ರಕ್ಷಾ ಬಂಧನಕ್ಕೆ ಅಣ್ಣ ತಂಗಿಗೆ ಗಿಫ್ಟ್ ನೀಡುವುದು ಸಹಜ ಆದರೆ ರಾಷ್ಟ್ರೀಯ ಮಟ್ಟದಲ್ಲಿ ಕೇಂದ್ರದಲ್ಲು ಅಧಿಕಾರದಲ್ಲಿರುವ ಬಿಜೆಪಿ ಸರಕಾರದಿಂದ ರಾಷ್ಟ್ರದ ಮಹಿಳೆಯರಿಗೆಲ್ಲ ಶುಭ ಸುದ್ದಿಯೊಂದು ಹರಿದು ಬಂದಿದೆ. ಆಗಸ್ಟ್ 3 ರಿಂದ ಗ್ಯಾಸ್ ಸಿಲಿಂಡರ್ (Gas Cylinder) ಮೇಲಿನ ಅಧಿಕ ಬೆಲೆ ತಗ್ಗಿಸಲು ಸರಕಾರ ತೀರ್ಮಾನ ಕೈ ಗೊಂಡಿದ್ದು ಈ ವಿಚಾರ ಎಲ್ಲ ಮಹಿಳೆಯರಿಗೆ ಬೊಂಪರ್ ಕೊಡುಗೆ ನೀಡಿದಂತಾಗಿದೆ.
ಚುನಾವಣೆ ಸಮೀಪ ಬಂದಂತೆ ಹೊಸ ಯೋಜನೆ ಪ್ರಕಾರ ಎಲ್ಲ ಕಾರ್ಯ ನಿರ್ವಹಣೆ ಸಾಮಾನ್ಯವಾಗಿದ್ದು ಇದೇ ನಿಟ್ಟಿನಲ್ಲಿ ಕೇಂದ್ರದ ಬಿಜೆಪಿ ನಡೆಯನ್ನು ಸಹ ನಾವು ಗಮನಿಸಬಹುದಾಗಿದೆ. ಮೂರು ವರ್ಷಗಳ ಹಿಂದೆ ಗ್ರಾಹಕರ ಬ್ಯಾಂಕ್ ಖಾತೆಗೆ Gas Cylinder ಸಬ್ಸಿಡಿ ದರ ಬರುತ್ತಿತ್ತು ಆದರೆ ಅದು ಮತ್ತೆ ನಿಂತಿತ್ತು. ಅಷ್ಟು ಮಾತ್ರವಲ್ಲದೆ ಸಬ್ಸಿಡಿಯೂ ಇಲ್ಲದೇ Gas Cylinder ಅಧಿಕ ದರ ಕೊಟ್ಟು ಗ್ರಾಹಕರು ಉಪಯೋಗಿಸಬೇಕಾಯ್ತು. ಇನ್ನು ಲೋಕಸಭೆ ಚುನಾವಣೆ ಹೊಸ್ತಿಲಿಗೆ ಬರಲು ಏಳು ತಿಂಗಳು ಬಾಕಿ ಇರುವಾಗಲೇ ಹಳೆ ಕ್ರಮ ಮತ್ತೆ ಮುಂದುವರಿಸಲು ಬಿಜೆಪಿ ಮುಂದಾಗಿದೆ.
ಇಷ್ಟು ದಿನ ಇರಲಿಲ್ಲ:
ಚುನಾವಣೆಗೆ ಮುನ್ನ ಭರವಸೆ ನೀಡಿ ಒಂದು ಕಾಲು ವರ್ಷ ಸಬ್ಸಿಡಿ ನೀಡಿ ಬಳಿಕ ಮೂರು ವರ್ಷ ನೀಡಲಿಲ್ಲ ಈಗ ಮತ್ತೆ ಚುನಾವಣೆ ಬರುತ್ತಿದೆ ಆ ಭಯಕ್ಕೆ ಪುನಃ ಈ ಯೋಜನೆ ಕಾರ್ಯಗತ ಮಾಡಲು ಪ್ರಯತ್ನ ಪಡುತ್ತಿದ್ದಾರೆ. ಮೇ ನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬ್ಯಾರೆಲ್ ಮೇಲೆ 118 ರೂ. ಗೆ ತಲುಪಿತ್ತು. ಇಳಿಕೆಯಾದರೂ ಎಲ್ ಪಿಜಿ (Gas Cylinder) ಬೆಲೆ ಮಾತ್ರ ಇಳಿಸಿಲ್ಲ ಯಾಕೆ ಎಂಬ ಪ್ರಶ್ನೆ ಸಹ ಇದೀಗ ಚರ್ಚೆಗೆ ಬಂದಿದೆ.
ಕಳೆದ ಏಳು ತಿಂಗಳಿನಲ್ಲಿ ಕಚ್ಚಾ ತೈಲದ ಬೆಲೆ 60 ರಿಂದ 80 ಡಾಲರ್ ವ್ಯಾಪ್ತಿಯಲ್ಲಿದೆ. ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಜಮಾವಣೆ ಮಾಡಲಾಗುವುದು ಎಂದು ಪೆಟ್ರೋಲ್ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದಿಪ್ ಸಿಂಗ್ ಪುರಿ ಅವರು ರಾಜ್ಯ ಸಭೆಯಲ್ಲಿ ತಿಳಿಸಿದ್ದಾರೆ. ಈ ಮೂಲಕ 14kg LPG ಗೆ ಇನ್ನೂರು ರೂಪಾಯಿ ಸಬ್ಸಿಡಿ ನೀಡುವುದಾಗಿ ಸರಕಾರ ತಿಳಿಸಿದೆ.
ಬೆಲೆ ಇಳಿಕೆಗೆಕಾರಣ ಏನು?
ಅಡುಗೆ ಅನಿಲ ಹಾಗೂ ವಾಣಿಜ್ಯ ಗ್ಯಾಸಿ (Gas Cylinder) ನ ಬೆಲೆ ತಿಂಗಳಲ್ಲೇ ಪರಿಶೀಲನೆ ಆಗುವಂತಹದ್ದಾಗಿದ್ದು ಆಯ್ಲ್ ಮಾರ್ಕೆಟಿಂಗ್ ಕಂಪೆನಿಯ ಮೌಲ್ಯವು ಅಂತರಾಷ್ಟ್ರೀಯ ಬೆಲೆಯ ಆಧಾರಿತವಾಗಿದೆ. ಹಾಗಾಗಿ ಆಯ್ಲ್ ಮಾರ್ಕೆಟಿಂಗ್ ಕಂಪೆನಿಯ (Oil Marketing Company) ಬೆಲೆ ಇಳಿಕೆಯ ಪರಿಣಾಮ ರಾಷ್ಟ್ರ ಮಟ್ಟದಲ್ಲಿ Gas Cylinder ಬೆಲೆ ಕಡಿಮೆ ಆಗಿ ಸಬ್ಸಿಡಿ ಸಿಗಲಿದೆ. ಒಟ್ಟಾರೆಯಾಗಿ ಬೆಲೆ ಏರಿಕೆಯಾಗಿ ತತ್ತರಿಸುತ್ತಿರುವಾಗಲೇ ಸಬ್ಸಿಡಿ ಹಾಗೂ ಬೆಲೆ ಇಳಿಕೆಯ ನೀತಿ ಸಾಮಾನ್ಯರಿಗೆ ಸಾಕಷ್ಟು ಅನುಕೂಲಕರ ವಾತಾವರಣ ಸಿಗಲಿದೆ.