PU Students: ಪಿಯು ವಿದ್ಯಾರ್ಥಿಗಳಿಗೆ ಬೆಳ್ಳಂಬೆಳಿಗ್ಗೆ ಹೊಸ ಸಿಹಿಸುದ್ದಿ

Advertisement
ಹಿಂದೆಲ್ಲ ಸರಿಯಾಗಿ ಶೈಕ್ಷಣಿಕ ವ್ಯವಸ್ಥೆಇಲ್ಲದೆ ವಿದ್ಯೆಯಿಂದ ವಂಚಿತರಾಗಿದ್ದ ಕಾಲ ಇತ್ತು ಆದರೆ ಈಗ ಕಾಲ ಬದಲಾಗಿದೆ ಈಗ ಮಕ್ಕಳ ಶೈಕ್ಷಣಿಕ ಚಟುವಟಿಕೆಗೆ ವಿವಿಧ ರೀತಿಯ ಪ್ರೋತ್ಸಾಹ ನೀಡಲಾಗುತ್ತಿದೆ. ಈ ಮೂಲಕ ಸುಲಭ ಪಠ್ಯ, ಕಂಪ್ಯೂಟರ್ ತಂತ್ರಜ್ಞಾನ (Technology) ಹಾಗೂ ಅನೇಕ ವಿಧವಾದ ಕೌಶಲ ತರಬೇತಿ ಕೂಡ ಇಂದು ನೀಡಲಾಗುತ್ತಲೇ ಇದೆ. ಅದರೊಂದಿಗೆ ಸಹಾಯಧನ, ಪ್ರೋತ್ಸಾಹ ಧನ,ವಿದ್ಯಾರ್ಥಿ ವೇತನ ಸಹ ಸರಕಾರದಿಂದ ಬರುತ್ತಿದೆ.
ಇದರ ಬೆನ್ನಲ್ಲೆ ರಾಜ್ಯದಲ್ಲಿ ಬಂದಿರುವ ಕಾಂಗ್ರೆಸ್ ಸರಕಾರ ಒಂದು ಮಗತ್ವದ ಕ್ರಮ ಜಾರಿಗೆ ತೀರ್ಮಾನಿಸಿದೆ. ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಶಾಲಾ ಕಾಲೇಜು ಮಕ್ಕಳಿಗೆ (PU Students) ಉಚಿತ ಲ್ಯಾಪ್ ಟಾಪ್ (Free Laptop) ನೀಡಲು ತೀರ್ಮಾನಿಸಿದ್ದು ಈ ಪ್ರಯೋಜನ ಆರ್ಥಿಕ ಸಮಸ್ಯೆ ಇರುವ ಮಕ್ಕಳಿಗೆ ಸಾಕಷ್ಟು ಅನುಕೂಲವಾಗಲಿದೆ. ಈ ಯೋಜನೆಯ ಫಲಾನುಭವಿಗಳಾಗಲು ಅರ್ಜಿ ಆಹ್ವಾನಿಸಲಾಗಿದ್ದು ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಯಾರಿಗೆ ಇದು ಸಿಗಲಿದೆ?
ಇದು ಕಾರ್ಮಿಕರ ಮಕ್ಕಳಿಗಾಗಿ ಇರುವ ಒಂದು ಯೋಜನೆಯಾಗಿದ್ದು ಕಾರ್ಮಿಕ ಇಲಾಖೆಯ ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ನೋಂದಾಯಿತ ಕಾರ್ಮಿಕರ ಮಕ್ಕಳಿಗೆ ಈಒಂದು ಸೌಲಭ್ಯ ಸಿಗಲಿದೆ. ಪ್ರಥಮ ಹಾಗೂ ದ್ವಿತೀಯ ಪಿಯು ವ್ಯಾಸಾಂಗ ಮಾಡುವ ಕಾರ್ಮಿಕರ ಮಕ್ಕಳು ಈ ಯೋಜನೆಗೆ ಅರ್ಜಿ ಹಾಕಬಹುದು. ಅರ್ಜಿ ಪರಿಶೀಲನೆ ಬಳಿಕ ಫಲಾನುಭವಿಗಳ ಪಟ್ಟಿ ಸಿದ್ಧವಾಗಲಿದೆ.
ಯಾವೆಲ್ಲ ದಾಖಲಾತಿ ಅಗತ್ಯ:
- SSLC ಅಂಕಪಟ್ಟಿ
- ಮಕ್ಕಳ ಆಧಾರ್ ಕಾರ್ಡ್ ಪ್ರತಿ.
- ವ್ಯಾಸಾಂಗ ದೃಢೀಕರಣ ಪ್ರತಿ
- ಇತರ ಶೈಕ್ಷಣಿಕ ಕೆಲ ದಾಖಲೆ ಅಗತ್ಯ.
ಎಲ್ಲಿ ಅರ್ಜಿ ಸಲ್ಲಿಸಬೇಕು?
ಈ ಅರ್ಜಿ ಅಡಿಯಲ್ಲಿ ಲ್ಯಾಪ್‌ಟಾಪ್ ಪಡೆಯಲು ಆಯಾ ಜಿಲ್ಲಾ ಮತ್ತು ತಾಲೂಕು ಕಚೇರಿಯಿಂದ ನಿಗಧಿತ ನಮೂನೆಯ ಅರ್ಜಿ ಪಡೆದು ಭರ್ತಿ ಮಾಡಬೇಕು. ಬಳಿಕ ಅಗತ್ಯ ದಾಖಲೆಗಳ ಪ್ರತಿಯೊಂದಿಗೆ ಸೆಪ್ಟೆಂಬರ್ 15 ರೊಳಗೆ ಇಲಾಖೆಯ ಕಚೇರಿಗೆ ಸಲ್ಲಿಸಬೇಕು. ಹಾಗೇ ಈ ಅರ್ಜಿ ಸಲ್ಲಿಸುವವರು ಬೇರೆ ಯಾವುದೇ ಯೋಜನೆ ಅಡಿಯಲ್ಲಿ ಲ್ಯಾಪ್‌ಟಾಪ್ ಪಡೆದಿರಬಾರದು ಎಂಬ ನಿಯಮ ಕೂಡ ಬಹುದು. ಕಚೇರಿಯಿಂದ ಅರ್ಜಿ ಪಡೆದು ಪಿಯು ಮಕ್ಕಳು ಈ ಸೌಲಭ್ಯಕ್ಕೆ ಫಲಾನುಭವಿಗಳಾಗಬಹುದು.