗಿ ಮುಂದಿನ ದಿನಗಳಲ್ಲಿ ನೀವು ಸುಲಭವಾಗಿ ಜೀವಿಸಬಹುದು ಹಾಗೂ ನಿಮ್ಮವರು ಕೂಡ ನಿಮ್ಮ ಮೇಲೆ ಭರವಸೆಯನ್ನು ಇಟ್ಟುಕೊಳ್ಳಬಹುದು.

ಆದರೆ ನೀವು ತಿಳಿದುಕೊಳ್ಳಬೇಕಾಗಿರುವ ಮತ್ತೊಂದು ವಿಚಾರ ಏನಂದ್ರೆ ಕೃಷಿ ಭೂಮಿಯನ್ನು ಯಾರು ಬೇಕಾದರೂ ಕೂಡ ಖರೀದಿಸಲು ಸಾಧ್ಯವಿಲ್ಲ ಹಾಗೂ ಎಷ್ಟು ಬೇಕಾದರೂ ಖರೀದಿಸುವಂತಹ ನಿಯಮ ಇಲ್ಲ. ಹಾಗಿದ್ರೆ ಬನ್ನಿ ಭೂಮಿಯನ್ನು ಖರೀದಿಸಲು ಇರುವಂತಹ ನಿಯಮಗಳ ಬಗ್ಗೆ ಹಾಗೂ ಲಿಮಿಟ್(Land Buying Limit In India) ಎಷ್ಟು ಎಂಬುದನ್ನು ತಿಳಿಯೋಣ. ಭೂಮಿ ಖರೀದಿಸುವಂತಹ ನಿಯಮವನ್ನು ರಾಜ್ಯಗಳ ನಿರ್ಧಾರ ಮಾಡಿಕೊಂಡಿರುವ ಕಾರಣದಿಂದಾಗಿ ಭಾರತ ದೇಶದಲ್ಲಿ ಬೇರೆ ಬೇರೆ ರಾಜ್ಯದಲ್ಲಿ ಭೂಮಿ ಖರೀದಿ ಮಾಡುವಂತಹ ಲಿಮಿಟ್ ಬಗ್ಗೆ ಬೇರೆ ಬೇರೆ ನಿಯಮಗಳಿವೆ.

ಕೃಷಿ ಭೂಮಿಯನ್ನು ಖರೀದಿಸುವಂತಹ ಕೆಲವೊಂದು ನಿಯಮಗಳು ರಾಷ್ಟ್ರೀಕೃತಗೊಂಡಿದ್ದರೆ ಕೆಲವೊಂದು ರಾಜ್ಯಕ್ಕೆ ಸೀಮಿತವಾಗಿದ್ದು ಬನ್ನಿ ಯಾವ ಯಾವ ರಾಜ್ಯಗಳಲ್ಲಿ ಯಾವ ಯಾವ ರೀತಿಯ ಕಾನೂನುಗಳಿವೆ ಎಂಬುದನ್ನು ತಿಳಿಯೋಣ. ಕೇರಳದ ಭೂ ಕಾಯ್ದೆ ನಿಯಮ 1963ರ ಪ್ರಕಾರ ವಿವಾಹಿತ ವ್ಯಕ್ತಿ ಕೇವಲ 7.5 ಎಕರೆ ಭೂಮಿಯನ್ನು ಖರೀದಿಸಬಹುದು. ಐದು ಸದಸ್ಯರ ಕುಟುಂಬ ಹೆಚ್ಚೆಂದರೆ 15 ಎಕರೆ ಭೂಮಿಯನ್ನು ಖರೀದಿಸಬಹುದು. ಮಹಾರಾಷ್ಟ್ರದಲ್ಲಿ ಕೇವಲ ಮೊದಲಿನಿಂದಲೂ ಕೃಷಿ ಮಾಡಿಕೊಂಡು ಬಂದಿರುವ ಕುಟುಂಬಗಳಿಗೆ ಮಾತ್ರ ಕೃಷಿ ಭೂಮಿಯನ್ನು ಖರೀದಿಸುವ ಅರ್ಹತೆ ಇದೆ. ಹೆಚ್ಚೆಂದರೆ 54 ಎಕರೆ ಪಶ್ಚಿಮ ಬಂಗಾಳದಲ್ಲಿ 24.5 ಎಕರೆ ಹಿಮಾಚಲದಲ್ಲಿ 32 ಎಕರೆ ಕರ್ನಾಟಕದಲ್ಲಿ 54 ಎಕರೆ ಉತ್ತರ ಪ್ರದೇಶದಲ್ಲಿ 12.5 ಎಕರೆ ಕೃಷಿ ಯೋಗ್ಯ ಭೂಮಿಯನ್ನು ಖರೀದಿಸುವಂತಹ ಲಿಮಿಟ್ ಅನ್ನು ವಿಧಿಸಲಾಗಿದೆ. ಬಿಹಾರದಲ್ಲಿ 15 ಎಕರೆವರೆಗೆ ಕೃಷಿ ಹೊರೆತುಪಡಿಸಿ ಇರುವಂತಹ ಭೂಮಿಯನ್ನು ಖರೀದಿಸುವ ಅರ್ಹತೆಯನ್ನು ನೀಡಲಾಗಿದೆ.

NRI ಹಾಗೂ ವಿದೇಶಿ ವ್ಯಕ್ತಿಗಳು ಭಾರತ ದೇಶದಲ್ಲಿ ಬಂದು ಯಾವುದೇ ಕಾರಣಕ್ಕೂ ಕೂಡ ಈ ಭೂಮಿಯನ್ನು ಖರೀದಿಸಲು ಸಾಧ್ಯವಿಲ್ಲ ಎಂಬ ನಿಯಮಗಳನ್ನು ಕೂಡ ಅಳವಡಿಸಲಾಗಿದೆ. ಆದರೆ ಅವರಿಗೆ ಭಾರತೀಯರು ಉಡುಗೊರೆಯ ರೂಪದಲ್ಲಿ ನೀಡಬಹುದಾಗಿದೆ ಎನ್ನುವಂತಹ ನಿಯಮ ಕೂಡ ಇದೆ.

Leave A Reply

Your email address will not be published.