Leelavathi: ಇಳಿವಯಸ್ಸಿನಲ್ಲಿ ಜೀವನದ ಮಹತ್ವದ ಕೆಲಸಕ್ಕೆ ಮುಂದಾದ ನಟಿ ಲೀಲಾವತಿ
ನಟಿ ಲೀಲಾವತಿ (Leelavathi) ಅವರು ಕನ್ನಡ ಸಿನೆಮಾ ರಂಗಕ್ಕೆ ನೀಡಿದ್ದ ಕೊಡುಗೆಯನ್ನು ಇಂದಿಗೂ ನಾವೆಲ್ಲ ಸ್ಮರಿಸುವಂತದ್ದು. ಒಂದು ಕಾಲದಲ್ಲಿ ಟಾಪ್ ಹೀರೋಯಿನ್ ಆಗಿ ಇದ್ದ ನಟಿ ಬಳಿಕ ಪೋಷಕ ಪಾತ್ರದ ಮೂಲಕ ಜನರನ್ನು ರಂಜಿಸಿದರು. ಈಗ ಎಲ್ಲದರಿಂದಲೂ ದೂರ ಆಗಿ ಈ ಮೂಲಕ ತೋಟದ ಮನೆಯಲ್ಲಿ ಮಗ ವಿನೋದ್ ರಾಜ್ ಅವರ ಜೊತೆ ವಾಸವಾಗಿದ್ದಾರೆ. ಈ ಮೂಲಕ ತಾಯಿಯ ಮನ ದಾಸೆಯನ್ನು ಮಗ ವಿನೋದ್ ಈಡೇರಿಸಿದ್ದಾರೆ.
ಮನದಾಸೆ ಈಡೇಸಿದ್ದ ಮಗ:
ನಟಿ ಲೀಲಾವತಿ ಅವರಿಗೆ ತಮ್ಮ ಹುಟ್ಟೂರಲ್ಲಿ ಒಂದು ಧರ್ಮಧಾಸ್ಪತ್ರೆ ಕಟ್ಟಿಸಬೇಕೆಂಬ ಆಸೆ ಇತ್ತು. ಈ ಮೂಲಕ ಮಗ ವಿನೋದ್ ರಾಜ್ ಕುಮಾರ್ (Vinodh Rajkumar) ಅವರು ಈ ಆಸೆಯನ್ನು ಈಡೇರಿಸಿದ್ದಾರೆ. ಈ ಮೂಲಕ ಆಸ್ಪತ್ರೆಯ ಉದ್ಘಾಟನೆಯನ್ನು ಸಿಎಂ ಬೊಮ್ಮಾಯಿ (CM Bommai) ಅವರು ನೆರವೇರಿಸಿದ್ದರು. ಇನ್ನು ಪ್ರಾಣಿಗಳಿಗೂ ಒಂದು ವ್ಯವಸ್ಥೆ ಮಾಡಬೇಕು ಎಂಬ ಆಸೆ ಇತ್ತು ಹಾಗಾಗಿ ಅವರ ಮಗನ ಬಳಿ ಈ ಬಗ್ಗೆ ಮಾತಾಡಿದ್ದಾರೆ. ವಿನೋದ್ ರಾಜ್ ಅವರು ಬೆಂಗಳೂರಿನ ಹೊರವಲಯದಲ್ಲಿ ಪಶು ಆಸ್ಪತ್ರೆ ಮುಂದಾಗಿದ್ದಾರೆ.
ಪ್ರಾಣೆಗಳೆಂದರೇ ಬಹಳ ಪ್ರೀತಿ:
ಮೊದಲಿಂದಲೂ ಕೃಷಿ , ಹೈನುಗಾರಿಕೆ ಮುಂತಾದವುಗಳ ಒಲವಿದ್ದ ಲೀಲಾವತಿ ಅವರಿಗೆ ಪ್ರಾಣಿಗಳೆಂದರೆ ತುಂಬಾ ಇಷ್ಟ ಹಾಗಾಗಿ ಅವುಗಳಿಗೆ ಸೇವೆ ನೀಡಲು ಪಶು ಆಸ್ಪತ್ರೆ ಮಾಡಲು ಲೀಲಾವತಿ ಅವರು ಮುಂದಾಗುತ್ತಿದ್ದಾರೆ. ಈ ಮೂಲಕ ಅಲ್ಲಿನ ಸ್ಥಳೀಯರು ಜಾಗವನ್ನು ಉಚಿತವಾಗಿ ನೀಡಿದ್ದಾರೆ, ಅದನ್ನು ಸದುಪಯೋಗ ಪಡಿಸಿ ಆದಷ್ಟು ಬೇಗ ಆಸ್ಪತ್ರೆ ನಿರ್ಮಿಸಬೇಕು ಎಂದಿದ್ದಾರೆ ನಟಿ ಲೀಲಾವತಿ. ಲೀಲಾವತಿಯವರಿಗೆ ಸುಮಾರು 85ಕ್ಕೂ ಹೆಚ್ಚು ವಯಸ್ಸಾಗಿದೆ. ಹಾಗಿದ್ದರೂ ಸಮಾಜ ಸೇವೆಯಲ್ಲಿ ತಮ್ಮನ್ನು ಅವರು ತೊಡಗಿಸಿಕೊಂಡಿದ್ದಾರೆ.
ಜಮೀನು ಮಾರಿ ಆಸ್ಪತ್ರೆ ನಿರ್ಮಾಣಕ್ಕೆ ಮುಂದಾದ ಲೀಲಾವತಿ:
ವಿವಿಧ ಹಳ್ಳಿಗಳಿಗೆ ಮೂಲ ಸೌಕರ್ಯದ ಕೊರತೆ ಇರುವ ಸ್ಥಳಗಳಿಗೆ ಸಹಾಯ ಮಾಡಿದ್ದಾರೆ, ತಮ್ಮ ಸ್ವಂತ ಜಮೀನು ಮಾರಿ, ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಕನ್ನಡ ಚಿತ್ರರಂಗದ ಹಿರಿಯ ನಟಿ ಡಾ.ಎಂ.ಲೀಲಾವತಿ ಮುಂದಾಗಿದ್ದಾರೆ. ಸಮಾಜ ಸೇವೆಯಲ್ಲೇ ಸಾರ್ಥಕತೆಯನ್ನ ಕಂಡಿದ್ದಾರೆ ಇವರು, ಲೀಲಾವತಿಯವರ ವೈಯಕ್ತಿಕ ಬದುಕಿಗೂ, ಬಣ್ಣದ ಬದುಕಿಗೆ ಅಷ್ಟೇನೂ ವ್ಯತ್ಯಾಸವಿಲ್ಲ. ಅವರ ರೀಲ್ ಮತ್ತು ರಿಯಲ್ ಲೈಫ್ಗಳೆರಡುಗೂ ಹೋರಾಟ ಮಾಡುತ್ತ ಲೇ ಇದ್ದಾರೆ, ಈ ಮೂಲಕ ತಮಗೆ ಕಷ್ಟ ವಿದ್ದರೂ ಕಷ್ಟ ದಲ್ಲಿದ್ದವರಿಗೆ ಸಹಾಯ ಮಾಡುತ್ತಲೇ ಬಂದಿದ್ದಾರೆ