Loco Pilot: ರೈಲ್ವೆ ಇಲಾಖೆಯಲ್ಲಿ ಚಾಲಕರಾಗಿ ಕೆಲಸಕ್ಕೆ ಸೇರುವುದು ಹೇಗೆ ಸಂಬಳ ಎಷ್ಟಿದೆ ಇಲ್ಲಿದೆ ಮಾಹಿತಿ..!
ಅನೇಕರಿಗೆ ರೈಲ್ವೆ ಇಲಾಖೆಯಲ್ಲಿ ಕೆಲಸ ಸಿಗಬೇಕು ಎಂಬಾ ಆಸೆ ಇರುತ್ತದೆ. ಇದು ಕೇಂದ್ರ ಸರ್ಕಾರದ ಕೆಲಸ ಆಗಿರುವುದರಿಂದ ಕೆಲಸದಲ್ಲಿ ಭದ್ರತೆ ಇರುತ್ತದೆ.
ಹಾಗಾದ್ರೆ ಬನ್ನಿ ಈ ಹುದ್ದೆಯನ್ನು ಪಡೆಯುವುದು ಹೇಗೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ..
ಇನ್ನು ಭಾರತದಲ್ಲಿ ರೈಲ್ವೆ ಇಲಾಖೆ (Railway Department) ಉದ್ಯೋಗಗಳಿಗಾಗಿ ಲಕ್ಷಾಂತರ ಅಭ್ಯರ್ಥಿಗಳು ಪ್ರತಿವರ್ಷ ಪ್ರಯತ್ನಿಸುತ್ತಾರೆ. ರೈಲ್ವೆ ಜಾಬ್ ಸಿಕ್ಕರೆ ಜೀವನ ಸೆಟಲ್ ಎಂಬ ಭಾವನೆ ದೊಡ್ಡ ಸಂಖ್ಯೆಯ ಜನರಲ್ಲಿದೆ. ಅದಕ್ಕೆ ತಕ್ಕಂತೆ ಭಾರತೀಯ ರೈಲ್ವೆಯಲ್ಲೂ ಪ್ರತಿವರ್ಷ ಸಾವಿರಾರು ಹುದ್ದೆಗಳಿಗೆ ಭರ್ತಿ ಮಾಡಲಾಗುತ್ತೆ. ಪ್ರತಿ ವರ್ಷ ದೊಡ್ಡ ಸಂಖ್ಯೆಯಲ್ಲಿ ನೇಮಕಾತಿ ಮಾಡಲಾಗುತ್ತದೆ.
ಈ ಪೈಕಿ ರೈಲು ಚಾಲಕರ ಹುದ್ದೆಯೂ ಒಂದು. ರೈಲು ಚಾಲಕನನ್ನು ಲೋಕೋ ಪೈಲಟ್ (Loco Pilot) ಎಂದು ಕರೆಯಲಾಗುತ್ತದೆ, ಲೋಕೋ ಪೈಲಟ್ ಹುದ್ದೆಗಾಗಿ ಸಾವಿರಾರು ಅಭ್ಯರ್ಥಿಗಳು ಪ್ರಯತ್ನಿಸುತ್ತಾರೆ. ಲೋಕೋ ಪೈಲಟ್‌ನ ಕೆಲಸವು ತುಂಬಾ ಜವಾಬ್ದಾರಿಯುತವಾದದ್ದು. ಸರಕು ಮತ್ತು ಪ್ರಯಾಣಿಕರನ್ನು ಸುರಕ್ಷಿತವಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸುವುದು ಲೋಕೋ ಪೈಲಟ್‌ನ ಜವಾಬ್ದಾರಿಯಾಗಿದೆ. ಲೋಕೋ ಪೈಲಟ್ ಹುದ್ದೆಯು ಒಳ್ಳೆಯ ಸಂಬಳವನ್ನು ಹೊಂದಿದೆ. ರೈಲ್ವೆಯಿಂದ ಅನೇಕ ಇತರ ಪ್ರಯೋಜನಗಳು ಸಹ ಲಭ್ಯವಿದೆ. ರೈಲು ಚಾಲಕ ಅಂದರೆ ಲೋಕೋ ಪೈಲಟ್ ಆಗುವುದು ಹೇಗೆ ಎಂದು ಇಂದು ನಾವು ಇಲ್ಲಿ ತಿಳಿಸಿದ್ದೇವೆ.
ಸಾಮಾನಗರೈಲ್ವೆಯಲ್ಲಿ ಲೋಕೋ ಪೈಲಟ್ (Loco Pilot) ಹುದ್ದೆಗೆ ನೇರ ನೇಮಕಾತಿ ಇಲ್ಲ. ಮೊದಲು ಸಹಾಯಕ ಲೋಕೋ ಪೈಲಟ್ ಹುದ್ದೆಗೆ ನೇಮಕಾತಿ ಮಾಡಲಾಗುತ್ತದೆ. ಸಹಾಯಕ ಲೋಕೋ ಪೈಲಟ್ ಹುದ್ದೆಯಲ್ಲಿ ಎರಡು ವರ್ಷಗಳ ಕೆಲಸದ ಅನುಭವ ಪಡೆಯಬೇಕು.
Loco Pilot ಹುದ್ದೆಗೆ ನೇಮಕಾತಿ ಹೇಗೆ ನಡೆಯುತ್ತೆ?
ರೈಲ್ವೆಯಲ್ಲಿ ಲೋಕೋ ಪೈಲಟ್ ಹುದ್ದೆಗೆ ನೇರ ನೇಮಕಾತಿ ಇಲ್ಲ. ಮೊದಲನೆಯದಾಗಿ, ಸಹಾಯಕ ಲೋಕೋ ಪೈಲಟ್ ಹುದ್ದೆಗೆ ನೇಮಕಾತಿ ಮಾಡಲಾಗುತ್ತದೆ. ಸಹಾಯಕ ಲೋಕೋ ಪೈಲಟ್ (Loco Pilot) ಹುದ್ದೆಯಲ್ಲಿ ಎರಡು ವರ್ಷಗಳ ಕೆಲಸದ ಅನುಭವ ಪಡೆಯಬೇಕು. ಜೊತೆಗೆ 60 ಸಾವಿರ ಕಿಲೋಮೀಟರ್ ಚಾಲನೆಯ ಅನುಭವದ ನಂತರ, ಹಿರಿಯ ಲೋಕೋ ಪೈಲಟ್ ಹುದ್ದೆಯಲ್ಲಿ ಬಡ್ತಿ ಮಾಡಲಾಗುವುದು. ಇದಾದ ನಂತರ ಲೋಕೋ ಪೈಲಟ್ ಮತ್ತು ಲೋಕೋ ಸೂಪರ್ ವೈಸರ್ ಹುದ್ದೆಗೆ ಬಡ್ತಿ ಇದೆ.
ಸಹಾಯಕ ಲೋಕೋ ಪೈಲಟ್ ಹುದ್ದೆಗೆ ಯಾವೆಲ್ಲಾ ಅರ್ಹತೆಗಳಿರಬೇಕು?
ಸಹಾಯಕ ಲೋಕೋ ಪೈಲಟ್ ಆಗಿ ನೇಮಕಗೊಳ್ಳಲು ಭೌತಶಾಸ್ತ್ರ ಮತ್ತು ಗಣಿತ ವಿಷಯಗಳೊಂದಿಗೆ 10 ನೇ ಅಥವಾ 12 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಇದರೊಂದಿಗೆ ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಟೆಕ್ನಿಷಿಯನ್, ವೈರ್‌ಮ್ಯಾನ್ ಇತ್ಯಾದಿ ಟ್ರೇಡ್‌ನಲ್ಲಿ ಐಟಿಐ ಪ್ರಮಾಣೀಕರಣ ಅಥವಾ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಹೊಂದಿರುವುದು ಸಹ ಅಗತ್ಯವಾಗಿದೆ.
ಸಹಾಯಕ ಲೋಕೋ ಪೈಲಟ್ ನೇಮಕಾತಿ ಪರೀಕ್ಷೆ ಹೇಗಿರುತ್ತೆ?
ಸಹಾಯಕ ಲೋಕೋ ಪೈಲಟ್ ಹುದ್ದೆಗೆ ನೇಮಕಾತಿಗಾಗಿ ರೈಲ್ವೇ ನೇಮಕಾತಿ ಮಂಡಳಿ ನೇಮಕಾತಿ ಪರೀಕ್ಷೆಯನ್ನು ಆಯೋಜಿಸುತ್ತದೆ. RRB ಸಹಾಯಕ ಲೋಕೋ ಪೈಲಟ್‌ನ ನೇಮಕಾತಿ ಪ್ರಕ್ರಿಯೆಯು ಹಲವಾರು ಹಂತಗಳಲ್ಲಿ ನಡೆಯುತ್ತದೆ. ಲಿಖಿತ ಪರೀಕ್ಷೆಯನ್ನು ಆನ್‌ಲೈನ್ ಮೋಡ್‌ನಲ್ಲಿ ನಡೆಸಲಾಗುತ್ತದೆ.
ಸಹಾಯಕ ಲೋಕೋ ಪೈಲಟ್ ಕೆಲಸವೇನು?
ಸಿಗ್ನಲ್ ಟ್ರಾನ್ಸ್‌ಮಿಷನ್ ಮಾಡಲು ಸಹಾಯಕ ಲೋಕೋ ಪೈಲಟ್ ಅಗತ್ಯವಿದೆ, ರೈಲು ಇಂಜಿನ್ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಿ, ರಿಪೇರಿ ಕೆಲಸದಲ್ಲಿ ಹಿರಿಯರಿಗೆ ಸಹಾಯ ಮಾಡಬೇಕಾಗುತ್ತದೆ
ಸಹಾಯಕ ಲೋಕೋ ಪೈಲಟ್ ಸಂಬಳ ಎಷ್ಟಿರುತ್ತೆ?
ಏಳನೇ ವೇತನ ಆಯೋಗದ ಪ್ರಕಾರ ಸಹಾಯಕ ಲೋಕೋ ಪೈಲಟ್ (Loco Pilot) ನ ವೇತನ ಶ್ರೇಣಿ ತಿಂಗಳಿಗೆ 19,900 ರಿಂದ 35,000 ರೂಪಾಯಿ ಇರುತ್ತೆ. ಹಿರಿಯ ಸಹಾಯಕ ಲೋಕೋ ಪೈಲಟ್, ಲೋಕೋ ಪೈಲಟ್ ಮತ್ತು ಲೋಕೋ ಮೇಲ್ವಿಚಾರಕ ಹುದ್ದೆಗೆ ಬಡ್ತಿಯೊಂದಿಗೆ ಸಂಬಳವೂ ಹೆಚ್ಚಾಗುತ್ತದೆ.
ಭಾರತದಲ್ಲಿ ಚಾಲಕರು ಆಕರ್ಷಕ ಕೇಂದ್ರ ಸರ್ಕಾರದ ರೈಲು ಚಾಲಕ ವೇತನವನ್ನು ಪಡೆಯುತ್ತಾರೆ ಆದರೆ ಬಹಳಷ್ಟು ಪ್ರಯೋಜನಗಳನ್ನು ಪಡೆಯುತ್ತಾರೆ.
ಈ ಉದ್ಯೋಗವು ಇತ್ತೀಚಿನವರೆಗೂ ಪುರುಷ ಭದ್ರಕೋಟೆಯಾಗಿತ್ತು, ಈಗ ಲಿಂಗ ಸಮಾನತೆ ಅನುಸರಿಸುವ ರೂಢಿಯಾಗಿರುವುದರಿಂದ ಅದನ್ನು ರದ್ದುಗೊಳಿಸಲಾಗಿದೆ ಈಗ ಮಹಿಳೆರಿಗೂ ಕೂಡಾ ಸಮಾನ ಅವಕಾಶಗಳಿವೆ. ಕೆಲಸದ ಸ್ಥಳವು RRB ಅಥವಾ ಪ್ರಾದೇಶಿಕ ರೈಲ್ವೆ ಮಂಡಳಿಯ ಅಗತ್ಯತೆಗಳ ಮೇಲೆ ಅವಲಂಬಿತವಾಗಿದೆ ಇನ್ನು ಬೆಂಗಳೂರು, ಹೈದರಾಬಾದ್, ಗುರ್ಗಾಂವ್, ಪುಣೆ, ಮುಂಬೈ, ಚೆನ್ನೈ ಮುಂತಾದ ಸ್ಥಳಗಳು ಸ್ವಲ್ಪ ಉತ್ತಮ ಸಂಬಳ ನೀಡುತ್ತದೆ ಎನ್ನಲಾಗಿದೆ.