Eshwar Khandre: ಉಚಿತ ವಿದ್ಯುತ್ ಗೆ ಕ್ಷಣಗಣನೆ ಈಶ್ವರ್ ಖಂಡ್ರೆ ನೀಡಿದ್ರು ಸ್ಪಷ್ಟ ಮಾಹಿತಿ.
ಕಾಂಗ್ರೆಸ್ ಸರ್ಕಾರ(Congress Government) ಅಧಿಕಾರಕ್ಕೆ ಬಂದ ನಂತರ ಜನರಿಗೆ ನೀಡುತ್ತೇವೆ ಎಂದು ಹೇಳಿರುವಂತಹ ಯೋಜನೆಗಳಲ್ಲಿ ಪ್ರತಿ ತಿಂಗಳಿಗೆ ಇನ್ನೂರು ಯೂನಿಟ್ ಉಚಿತ ವಿದ್ಯುತ್ ಅನ್ನು ನೀಡುವಂತಹ ಯೋಜನೆ ಕೂಡ ಅತ್ಯಂತ ಜನಪ್ರಿಯವಾಗಿದೆ. ಯೋಜನೆ ಜಾರಿಗೆ ಬರುವ ಮುನ್ನವೇ ಪ್ರತಿಯೊಬ್ಬರು ಕೂಡ ಇದರ ಕುರಿತಂತೆ ಉತ್ಸಾಹ ಭರಿತರಾಗಿದ್ದಾರೆ.
ಆದರೆ ಪ್ರತಿಯೊಬ್ಬರೂ ಕೂಡ ಈಗಾಗಲೇ ಕಾಂಗ್ರೆಸ್ ಸರ್ಕಾರ ಬಂದ ನಂತರ ಅಂದರೆ ಜೂನ್ ಒಂದರಿಂದಲೇ ನಾವು ವಿದ್ಯುತ್ ಬಿಲ್ ಕಟ್ಟುವುದಿಲ್ಲ ಎಂಬುದಾಗಿ ಮನೆಗೆ ವಿದ್ಯುತ್ ಬಿಲ್ ಕೇಳಲು ಬಂದಿರುವಂತಹ ವಿದ್ಯುತ್ ಇಲಾಖೆಯ ಸಿಬ್ಬಂದಿಗಳಿಗೆ ಪ್ರತ್ಯುತ್ತರವನ್ನು ನೀಡುತ್ತಾ ತಮ್ಮ ಅಸಮಾಧಾನವನ್ನು ಹೊರ ಹಾಕುತ್ತಿದ್ದಾರೆ. ಎಲ್ಲಕ್ಕಿಂತ ಪ್ರಮುಖವಾಗಿ ಇದು ಇಡೀ ರಾಜ್ಯ ವ್ಯಾಪಿ ನಡೆಯುತ್ತಿರುವುದು ನಿಜಕ್ಕೂ ಕೂಡ ಬೇಸರ ತರುವಂತಹ ವಿಚಾರವಾಗಿದ್ದರೂ ಸಾಕಷ್ಟು ಕಡೆಗಳಲ್ಲಿ ವಿದ್ಯುತ್ ಬಿಲ್ ಅನ್ನು ಕಟ್ಟಲು ನಿರಾಕರಿಸುತ್ತಿರುವುದು ಕೂಡ ಸರಕಾರದ ಕೋಪಕ್ಕೆ ಕಾರಣವಾಗುತ್ತದೆ ಎಂದು ಹೇಳಬಹುದು. ಇದಕ್ಕೆ ಸಚಿವರಾಗಿರುವ ಈಶ್ವರ್ ಖಂಡ್ರೆ(Eshwar Khandre) ಏನು ಹೇಳಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಕರ್ನಾಟಕ ರಾಜ್ಯ ಸರ್ಕಾರದ ಸಚಿವರಾಗಿರುವಂತಹ ಈಶ್ವರ್ ಖಂಡ್ರೆ(Eshwar Khandre) ಬಗ್ಗೆ ಮಾತನಾಡುತ್ತಾ ಇದು ಹಳೆಯ ಸರ್ಕಾರ ಇದ್ದಾಗ ಜಾರಿಗೆ ಇದ್ದಂತಹ ವಿದ್ಯುತ್ ಬಿಲ್ ಆಗಿದ್ದು ಜೀವನದಲ್ಲಿ ಬರುವಂತಹ ವಿದ್ಯುತ್ ಬಿಲ್ ಅನ್ನು ನೀವು ಜುಲೈಗೆ ಕಟ್ಟಬೇಕು ಆ ಸಂದರ್ಭದಲ್ಲಿ 200 ಯೂನಿಟ್ ಗಳ ಉಚಿತ ವಿದ್ಯುತ್ ಯೋಜನೆ ಇದರ ಮೇಲೆ APPLY ಆಗುತ್ತದೆ ಎಂಬುದಾಗಿ ಹೇಳಿದ್ದಾರೆ. ಈ ಮೂಲಕ ಉಚಿತ ವಿದ್ಯುತ್ ಯೋಜನೆಯ ಕುರಿತಂತೆ ರಾಜ್ಯದ ಜನರಲ್ಲಿ ಇದ್ದಂತಹ ಗೊಂದಲ ಪರಿಹಾರವಾಗಿದೆ ಎಂಬುದಾಗಿ ಭಾವಿಸಬಹುದಾಗಿದೆ.