Gold Price: ಭರ್ಜರಿ ಇಳಿಕೆ ಕಂಡ ಚಿನ್ನದ ಬೆಲೆ, ಇಲ್ಲಿದೆ ದರ

Advertisement
ಸಂಕಷ್ಟದ ಸಮಯ ಬಂತೆಂದಾಗ ಮೊದಲು ನೆನಪಾಗೋದು ಕೂಡಿಟ್ಟ ಹೊನ್ನು ಅಂದರೆ ಅದು ಚಿನ್ನ (Gold) ಇಂದು ಚಿನ್ನವೆಂಬುದು ಮಹಿಳೆಯರ ಅಲಂಕಾರದ ಆಭರಣ ಮಾತ್ರ ಆಗಿರದೇ ತೀರ ಅಗತ್ಯವೆಂದಾಗ ತತ್ ಕ್ಷಣ ನೆರವಾಗುವ ಒಂದು ರೀತಿಯ ವರಮಾನವಾಗಿದೆ. ಹಬ್ಬಗಳು, ಮದುವೆ ಸೀಸನ್ ಇನ್ನಿತರ ಕಾರ್ಯಕ್ರಮಗಳ ನಡುವೆ ಚಿನ್ನದ ದರವು ಗಗನಕ್ಕೆ ಮುಟ್ಟಿದ್ದು ಇದೀಗ ದರ ಕಡಿಮೆಯಾಗೋ ಮೂಲಕ ಜನಸಾಮಾನ್ಯರು ನಿಟ್ಟುಸಿರು ಬಿಡುವಂತಾಗಿದೆ.
ಪ್ರಸ್ತುತ ಸ್ಥಿತಿ ಏನು?
ಚಿನ್ನದ ಮಾರಾಟದಲ್ಲಿ ಬೆಲೆಯ ಆಧಾರದಲ್ಲಿ ಆಗಾಗ ಬದಲಾಗುವುದು ಸಾಮಾನ್ಯವಾಗಿದ್ದು ಇದೀಗ ಬೆಲೆ ಕಡಿಮೆಯಾಗಿದ್ದು ಬಹುತೇಕ ಮಧ್ಯಮವರ್ಗದವರು ಖುಷಿಪಡುತ್ತಿದ್ದಾರೆ. ಸದ್ಯ ಮಾರುಕಟ್ಟೆಯಲ್ಲಿ 24ಕ್ಯಾರಟ್ (24 Carat) ಬಂಗಾರದ ಬೆಲೆಯು ಕಡಿಮೆಯಾಗಿದೆ. ಮಾ. 28ರಂದು ಬಂಗಾರದ ಬೆಲೆಯು 5, 969 ರೂ. ಇದ್ದದ್ದು ಇದೀಗ 5, 945ರೂ.ಗೆ ಬಂದು ತಲುಪಿದೆ. ಈ ಮೂಲಕ ಅಪರಂಜಿ ಚಿನ್ನವು ಗ್ರಾಂ ಮೇಲೆ 24ರೂ. ಇಳಿಕೆ ಕಂಡಿದೆ. ಈ ಮೂಲಕ ಬೆಂಗಳೂರಿನಲ್ಲಿ 10ಗ್ರಾಂ ಚಿನ್ನಕ್ಕೆ ಹಿಂದಿನ ದಿನದಲ್ಲಿ (ಮಾ.28) ರಂದು 54,800 ಬೆಲೆ ನೀಡುಬೇಕಿತ್ತು ಆದರೆ ಈಗ 250ರೂ. ನಂತೆ ಮಹಾ ಉಳಿತಾಯ ಸಿಗಲಿದ್ದು ಈ ಮೂಲಕ 54,550 ಹಣ ಪಾವತಿಸಿದರೆ 10 ಗ್ರಾಂ ಚಿನ್ನವನ್ನು ನೀವು ಖರೀದಿಮಾಡಬಹುದು.
ವಿವಿಧ ಪ್ರದೇಶದ ಬೆಲೆ:
ದೇಶದಲ್ಲಿ Gold Price ಯಲ್ಲಿ ವ್ಯತ್ಯಾಸವಿದೆ:
ಕೊಲ್ಕತ್ತಾ , ಹೈದರಾಬಾದ್ ನಲ್ಲಿ 10ಗ್ರಾಂ 22 ಕ್ಯಾರಟ್ ಚಿನ್ನಕ್ಕೆ 54,500 ಹಾಗೂ 24ಕ್ಯಾರಟ್ ಚಿನ್ನಕ್ಕೆ 59, 450ರೂ.ಯಾಗಿದೆ. ಅದೇ ರೀತಿ ಚಿನ್ನಕ್ಕೆ ದೇಹಲಿಯಲ್ಲಿ 10ಗ್ರಾಂ 22ಕ್ಯಾರಟ್ ಚಿನ್ನಕ್ಕೆ 54,650ರೂ. ಹಾಗೂ 24 ಕ್ಯಾರಟ್ ಗೆ 59,600ರೂ. ಹಾಗೂ ಚೆನೈನಲ್ಲಿ 22ಕ್ಯಾರಟ್ 10ಗ್ರಾಂ ಚಿನ್ನಕ್ಕೆ 55, 100ರೂ.24ಕ್ಯಾರಟ್ ಗೆ 60, 110ರೂ. ಎಂದು ತಿಳಿದುಬಂದಿದೆ.
ಹೇಗಿದೆ Silver Price:
ಚಿನ್ನದ ದರದಂತೆ ಬೆಳ್ಳಿದರದಲ್ಲೂ ಇಳಿಕೆಯಾಗಿದ್ದು ಖರೀದಿದಾರರಿಗೆ ಮಹಾ ಉಳಿತಾಯವಾಗಲಿದೆ. ಈ ಮೂಲಕ ಮಾ. 28ರಂದು ಬೆಳ್ಳಿದರ (Silver) ಕೆಜಿಗೆ 73,300ರೂ. ಇದ್ದದ್ದು ಇದೀಗ ಮಾ. 29ರಂದು 73,000ರೂ. ಯಂತೆ ದರ ನಿಗಧಿಸಲಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಮಾ. 28ರಂದು ಕೆಜಿಗೆ 76, 000ರೂ. ಇದ್ದ ಬೆಳ್ಳಿದರವು 75,700ನಂತೆ ಮಾ. 29ರಂದು ಮಾರಾಟ ಮಾಡಲಾಗುತ್ತಿದೆ. ಕೊಲ್ಕತ್ತಾ, ನವದೆಹಲಿ, ಮುಂಬೈನಲ್ಲಿ ಒಂದು ಕೆಜಿ ಶುದ್ಧ ಬೆಳ್ಳಿದರ 73,000 ವಾಗಿದ್ದು ಚೆನೈ ಮತ್ತು ಹೈದರಾಬಾದ್ ನಲ್ಲಿ ಕೆಜಿ ಬೆಳ್ಳಿಗೆ 75,700ರೂ. ಗೆ ಮಾರಾಟ ಮಾಡಲಾಗುತ್ತಿದೆ. ಈ ಮೂಲಕ ಚಿನ್ನ ಮತ್ತು ಬೆಳ್ಳಿಯ ದರ ಕಡಿಮೆಯಾಗಿದ್ದು ಗ್ರಾಹಕರ ದೊಡ್ಡ ಖುಷಿಗೆ ಕಾರಣ ವಾದ ವಿಚಾರ ಎನ್ನಬಹುದು.