Rain: ಇನ್ನೆರಡು ದಿನಗಳಲ್ಲಿ ಈ ಭಾಗಗಳಲ್ಲಿ ಭರ್ಜರಿ ಮಳೆ! ರಾಜ್ಯಾದ್ಯಂತ ಅಲರ್ಟ್.

Advertisement
ಈ ವರ್ಷದಂದೂ ಮಳೆ ಉತ್ತಮವಾಗಿ ಬರುತ್ತೆ ಎಂದು ನಿರೀಕ್ಷೆ ಮಾಡಿದ್ದ ಜನರಿಗೆ ಈ ವರ್ಷದ ಮಳೆ ನಿರಾಸೆ ಎಲ್ಲವನ್ನು ಸುಳ್ಳು ಮಾಡಿತ್ತು. ಆಗಸ್ಟ್ (August) ತಿಂಗಳಿನಂದು ಯಾವಾಗಲೂ ಮದುವೆ ಅಧಿಕ ಆಗಿರುತ್ತದೆ ಆದರೆ ಈ ವರ್ಷದ ಮಳೆ (Rain) ಎಲ್ಲ ರೈತರ ಕನಸ್ಸು ಭಗ್ನ ಮಾಡಿತ್ತು. ಆದರೆ ಈಗ ಮಳೆಯ ಬಗ್ಗೆ ಮಹತ್ವದ ಮಾಹಿತಿಯೊಂದು ಹೊರ ಬಿದ್ದಿದೆ.
ಆ. 31 ಹಾಗೂ ಸೆಪ್ಟೆಂಬರ್ 1 ರವರೆಗೆ ಜೋರಾದ ಮಳೆ (Rain) ಬೀಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಈ ಸಂಬಂಧಿಸಿದಂತೆ ಮಾತಾಡಿದ್ದಾರೆ. ಆಗಸ್ಟ್ 31ರಂದು ಬಳ್ಳಾರಿ, ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ ಹಾಗೂ ಚಾಮರಾಜನಗರದಲ್ಲಿ ಮಳೆಯಾಗಲಿದೆ. ಸೆಪ್ಟೆಂಬರ್ ಒಂದರಂದು ಬೆಂಗಳೂರು ಗ್ರಾಮಾಂತರ, ರಾಯಚೂರು, ಚಿಕಗಕಬಳ್ಳಾಪುರ, ಬಳ್ಳಾರಿಯಲ್ಲಿ ಎಲ್ಲೋ ಅಲರ್ಟ್ ಅನ್ನು ಘೋಷಣೆ ಮಾಡಲಾಗಿದೆ.
ಕರಾವಳಿಗೆ ಇಲ್ಲ ಮಳೆ ಭಾಗ್ಯ:
ಕರಾವಳಿ ಭಾಗಕ್ಕೆ ವರುಣ ಸ್ಪಷ್ಟ ಸಿಗಲಿಲ್ಲ.ವರುಣನಂತೂ ಸದಾ ಕಣ್ಣ ಮುಚ್ಚಾಲೆ ಆಡುತ್ತಲೆ ಒಂದೊಮ್ಮೆ ಮೋಡ ಮಸುಕಿ ಸಣ್ಣ ಹನಿಬಿದ್ದು ಮಳೆಯಂತೂ ಬರದೇ ಕಣ್ಮರೆಯಾಗಿ ಬಿಡುತ್ತದೆ. ಮಳೆನಾಡು ಮತ್ತು ಒಳನಾಡು ಜಿಲ್ಲೆಯಲ್ಲಿಯೂ ತುಂಬಾ ದಿನಗಳಿಂದ ವರುಣಾಗಮನವೇ ಆಗಿಲ್ಲ. ಬೆಂಗಳೂರು ನಗರಕ್ಕೆ ಸಾಧಾರಣ ಮಳೆಯಾಗಲಿದ್ದು ಉಳಿದ ಭಾಗಕ್ಕೆ ಮಳೆ ಆಗುವ ಸಾಧ್ಯತೆ ಬಹುವಾಗೇ ಇದೆ.
ರೈತರಿಗೆ ಸಂಕಷ್ಟ:
ಮಳೆ ನಂಬಿ ಕೃಷಿ ಮಾಡಲು ಹೋದ ರೈತರಿಗೆ (Formers) ಗದ್ದೆಗೆ ಬಾವಿ ನೀರು ಬಿಡೊ ಪ್ರಸಂಗ ಬಂದಿದೆ. ಇನ್ನು ಕೆಲಭಾಗದಲ್ಲು ಬಾವಿಯೂ ಬತ್ತಿದ್ದು ನೆಲವೆಲ್ಲ ನೀರು ಕಣದೆ ಬಿತ್ತ ಬೀಜಗಳು ನಾಶವಾಗಿದೆ. ಇನ್ನು ತೋಟ ಮಾಡಿದ್ದವರು ಗಿಡ ಸೊರಗುತ್ತಿದೆ ಎಂದು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ. ರಾಜ್ಯದ ಅನೇಕ ಭಾಗದಲ್ಲಿ ಕುಡಿಯಲೇ ಸರಿಯಾದ ನೀರಿನ ಸೌಲಭ್ಯ ಇಲ್ಲದೇ ಸಂಕಷ್ಟ ಅನುಭವಿಸುವಂತಾಗಿದೆ.
ಇನ್ನೆರೆಡು ದಿನ ಕೆಲ ಭಾಗದಲ್ಲಿ ಜೋರಾದ ಮಳೆ (Rain) ಬೀಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯೂ ಮುನ್ಸೂಚನೆ ನೀಡಿದ್ದು ಮಳೆ ಬರುತ್ತದೆ ಎಂಬ ನಿರೀಕ್ಷೆಯಲ್ಲಿ ಕರ್ನಾಟಕದ ಜನತೆ ಕಾಯುತ್ತಿದ್ದಾರೆ.