Karnataka Times
Trending Stories, Viral News, Gossips & Everything in Kannada

Delhi Lockdown: ದೆಹಲಿಯಲ್ಲಿ ಮೂರು ದಿನಗಳ ಲಾಕ್ಡೌನ್! ನಿಜಕ್ಕೂ ಆಗಿದ್ದೇನು?

ಈಗಾಗಲೇ ನಿಮಗೆ ತಿಳಿದಿರಬಹುದು ಮುಂದಿನ ತಿಂಗಳು ಅಂದರೆ ಸೆಪ್ಟೆಂಬರ್ 8 ರಿಂದ 10 ನೇ ತಾರೀಖಿನವರೆಗೆ ದೆಹಲಿಯಲ್ಲಿ G20 ಶೃಂಗ ಸಭೆಯನ್ನು ಆಯೋಜಿಸಲಾಗಿದೆ. ಇದೇ ಕಾರಣಕ್ಕಾಗಿ ದೆಹಲಿಯಲ್ಲಿ ಸಾಕಷ್ಟು ಸುರಕ್ಷತಾ ಕ್ರಮಗಳಿಗಾಗಿ ಮೂರು ದಿನಗಳ ಕಾಲ ಬಹುಶಹ ಲಾಕ್ ಡೌನ್(Lockdown) ಮಾದರಿಯ ಕಠಿಣ ಕ್ರಮಗಳನ್ನು ಸುರಕ್ಷತೆಯ ದೃಷ್ಟಿಯಿಂದ ದೆಹಲಿಯಲ್ಲಿ ನಿರ್ಮಿಸಬಹುದಾಗಿದೆ ಎಂಬುದಾಗಿ ಅಂದಾಜು ಮಾಡಲಾಗಿದೆ. ಯಾಕೆಂದರೆ G20 ನಲ್ಲಿರುವಂತಹ 19 ಯುರೋಪಿಯನ್ ದೇಶಗಳ ಅಧ್ಯಕ್ಷರು ಕೂಡ ಆಗಮಿಸುತ್ತಿದ್ದಾರೆ ಎನ್ನುವುದನ್ನು ನೀವು ಈ ಸಂದರ್ಭದಲ್ಲಿ ಗಮನಿಸಬೇಕು. ಇದಕ್ಕಾಗಿ ದೆಹಲಿಯಲ್ಲಿ ಈ ಮೂರು ದಿನಗಳ ಕಾಲ ಲಾಕ್ ಡೌನ್ ಮಾಡಲಾಗುತ್ತಿದ್ದು ಬನ್ನಿ ಈ ಸಂದರ್ಭದಲ್ಲಿ ಏನೆಲ್ಲಾ ಇರುತ್ತೆ ಅಥವಾ ಏನೆಲ್ಲಾ ಇರಲ್ಲ ಯಾವ ರೀತಿಯ ನಿಯಮಗಳನ್ನು ಪಾಲನೆ ಮಾಡಬೇಕು ಎನ್ನುವಂತಹ ಮಾಹಿತಿಯನ್ನು ಪಡೆಯೋಣ.

Advertisement

ಮೊದಲಿಗೆ ತಿಳಿದುಕೊಳ್ಳಬೇಕಾಗಿರುವುದು ಕಚೇರಿಗಳು ಎಲ್ಲವೂ ಕೂಡ ಮುಚ್ಚಿದೆಯೇ ಅನ್ನೋದರ ಬಗ್ಗೆ. ಈ ಸಂದರ್ಭದಲ್ಲಿ ಬರುವಂತಹ ವಿದೇಶಿ ಅತಿಥಿಗಳ ಸುರಕ್ಷತೆ ಅತ್ಯಂತ ಪ್ರಮುಖವಾಗಿರುತ್ತದೆ ಎನ್ನುವ ಕಾರಣಕ್ಕಾಗಿ ಹಾಗೂ ಕಚೇರಿಗಳನ್ನು ತೆರೆದಿಟ್ಟರೆ ಅಲ್ಲಿಗೆ ಹೋಗುವಂತಹ ಜನರ ಸಂಖ್ಯೆ ಹೆಚ್ಚಾಗಿರುತ್ತದೆ ಹಾಗೂ ಸಂಚಾರಿ ವ್ಯವಸ್ಥೆ(Traffic System) ಕೂಡ ಅಷ್ಟೇ ವಿಸ್ತವಾಗುತ್ತದೆ ಎನ್ನುವ ಕಾರಣಕ್ಕಾಗಿಯೇ ಮೂರು ದಿನಗಳ ಕಾಲ ಮನೆಯಿಂದಲೇ ಕುಳಿತು ಕೆಲಸ ಮಾಡುವಂತಹ ಯೋಜನೆಯನ್ನು ಜಾರಿಗೆ ತಂದಿದ್ದು ಕಚೇರಿಗಳನ್ನು ಮುಚ್ಚುವಂತೆ ಆದೇಶ ಮಾಡಿದೆ. ಇನ್ನು ಪ್ರತಿಯೊಂದು ಸರ್ಕಾರಿ ಹಾಗೂ ಪ್ರೈವೇಟ್ ಸ್ಕೂಲ್ ಗಳನ್ನು ಕೂಡ ಎಂಟು ಒಂಬತ್ತು ಹಾಗೂ 10ನೇ ತಾರೀಕಿನಂದು ಮುಚ್ಚಲು ಹೇಳಲಾಗಿದೆ.

Advertisement

ಎಂಟನೇ ತಾರೀಖಿನಂದು ಶುಕ್ರವಾರ ಇರುತ್ತದೆ ಹಾಗೂ ಒಂಬತ್ತು ಮತ್ತು 10ನೇ ತಾರೀಖಿನಂದು ವಾರದ ಇರುವ ಕಾರಣಕ್ಕಾಗಿ ಹೇಗೂ ರಜೆ ಇರುತ್ತದೆ. ದೆಹಲಿಯ ರಸ್ತೆಗಳಲ್ಲಿ ಎಂಟರಿಂದ 10ನೇ ತಾರೀಖಿನವರೆಗೆ ಕೇವಲ ಅವಶ್ಯಕವಾಗಿರುವಂತಹ ವಾಹನಗಳನ್ನು ಮಾತ್ರ ಓಡಾಟಕ್ಕೆ ಅನುಮತಿ ನೀಡಲಾಗಿದೆ. ಮೆಡಿಕಲ್ ಎಮರ್ಜೆನ್ಸಿಯನ್ನು ಬಿಟ್ಟು ಬೇರೆ ಯಾವುದೇ ಕಾರಣಕ್ಕೆ ಕೂಡ ದೆಹಲಿಯ ರೋಡುಗಳಲ್ಲಿ ಇಳಿಯುವಂತಿಲ್ಲ ಎಂಬುದನ್ನು ಕೂಡ ಈಗಾಗಲೇ ಸೂಚಿಸಲಾಗಿದೆ. ಹೀಗಾಗಿ ಯಾವುದೇ ದೂರದ ಸ್ಥಳಗಳಿಗೆ ಹೋಗಬೇಕೆಂದರು ಕೂಡ ದೆಹಲಿ ಮೆಟ್ರೋವನ್ನು(Delhi Metro) ಮಾತ್ರ ನೀವು ಅತ್ಯಂತ ಭರವಸೆಯ ದಾರಿ ಎಂಬುದನ್ನು ತಿಳಿದುಕೊಳ್ಳಬೇಕಾಗಿರುತ್ತದೆ. ಈ ಮೂರು ದಿನಗಳ ಕಾಲ ಜನಜಂಗುಳಿ ಹೆಚ್ಚಾಗಿರುವಂತಹ ಬ್ಯಾಂಕ್ ಹಾಗೂ ಮಾಲ್ ಮತ್ತು ಅಂಗಡಿ ಮುಂಗಟ್ಟುಗಳನ್ನು ಕೂಡ ಮುಚ್ಚುವಂತಹ ಆದೇಶವನ್ನು ನೀಡಲಾಗಿದೆ.

Advertisement

ಇನ್ನು ನೀವು ಅಗತ್ಯ ವಸ್ತುಗಳು ಬೇಕು ಅಂದ್ರೆ ಅಂಗಡಿ ಮುಂಗಟ್ಟುಗಳು ಬಂದ್ ಆಗಿರುತ್ತವೆ ಹೇಗೆ ತೆಗೆದುಕೊಳ್ಳುವುದು ಎನ್ನುವುದಾಗಿ ಯೋಚಿಸುತ್ತಿದ್ದರೆ ದೆಹಲಿಯ ಜನರು ಅರ್ಥಮಾಡಿಕೊಳ್ಳಬೇಕಾಗಿರುವುದು ಏನೆಂದರೆ ಅತ್ಯಂತ ಅವಶ್ಯಕವಾಗಿ ಬೇಕಾಗಿರುವಂತಹ ಆಹಾರ ವಸ್ತುಗಳು ಹಾಗೂ ಹಾಲು ತರಕಾರಿಗಳ ಅಂಗಡಿಗಳು ಓಪನ್ ಇರುತ್ತವೆ ಆದರೆ ಕೇವಲ ಅಗತ್ಯ ಇಲ್ಲದ ಚಟುವಟಿಕೆಗಳನ್ನು ಮಾತ್ರ ಈ ಸಂದರ್ಭದಲ್ಲಿ ನಿರ್ಬಂಧಿಸಲಾಗಿದೆ ಎಂದು ಹೇಳಬಹುದಾಗಿದೆ. ಈ ಬಾರಿ ನಮ್ಮ ದೇಶದ ರಾಜಧಾನಿಯಲ್ಲಿ ನಡೆಯಲಿರುವ G20 ಶೃಂಗಸಭೆ ಸಾಕಷ್ಟು ವಿಚಾರಗಳಲ್ಲಿ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸಿದ್ದು ಎಲ್ಲರ ದೃಷ್ಟಿ ಕೂಡ ಈ ಸಭೆಯತ್ತ ನೆಟ್ಟಿದೆ ಎಂದು ಹೇಳಬಹುದು.

Leave A Reply

Your email address will not be published.