ಬಹುಶಃ ಕರೋನಾ ಸಮಯದ ನಂತರ ಸಾಕಷ್ಟು ಜನ ನಗರ ಪ್ರದೇಶಗಳಲ್ಲಿ ಕೆಲಸ ಮಾಡೋದನ್ನೂ ಬಿಟ್ಟು ಹಳ್ಳಿಗೆ ಹೋಗಿ ಕೃಷಿ ಮಾಡುವುದಕ್ಕೂ ಕೂಡ ಮುಂದಾಗಿದ್ದಾರೆ ನೀವು ಸರಿಯಾದ ರೀತಿಯಲ್ಲಿ ಕೃಷಿ ಮಾಡಿಕೊಂಡು ಹೋದರೆ ಯಾವ ಉದ್ಯೋಗಿಯು ಪಡೆದುಕೊಳ್ಳದಷ್ಟು ಹಣವನ್ನು ಕೃಷಿಯಿಂದಲೇ ಗಳಿಸಿಕೊಳ್ಳಬಹುದು. ಇತ್ತೀಚಿಗೆ ಮೈಸೂರಿನ ರೈತರು ಒಬ್ಬರು ತಮ್ಮ ಭೂಮಿಯಲ್ಲಿ ಬೆಳೆಯನಲ್ಲ, ಚಿನ್ನವನ್ನು ಬೆಳೆಯುತ್ತಿದ್ದು, ಬೇರೆ ಬೇರೆ ಹಳ್ಳಿಯಿಂದಲೂ ಕೂಡ ಅವರ ತೋಟವನ್ನು ನೋಡಲು ಬರುತ್ತಾರೆ.
ರೈತರ ತೋಟದಲ್ಲಿ ಅಂತಹ ಸ್ಪೆಷಲ್ ಏನಿದೆ ಎಂದು ಕೇಳಿದರೆ ಕೇವಲ ಒಂದುವರೆ ಎಕರೆ ತೋಟದಲ್ಲಿ, ಎಂಟರಿಂದ ಹತ್ತು ಲಕ್ಷ ರೂಪಾಯಿಗಳವರೆಗೆ ಆದಾಯವನ್ನು ಗಳಿಸುತ್ತಾರೆ. ಒಂದೇ ಒಂದು ರೂಪಾಯಿ ಸಾಲವನ್ನು ಮಾಡಿದೆ ನಾನು ಜೀವನ ನಡೆಸುತ್ತಿದ್ದೇನೆ ಆರಾಮಾಗಿ ಬೆಳೆಯಿಂದ ಬಂದಿರುವ ಹಣದಿಂದ ಜೀವನ ಸಾಗುತ್ತಿದೆ. ಎಂಬುದಾಗಿ ಅವರು ಹೇಳುತ್ತಾರೆ. ಹಾಗಾದರೆ ಅವರು ಅಷ್ಟು ಕಡಿಮೆ ಜಮೀನನ್ನು ಕೂಡ ಎಷ್ಟು ಉತ್ತಮ ಆದಾಯ ಗಳಿಸಲು ಹೇಗೆ ಸಾಧ್ಯವಾಯಿತು?
ಮಿಶ್ರ ಬೇಸಾಯ ಪದ್ಧತಿ
ನಮ್ಮ ಬಳಿ ಎಷ್ಟು ಜಮೀನು ಇದೆಯೋ ಅಷ್ಟು ಜಮೀನಿಗೆ ಒಂದೇ ರೀತಿಯ ಬೆಳೆಯನ್ನು ಹಾಕುವ ಬದಲು ಮಿಶ್ರ ಬೇಸಾಯ ಪದ್ಧತಿ ಅನುಸರಿಸುವುದು ಒಳ್ಳೆಯದು. ಇದರಿಂದ ಭೂಮಿಯ ಫಲವತ್ತತೆ ಕೂಡ ಜಾಸ್ತಿಯಾಗುತ್ತದೆ ಜೊತೆಗೆ ಅತಿ ಹೆಚ್ಚು ಆದಾಯವು ಕೂಡ ಬರುತ್ತದೆ. ಉದಾಹರಣೆಗೆ ಒಂದುವರೆ ಎಕರೆ ಅಡಿಕೆ ತೋಟ ಇದ್ದರೆ ಆ ಅಡಿಕೆ ತೋಟದಲ್ಲಿ ಅಡಿಕೆ ಮರದ ನಡುವಿನಲ್ಲಿ ಬಾಳೆ, ಕಾಳು ಮೆಣಸು, ಕಾಫಿ, ಏಲಕ್ಕಿ ಹೀಗೆ ಇತರ ಬೆಳೆಯನ್ನು ಕೂಡ ಬೆಳೆಯಬಹುದು ತೋಟದ ಬದುವಿನಲ್ಲಿ ಬೇಲಿ ಹಾಕುವ ಬದಲು ಕಾಫಿ ಗಿಡಗಳನ್ನು ನೆಟ್ಟರೆ ತೋಟಕ್ಕೆ ಹೆಚ್ಚು ಬಿಸಿಲು ಬೆಳೆದಂತೆ ರಕ್ಷಣೆ ಆಗುತ್ತದೆ ಜೊತೆಗೆ ನಿಮಗೆ ಒಂದಿಷ್ಟು ಆದಾಯವನ್ನು ಕೂಡ ಪಡೆದುಕೊಳ್ಳಲು ಸಾಧ್ಯವಾಗುತ್ತದೆ.
ಇನ್ನು ಅಡಿಕೆ ತೋಟದ ನಡುವಿನಲ್ಲಿ ಏಲಕ್ಕಿಯನ್ನು ಕೂಡ ಬೆಳೆಯಬಹುದು. ಅಡಿಕೆ ತೋಟದಲ್ಲಿ ನೀವು ಗದ್ದೆಯಲ್ಲಿ ಮಾಡಿದಂತೆ ಉಳಿಮೆ ಮಾಡುವ ಅಗತ್ಯವಿಲ್ಲ. ತೋಟದಲ್ಲಿ ಮರದಿಂದ ಬೀಳುವ ಒಣಗಿದ ಎಲೆ, ಸೋಗೆ ಇವುಗಳನ್ನೇ ಬಳಸಿಕೊಂಡು ಸಾವಯವ ಗೊಬ್ಬರವನ್ನು ತಯಾರಿಸಿಕೊಳ್ಳಬಹುದು ಈ ತೋಟಕ್ಕೆ ನೀವು ಯಾವುದೇ ರೀತಿಯ ರಾಸಾಯನಿಕ ಗೊಬ್ಬರಗಳನ್ನು ಕೂಡ ಹಾಕುವ ಅಗತ್ಯ ಇರುವುದಿಲ್ಲ.
ಈ ರೀತಿ ಮಿಶ್ರ ಬೇಸಾಯ ಪದ್ಧತಿಯನ್ನು ಅನುಸರಿಸಿಕೊಂಡು ಹೋದರೆ ವಾರ್ಷಿಕ ಬೆಳೆ ಅಡಿಕೆಯಿಂದ ವಾರ್ಷಿಕವಾಗಿ ಹಣ ಗಳಿಸಲು ಸಾಧ್ಯವಿದೆ ಜೊತೆಗೆ ಪ್ರತಿ ತಿಂಗಳು ಒಂದಿಷ್ಟು ಆದಾಯ ಬರುವಂತಹ ಕೃಷಿಯನ್ನು ಕೂಡ ಮಾಡುವುದರಿಂದ ಯಾವುದೇ ಕಾರಣಕ್ಕೂ ಆರ್ಥಿಕ ಸಮಸ್ಯೆ ಕೂಡ ಉಂಟಾಗುವುದಿಲ್ಲ. ಕಾಫಿ ಬೆಳೆದು ಅದರ ಬೀಜದಿಂದ ನೀವೇ ಪುಡಿ ತಯಾರಿಸಿ ಕೊಟ್ಟರೆ ಕೆಜಿಗೆ 400 ರೂಪಾಯಿವರೆಗೆ ಮಾರಾಟ ಮಾಡಬಹುದು. ಅದೇ ರೀತಿ ಬಾಳೆ ಗೊನೆ ಕೂಡ 300 ರಿಂದ 400 ಗಳಿಗಿಂತಲೂ ಹೆಚ್ಚಿನ ಆದಾಯ ಪ್ರತಿ ಎರಡು ಮೂರು ತಿಂಗಳಿಗೆ ತಂದುಕೊಡುತ್ತದೆ.
ನಡುವೆ ತೋಟದಲ್ಲಿ ಒಂದಿಷ್ಟು ಜಾಗವಿದ್ದರೆ ಅಲ್ಲಿ ನರ್ಸರಿ ಕೂಡ ಮಾಡಬಹುದು ನೀವು ನಿಮ್ಮ ತೋಟದಲ್ಲಿ ಯಾವ ಬೆಳೆ ಬೆಳೆಯುತ್ತಿರು ಅದೇ ಗಿಡಗಳನ್ನು ನೀವು ನರ್ಸರಿ ಮಾಡಿ ಮಾರಾಟ ಮಾಡಬಹುದು.ಒಟ್ಟಿನಲ್ಲಿ ಕೇವಲ ವಾರ್ಷಿಕ ಆದಾಯವನ್ನು ಗಳಿಸುವುದು ಮಾತ್ರವಲ್ಲದೆ ಪ್ರತಿ ವಾರ ವಾರ ಹಣ ಬರುವ ಹಾಗೆ ಹೂವು ಕೃಷಿ ಕೂಡ ಮಾಡಬಹುದು. ಹೀಗೆ ಒಬ್ಬ ರೈತ ಅತಿ ಕಡಿಮೆ ಜಮೀನನ್ನು ಹೊಂದಿದ್ದರೂ ಕೂಡ ಸ್ವಲ್ಪ ಬುದ್ಧಿವಂತಿಕೆಯಿಂದ ಕೃಷಿ ಮಾಡಿದರೆ ಸಾಕಷ್ಟು ಹಣ ಗಳಿಸಬಹುದು.