Karnataka Times
Trending Stories, Viral News, Gossips & Everything in Kannada

Gas Cylinder: 450 ರೂ ಗೆ ಸಿಗಲಿದೆ ಗ್ಯಾಸ್ ಸಿಲಿಂಡರ್! ಎಲ್ಲೆಲ್ಲಿ ಲಭ್ಯ?

Advertisement

ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಗೆಲ್ಲುವ ಮೂಲಕ ಬಿಜೆಪಿ ಸರಕಾರವನ್ನು ಮಣ್ಣಿಸಿ ಕಾಂಗ್ರೆಸ್ ಆಡಳಿತಕ್ಕೆ ಬಂದಿತ್ತು ಬಳಿಕ ನವೆಂಬರ್, ಡಿಸೆಂಬರ್ ಅವಧಿಯಲ್ಲಿ ಮಧ್ಯಪ್ರದೇಶದ (Madhya Pradesh) ಚುನಾವಣೆ ನಡೆಯಲಿದ್ದು ಈಗಾಗಲೇ ಈ ಚುನಾವಣೆ ಎದುರಿಸಲು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಮೂಲಕ ಬಿಜೆಪಿ ಮತ್ತು ಕಾಂಗ್ರೆಸ್ ಸರಕಾರ ಪೈಪೋಟಿಗೆ ಬಿದ್ದು ಜನಪರ ಕಾರ್ಯಕ್ರಮ ಮಾಡಲು ಅಣಿಯಾಗುತ್ತಿದೆ.

ಸದ್ಯ ಮೊದಲಿಗೆ ಬಿಜೆಪಿ ಸರಕಾರ ಮಧ್ಯಪ್ರದೇಶದಲ್ಲಿ ಮಹಿಳಾ ಪರ ಚಿಂತನೆಯತ್ತ ಒಲವು ತೋರುತ್ತಿದೆ. ಈ ಮೂಲಕ ಮಹಿಳಾ ಪರವಾದ ಅಭಿವೃದ್ಧಿ ಕಾರ್ಯಕ್ರಮಕ್ಕೆ ಉತ್ತಮ ಬೆಂಬಲವನ್ನು ನೀಡುತ್ತಲೇ ಇದೆ‌. ಮಹಿಳೆಯರ ಮೀಸಲಾತಿ (Reservation) ಪ್ರಮಾಣವನ್ನು 30% ನಿಂದ 35% ಕ್ಕೆ ಹೆಚ್ಚಳ ಮಾಡುವ ಮೂಲಕ ವಿವಿಧ ರಂಗದಲ್ಲಿ ಮಹಿಳಾ ಪರವಾದ ಅಭಿವೃದ್ಧಿ ಯೋಜನೆ ಹಮ್ಮಿ ಕೊಳ್ಳುವ ಭರವಸೆ ನೀಡಿದೆ.

ಕಡಿಮೆ ಬೆಲೆಗೆ ಎಲ್ ಪಿಜಿ ಲಭ್ಯ:

ಕರ್ನಾಟಕ ಸರಕಾರದಲ್ಲಿ ವಿಧಾನ ಸಭೆ ಚುನಾವಣೆ ಪೂರ್ವದಲ್ಲಿ ಎಲ್ ಪಿಜಿ (Gas Cylinder) ಹಾಗೂ ಹಾಲಿನ ಪ್ಯಾಕೇಟ್ ನೀಡುವ ಘೋಷಣೆ ಮಾಡುತ್ತದೆ. ಆದರೆ ಬಿಜೆಪಿ (BJP) ಗೆಲ್ಲದೆ ಸಮಸ್ಯೆಯಾಗಿತ್ತು. ಈಗ ಮಧ್ಯಪ್ರದೇಶದಲ್ಲಿ 450ರೂ. ನಂತಡ ಎಲ್ ಪಿಜಿ ಸಿಲಿಂಡರ್ ನೀಡಲು ಮುಂದಾಗಿದೆ‌. ಲಾಡ್ಲಿ ಬೆಹನಾ ಎಂಬ ಯೋಜನೆಯ ಅಡಿಯಲ್ಲಿ 1000 ರೂ. ನೀಡುತ್ತಿದೆ. ಮುಂದಿನ ದಿನದಲ್ಲಿ 1250 ರೂ. ಗೆ ಈ ಮೊತ್ತ ಹೆಚ್ಚರಿಸಲಾಗುವುದು.

ಶ್ರಾವಣ ಮಾಸದಲ್ಲಿ 450 ರೂ. ನಂತೆ ಎಲ್ ಪಿಜಿ (Gas Cylinder) ನೀಡುತ್ತಿದ್ದರು. ಇದೇ ವ್ಯವಸ್ಥೆಯನ್ನು ವರ್ಷ ಪೂರ್ತಿ ನೀಡಲು ಸರಕಾರ ತೀರ್ಮಾನಿಸಲಾಗಿದೆ. ಇದೇ ದರದಲ್ಲಿ ಮಹಿಳೆಯರಿಗೆ LPG ನೀಡಲು ಸರಕಾರ ಮುಂದೆ ಬಂದಿದ್ದು ಸಾಕಷ್ಟು ಅನುಕೂಲ ಜನಸಾಮಾನ್ಯರಿಗೆ ಆಗಿದೆ. ಸರಕಾರಿ ನೌಕರಿಯಲ್ಲಿ ಮಹಿಳೆಯರಿಗೆ 35% ಮೀಸಲಾತಿ ನೀಡಲಾಗುವುದು ಎಂದು ಮಧ್ಯಪ್ರದೇಶದ ಮುಖ್ಯ ಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ (Madhya pradesh CM Shivaraj Singh Chawhan) ಹೇಳಿದ್ದಾರೆ.

ಒಟ್ಟಾರೆಯಾಗಿ ಮಧ್ಯ ಪ್ರದೇಶದಲ್ಲಿ ಈಗ ಚುನಾವಣೆ ಬಿಸಿ ತಟ್ಟುತ್ತಿದ್ದು ಇದು ಯಾವ ಹಂತಕ್ಕೆ ತಲುಪಬಹುದು ಏನೆಲ್ಲ ಜನಪರ ಯೋಜನೆಗೆ ಮತದಾರರ ಓಲೈಕೆ ಕಾರ್ಯಕ್ರಮ ನಡೆಯಬಹುದೆಂಬುದನ್ನು ಕಾದು ನೋಡಬೇಕು.

Leave A Reply

Your email address will not be published.