ಭಾರತ ದೇಶದ ಅತ್ಯಂತ ಶ್ರೀಮಂತ ವ್ಯಕ್ತಿ ಅಂದ್ರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ರಿಲಯನ್ಸ್ (Reliance) ಸಾಮ್ರಾಜ್ಯದ ಒಡೆಯ ಆಗಿರುವಂತಹ ಮುಕೇಶ್ ಅಂಬಾನಿ (Mukesh Ambani) ಇತ್ತೀಚಿಗಷ್ಟೇ ತಮ್ಮ ಮಗನ ಮದುವೆಯನ್ನ ಬರೋಬ್ಬರಿ 5,000 ಕೋಟಿ ರೂಪಾಯಿಗಳಷ್ಟು ಹಣವನ್ನು ಖರ್ಚು ಮಾಡಿ ಅದ್ದೂರಿಯಾಗಿ ಮಾಡಿದ್ರು. ಭಾರತದಲ್ಲಿ ಪ್ರಧಾನಿ ಮೋದಿ ಅವರಿಂದ ಹಿಡಿದು ವಿದೇಶಿ ಪಾಪ್ ಗಾಯಕರು ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆದರೆ ಮದುವೆಯಾಗಿ ಕೆಲವೇ ದಿನಗಳಲ್ಲಿ ಈಗ ಅಂಬಾನಿ ಅವರಿಗೆ ಶಾ-ಕಿಂಗ್ ಸುದ್ದಿ ಕೇಳಿ ಬಂದಿದ್ದು ಇದು ಕೇವಲ ಅವರಿಗೆ ಮಾತ್ರವಲ್ಲದೆ ಇಡೀ ಭಾರತ ದೇಶದ ಜನರಿಗೆ ಶಾ-ಕಿಂಗ್ ಸುದ್ದಿಯಾಗಿದೆ ಎಂದು ಹೇಳಬಹುದಾಗಿದೆ.
Mukesh Ambani ಗೆ ಭಾರಿ ನಷ್ಟ – ಚಿಂತೆಯಲ್ಲಿ ಭಾರತೀಯರು
ಹೌದು ಶೇರು ಮಾರುಕಟ್ಟೆಯಲ್ಲಿ ರಿಲಯನ್ಸ್ ಇಂಡಸ್ಟ್ರಿಯ (Reliance Industries) ಶೇರಿನಲ್ಲಿ 3.50 ಪ್ರತಿಶತ ಇಳಿಕೆಯಾಗಿರುವುದು ಕಂಡುಬಂದಿದೆ. ಇದೇ ಕಾರಣಕ್ಕಾಗಿ ಈ ಸ್ಟಾಕ್ ಮೇಲೆ ಹೂಡಿಕೆ ಮಾಡಿರುವಂತಹ ಲಕ್ಷಾಂತರ ಹೂಡಿಕೆದಾರರ ಹಣ ಈಗ ನಷ್ಟದಲ್ಲಿದೆ. ವ್ಯಾಲ್ಯೂಯೇಷನ್ ಬಗ್ಗೆ ಮಾತನಾಡೋದಾದ್ರೆ 73,000 ಕೋಟಿ ರೂಪಾಯಿ ಹಣ ನಷ್ಟ ಆಗಿದೆ ಎಂದು ಹೇಳಬಹುದಾಗಿದೆ. ಯಾರು ಕೂಡ ದೇಶದ ಇಷ್ಟೊಂದು ದೊಡ್ಡ ಕಂಪನಿಯ ಶೇರಿನಲ್ಲಿ ಈ ರೀತಿಯಲ್ಲಿ ಇಳಿಕೆ ಕಂಡುಬರುತ್ತದೆ ಅನ್ನೋದಾಗಿ ಊಹಿಸಿರಲಿಲ್ಲ.
ರಿಲಯನ್ಸ್ ಶೇರುಗಳಲ್ಲಿ ಭಾರಿ ಇಳಿಕೆ
ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ಅಂಕಿ ಅಂಶಗಳ ಪ್ರಕಾರ 3.49 ಪ್ರತಿಶತ ಅಂದ್ರೆ ಪ್ರತಿ ಶೇರಿನ ಮೇಲೆ 108.40 ರೂಪಾಯಿಗಳ ಇಳಿಕೆ ಕಂಡು ಬಂದಿದೆ. ಈಗ ರಿಲಯನ್ಸ್ ಇಂಡಸ್ಟ್ರಿಯ ಒಂದು ಶೇರಿನ ಬೆಲೆ 3001.10 ರೂಪಾಯಿ ಕ್ಲೋಸ್ ಆಗಿದೆ. ಆದರೆ ಕಳೆದ ಒಂಬತ್ತು ತಿಂಗಳ ಲೆಕ್ಕಾಚಾರವನ್ನು ಗಮನಿಸಿದ್ರೆ ರಿಲಯನ್ಸ್ ಇಂಡಸ್ಟ್ರಿಯ ಸೇರಿನ ಮೌಲ್ಯದಲ್ಲಿ 35 ಪ್ರತಿಶತ ಬೆಳವಣಿಗೆ ಕಂಡುಬಂದಿತ್ತು ಅನ್ನೋದನ್ನ ಕೂಡ ನಾವಿಲ್ಲಿ ಗಮನಿಸಬಹುದಾಗಿದೆ.
Mukesh Ambani: ಮುಳುಗಿ ಹೋಯಿತು ಹೂಡಿಕೆದಾರರ ಹಣ
ಭಾರತ ದೇಶದಲ್ಲಿ ಲಕ್ಷಾಂತರ ಜನರು ರಿಲಯನ್ಸ್ ಇಂಡಸ್ಟ್ರಿಯ ಶೇರಿನ ಮೇಲೆ ಹಣವನ್ನು ಹೂಡಿಕೆ ಮಾಡಿರುತ್ತಾರೆ. ಉದಾಹರಣೆಗೆ ಒಂದು ವೇಳೆ ಯಾರಾದರೂ ಹೂಡಿಕೆದಾರರ ಬಳಿ ರಿಲಯನ್ಸ್ ಇಂಡಸ್ಟ್ರಿಯಾ 10,000 ಶೇರುಗಳಿವೆ ಎಂಬುದಾಗಿ ಭಾವಿಸಿ. ಆಗಿರುವಂತ 108.40 ರೂಪಾಯಿಗಳ ನಷ್ಟವನ್ನು ಲೆಕ್ಕಾಚಾರದಲ್ಲಿ ಇಟ್ಟುಕೊಂಡು ಲೆಕ್ಕ ಹಾಕಿದ್ರೆ ಆ ಹತ್ತು ಸಾವಿರ ಶೇರುಗಳ ಮೇಲೆ ಆತ 10.84 ಲಕ್ಷ ರೂಪಾಯಿಗಳ ನಷ್ಟವನ್ನು ಅನುಭವಿಸಿರುತ್ತಾನೆ. ಇದು ಯಾವುದೇ ದೊಡ್ಡ ಮಟ್ಟದ ನಷ್ಟಕ್ಕಿಂತ ಕಡಿಮೆ ಇಲ್ಲ ಎಂದು ಹೇಳಬಹುದಾಗಿದೆ. 73341 ಕೋಟಿ ರೂಪಾಯಿಗಳಿಗೂ ಹೆಚ್ಚಿನ ನಷ್ಟ ಇಲ್ಲಿ ಸಂಭವಿಸಿದೆ ಎಂದು ಹೇಳಬಹುದಾಗಿದೆ.
ಬೆಲೆ ಏರಿಕೆ ಆಗಿರುವುದರ ಹಿಂದಿನ ನಿಜವಾದ ಕಾರಣ?
ರಿಲಯನ್ಸ್ ಇಂಡಸ್ಟ್ರಿಯ (Reliance Industries) ಶೇರಿನ ಬೆಲೆ ಮೂರು ತಿಂಗಳಿಗೊಮ್ಮೆ ಬರುವಂತಹ ರಿಪೋರ್ಟ್ ಆಧಾರದಲ್ಲಿ ಕಾಣಿಸಿಕೊಳ್ಳುತ್ತದೆ ಹಾಗೂ ಈ ಸಂದರ್ಭದಲ್ಲಿ ನಿರೀಕ್ಷೆ ಮಾಡಿರುವ ಹಾಗೆ ಫಲಿತಾಂಶ ಬಂದಿಲ್ಲ ಎಂಬುದಾಗಿ ತಿಳಿದು ಬಂದಿದ್ದು ಅದೇ ಕಾರಣಕ್ಕಾಗಿ ಅಂದರೆ 20 ಪ್ರತಿಶತ ಲಾಭದಲಿ ಇಳಿಕೆ ಕಂಡು ಬಂದಿರುವ ಕಾರಣಕ್ಕಾಗಿ ಈ ಫಲಿತಾಂಶ ಷೇರು ಮಾರುಕಟ್ಟೆಯಲ್ಲಿ ಕಂಡು ಬಂದಿದೆ. ಇನ್ನು ನೀವು ಕೂಡ ಹಣವನ್ನು ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಾಗ ಆರ್ಥಿಕ ಸಲಹೆಗಾರರ ಬಳಿ ಸಲಹೆ ಹಾಗೂ ಸೂಕ್ತ ರೀತಿಯ ಮಾರ್ಗದರ್ಶನವನ್ನು ಕೇಳಿ ಪಡೆದುಕೊಂಡು ಹೂಡಿಕೆ ಮಾಡಿ.