Karnataka Times
Trending Stories, Viral News, Gossips & Everything in Kannada

Arecanut Plant: ಅಡಿಕೆ ಗಿಡಕ್ಕೆ ಜಾಸ್ತಿ ನೀರು ಕೊಟ್ರೆ ಜಾಸ್ತಿ ಇಳುವರಿ ಬರುತ್ತಾ? ಅಸಲಿ ಸತ್ಯ ಇಲ್ಲಿದೆ

Advertisement

ಅಡಿಕೆ ತೋಟ ಮಾಡುವಾಗ ಕೆಲವು ಪ್ರಮುಖವಾದ ವಿಷಯಗಳ ಬಗ್ಗೆ ಗಮನ ಹರಿಸಬೇಕು. ಇಲ್ಲಿ ಸಣ್ಣ ಸಣ್ಣ ವಿಷಯಗಳಿಂದ ಹಿಡಿದು ದೊಡ್ಡದಾಗಿ ಕೃಷಿ ಮಾಡುವವರೆಗಿನ ಎಲ್ಲಾ ಸಂಗತಿಗಳನ್ನು ಕೂಡ ಬಹಳ ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ. ನಿಮ್ಮ ಬಳಿ ಜಮೀನಿದೆ ಅದರಲ್ಲಿ ಒಂದಷ್ಟು ಅಡಿಕೆ ಗಿಡವನ್ನು ಹಾಕಬೇಕು ಎಂದು ಅಂದುಕೊಂಡರೆ ಅದು ಸಂಪೂರ್ಣವಾದ ಅಡಿಕೆ ಕೃಷಿ ಆಗುವುದಿಲ್ಲ. ಅದಕ್ಕಿಂತ ಮೊದಲು ಗಿಡಕ್ಕೆ ಯಾವ ರೀತಿ ನೀರು ಕೊಡಬೇಕು ಎಷ್ಟು ನೀರನ್ನು ಹಾಕಬೇಕು ಎಂದೆಲ್ಲ ಬಗ್ಗೆ ಸ್ಪಷ್ಟವಾದ ಮಾಹಿತಿಯನ್ನು ತಿಳಿದುಕೊಂಡಿರಬೇಕು.

ಬಹಳ ವರ್ಷಗಳಿಂದಲೂ ಅಡಿಕೆ ಬೆಳೆಯನ್ನು ಚೆನ್ನಾಗಿ ಬೆಳೆದುಕೊಂಡಿರುವವರ ಬಳಿ ನೀವು ಸಲಹೆಯನ್ನು ಪಡೆದುಕೊಳ್ಳಬಹುದು. ಹಲವು ಜನ ತುಂಬಾ ವರ್ಷಗಳಿಂದಲೂ ಅಡಿಕೆ ಬೆಳೆ ಮಾಡಿಕೊಂಡು ಬಂದಿದ್ದಾರೆ ಆದರೆ ಅವರಿಗೆ ನಿಜವಾಗಿ ಎಷ್ಟು ಆದಾಯ ಬರಬೇಕು ಅಷ್ಟು ಹಣ ಬಂದಿರುವುದಿಲ್ಲ ಇದಕ್ಕೆ ಹಲವಾರು ಕಾರಣಗಳು ಕೂಡ ಇವೆ. ಮುಖ್ಯವಾಗಿ ಸರಿಯಾದ ಪ್ರಮಾಣದಲ್ಲಿ ಗಿಡಗಳಿಗೆ ನೀರನ್ನು ಹಾಕದೆ ಇರುವುದು.

ಅತಿ ಹೆಚ್ಚು ನೀರು ಉಣಿಸುವುದು:

ಅಡಿಕೆ ಗಿಡಕ್ಕೆ ನೀರನ್ನು ಹಾಕುವುದು ಆ ತೋಟದ ಮಣ್ಣಿನ ಗುಣ ಹಾಗೂ ವಾತಾವರಣವನ್ನು ಅವಲಂಬಿಸಿರುತ್ತದೆ. ಎರಡು ಮಿಶ್ರಿತ ಕೆಂಪು ಮಣ್ಣು ಅಥವಾ ಜೌಗು ಮಣ್ಣು ಇರುವಂತಹ ಪ್ರದೇಶದಲ್ಲಿ ನೀರನ್ನು ಐದಾರು ದಿನಗಳಿಗೆ ಒಮ್ಮೆಯಾದರೂ ಗಿಡಗಳಿಗೆ ಕೊಡಬೇಕು ಯಾಕೆಂದರೆ ಈ ನೀರಿನಲ್ಲಿ ಮಣ್ಣನ್ನ ಹೀರಿಕೊಳ್ಳುವ ಸಾಮರ್ಥ್ಯ ಕಡಿಮೆ ಇರುತ್ತದೆ. ಆದರೆ ಕಪ್ಪು ಮಣ್ಣು ಇರುವ ಪ್ರದೇಶದಲ್ಲಿ ತೇವಾಂಶವನ್ನು ಹೀರಿಕೊಳ್ಳುವ ಸಾಮರ್ಥ್ಯ ಇರುವುದರಿಂದ 10 ದಿನಕ್ಕೆ ಒಮ್ಮೆ ನೀರು ಕೊಟ್ಟರೆ ಸಾಕಾಗುತ್ತದೆ.

ರೈತರು ನೀರಾವರಿ ಪದ್ಧತಿಯನ್ನು ಬೇರೆ ಬೇರೆ ರೀತಿಯಲ್ಲಿ ಮಾಡುತ್ತಾರೆ ಕೆಲವರು ಜೆಟ್ ಹಾಕಿದರೆ ಇನ್ನು ಕೆಲವರು ಸ್ಪಿಂಕ್ಲರ್ ಹಾಕುತ್ತಾರೆ. ಅಥವಾ ತೋಟಕ್ಕೆ ಹಾಯಿ ನೀರಾವರಿ ಪದ್ಧತಿಯನ್ನು ಕೂಡ ಅನುಸರಿಸಬಹುದು. ಆದರೆ ಯಾವ ತೋಟಕ್ಕೆ ಎಷ್ಟು ಪ್ರಮಾಣದಲ್ಲಿ ನೀರು ಹಾಕಬೇಕು ಎನ್ನುವುದನ್ನು ನೋಡಿಕೊಳ್ಳಬೇಕು. ಹಾಯಿ ನೀರಾವರಿ ಪದ್ಧತಿಯಲ್ಲಿ ಎಷ್ಟು ಬಾರಿ ಗಿಡಕ್ಕೆ ಹಾಕುವ ನೀರು ಇಂಗದೆ ಗಿಡದ ಮೇಲ್ಭಾಗದಲ್ಲಿ ಇರುತ್ತದೆ ಇಂತಹ ಸಂದರ್ಭದಲ್ಲಿ ಅಡಿಕೆ ಗಿಡಕ್ಕೆ ಹಿಂಗಾರು ಕೊಳೆ ಬರುವ ಸಾಧ್ಯತೆ ಇದೆ.

ಒಟ್ಟಿನಲ್ಲಿ ಅಡಿಕೆ ಗಿಡಕ್ಕೆ ಅತಿಯಾಗಿ ನೀರನ್ನು ಹಾಕಿದರೆ ಅದರಿಂದ ರೋಗ ಹೆಚ್ಚಾಗುತ್ತದೆಯೇ ಹೊರತು ಉತ್ತಮವಾದ ಫಸಲನ್ನು ಕೊಡುವುದಿಲ್ಲ. ಹೆಚ್ಚು ಹೆಚ್ಚು ನೀರನ್ನ ಕೊಡುತ್ತಾ ಹೋದಂತೆ ಗಿಡದ ಬೇರುಗಳು ಕೊಳೆಯಲು ಆರಂಭವಾಗುತ್ತದೆ. ಅದರಿಂದ ಹಿತಮಿತವಾಗಿ ನೀರನ್ನು ಕೊಡಿ ಹಾಗೂ ನಿಮ್ಮ ಮಣ್ಣಿನ ಗುಣವನ್ನು ನೋಡಿ ಅದಕ್ಕೆ ಸರಿಯಾದ ಪ್ರಮಾಣದಲ್ಲಿ ನೀರನ್ನು ಕೊಡಬೇಕು ಇದರ ಬಗ್ಗೆ ನೀವು ತೋಟಗಾರಿಕಾ ಇಲಾಖೆಯವರ ಬಳಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.

Leave A Reply

Your email address will not be published.