KSRTC: ಬೆಳ್ಳಂಬೆಳಿಗ್ಗೆ 4 ಸಿಹಿಸುದ್ದಿ ಹಂಚಿಕೊಂಡ KSRTC ಸಂಸ್ಥೆ

Advertisement
ಕರ್ನಾಟಕ ರಾಜ್ಯ ಸಾರಿಗೆ ಇಂದು ದೇಶಾದ್ಯಂತ ಅತ್ಯುತ್ತಮ ಸಾರಿಗೆಗಳಲ್ಲಿ ಒಂದು ಎನಿಸಿಕೊಂಡಿದೆ. ಪ್ರಯಾಣಿಕರಿಗೆ ಅನುಕೂಲವಾಗುವಂತೆ ಯಾವುದಾದರೂ ರಾಜ್ಯದ ಸಾರಿಗೆ ಕೆಲಸ ನಿರ್ವಹಿಸುತ್ತದೆ ಎಂದರೆ ಅದು ಕರ್ನಾಟಕದ ರಾಜ್ಯ ಸಾರಿಗೆ ಎಂದು ಹೆಮ್ಮೆಯಿಂದ ಹೇಳಬಹುದು. ಇತ್ತೀಚೆಗೆ ಕರ್ನಾಟಕ ರಾಜ್ಯ ಸಾರಿಗೆ ನಿಗಮ, ಅತ್ಯುತ್ತಮ ಉದ್ಯೋಗದಾತ ಬ್ರಾಂಡ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತ್ತು. ಈ ಖುಷಿಯನ್ನು ಹಂಚಿಕೊಳ್ಳುತ್ತಿರುವ ಬೆನ್ನಲ್ಲೇ ಮತ್ತೆ ಕೆ ಎಸ್ ಆರ್ ಟಿ ಸಿ(KSRTC) ಗೆ ನಾಲ್ಕು ಪ್ರಶಸ್ತಿಗಳು ಸಂದಿವೆ.
ಕರ್ನಾಟಕದ ಗೌರವ ಹೆಚ್ಚಿಸಿದ ಕೆ ಎಸ್ ಆರ್ ಟಿ ಸಿ
ಕರ್ನಾಟಕದ ಅತ್ಯುತ್ತಮ ಸಾರಿಗೆ ಆಗಿರುವ ಕೆ ಎಸ್ ಆರ್ ಟಿ ಸಿ ಇದೀಗ ನಾಲ್ಕು ವರ್ಗಗಳಲ್ಲಿ ಆಯ್ಕೆಯಾಗಿದೆ. ವಿ ಕನೆಕ್ಟ್ ಇಂಡಿಯಾ ಮೀಡಿಯಾ ಅಂಡ್ ರಿಸರ್ಚ್ ನಿಂದ ಕೊಡಲ್ಪಡುವ ಏಷ್ಯಾದ ಬೆಸ್ಟ್ ಕ್ವಾಲಿಟಿ ಪ್ರಶಸ್ತಿಗಳ ನಾಲ್ಕು ವಿಭಾಗಗಳಲ್ಲಿ ಕೆ ಎಸ್ ಆರ್ ಟಿ ಸಿ ಆಯ್ಕೆಯಾಗಿದೆ. ಬ್ರಾಂಡಿಂಗ್, ಮಾರ್ಕೆಟಿಂಗ್, ಸಾರಿಗೆ ಸುರಕ್ಷತೆ, ಕಾರ್ಮಿಕ ಸ್ನೇಹಿತ ಉಪಕ್ರಮಗಳು ಈ ನಾಲ್ಕು ವಿಭಾಗಗಳಲ್ಲಿಯೂ ಕೆ ಎಸ್ ಆರ್ ಟಿ ಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ಟ್ವಿಟ್ಟರ್ ನಲ್ಲಿ ಸಂತಸ ಹಂಚಿಕೊಂಡ ಕೆ ಎಸ್ ಆರ್ ಟಿ ಸಿ
ಕೆ ಎಸ್ ಆರ್ ಟಿ ಸಿ ಗೆ ನಾಲ್ಕು ಪ್ರಶಸ್ತಿಗಳು ಸಂದಿರುವುದಕ್ಕೆ ಸಾರಿಗೆ ನಿಗಮವು ತನ್ನ ಟ್ವಿಟರ್ ಅಧಿಕೃತ ಖಾತೆಯಲ್ಲಿ ಬರೆದುಕೊಂಡಿದ್ದು ಕರ್ನಾಟಕ ಸಾರಿಗೆಯಲ್ಲಿ ಪ್ರಯಾಣಿಸುವ ಪ್ರತಿಯೊಬ್ಬ ಪ್ರಯಾಣಿಕನಿಗೂ ಕೂಡ ಧನ್ಯವಾದಗಳು ತಿಳಿಸಿದೆ. “ವಿ ಕನೆಕ್ಟ್ ಇಂಡಿಯಾ ಮೀಡಿಯಾ ಅಂಡ್ ರಿಸರ್ಚ್ ಸ್ಥಾಪಿಸಿರುವ ಏಷ್ಯಾದ ಬೆಸ್ಟ್ ಕ್ವಾಲಿಟಿ ಪ್ರಶಸ್ತಿಗಳು ಕೆ ಎಸ್ ಆರ್ ಟಿ ಸಿ ಗೆ 4 ವರ್ಗಗಳಲ್ಲಿ ಲಭಿಸಿರುತ್ತದೆ. ಬ್ರಾಂಡಿಂಗ್, ಮಾರ್ಕೆಟಿಂಗ್, ಸಾರಿಗೆ ಸುರಕ್ಷತೆ ಪ್ರಯಾಣಿಕ ಸ್ನೇಹಿ ಉಪಕ್ರಮಗಳು ಹಾಗೂ ಮಾಹಿತಿ ತಂತ್ರಜ್ಞಾನ ವಿಷಯಗಳಲ್ಲಿ ಕೆ ಎಸ್ ಆರ್ ಟಿ ಸಿ ಪ್ರಶಸ್ತಿಗೆ ಆಯ್ಕೆಯಾಗಿರುತ್ತದೆ.
ಈ ಪ್ರಶಸ್ತಿ ಪ್ರಧಾನ ಸಮಾರಂಭವು ದೆಹಲಿಯ ವಿಮಾನ ನಿಲ್ದಾಣದಲ್ಲಿರುವ ರ್ಯಾಡಿಯೀಸ್ ಬ್ಲೂ ಪ್ಲಾಜಾದಲ್ಲಿ ನೆರವೇರಿದೆ. ಇನ್ನು ಈ ಸಮಾರಂಭದಲ್ಲಿ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ, ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ರಾಜ್ಯ ಸಚಿವ ರಾಮದಾಸ್ ಅಠಾವಳೆ ಮೊದಲಾದ ಗಣ್ಯರು ಆಗಮಿಸಿದ್ದರು.
ಇನ್ನು ಈ ಪ್ರಶಸ್ತಿಯನ್ನು ಕೆ ಎಸ್ ಆರ್ ಟಿ ಸಿ ತನ್ನಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ಸಿಬ್ಬಂದಿಗಳಿಗೆ ಹಾಗೂ ಸಾರಿಗೆಯಲ್ಲಿ ಪ್ರಯಾಣಿಸುವ ಪ್ರತಿಯೊಬ್ಬ ಪ್ರಯಾಣಿಕರಿಗೂ ಕೂಡ ಡೆಡಿಕೇಟ್ ಮಾಡುತ್ತದೆ. ಶಕ್ತಿ ಯೋಜನೆಯ ನಂತರ ಉಚಿತವಾಗಿ ಹೆಣ್ಣು ಮಕ್ಕಳು ಕರ್ನಾಟಕ ಸಾರಿಗೆಯಲ್ಲಿ ರಾಜ್ಯಾದ್ಯಂತ ಪ್ರಯಾಣ ಮಾಡಬಹುದು. ಈ ಸಮಯದಲ್ಲಿ ಉಂಟಾಗುವ ಕಿರಿಕಿರಿ ಎಂದು ಕೂಡ ಲಕ್ಷಿಸದೆ ಸಿಬ್ಬಂದಿಗಳು ಸರಿಯಾಗಿ ಕಾರ್ಯ ನಿರ್ವಹಿಸಿದ್ದು ಸಾರಿಗೆ ವ್ಯವಸ್ಥೆಯಲ್ಲಿ ಯಾವುದೇ ರೀತಿಯ ಲೋಪ ದೋಷಗಳು ಆಗದಂತೆ ನೋಡಿಕೊಳ್ಳಲಾಗಿದೆ. ಈ ಎಲ್ಲಾ ಕಾರಣಗಳಿಂದಾಗಿ ಕರ್ನಾಟಕ ರಾಜ್ಯ ಸಾರಿಗೆ ನಿಗಮ 4 ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.