ಬೆಂಗಳೂರು ನಗರದಲ್ಲಿ ಅರ್ಧಕ್ಕರ್ದದಷ್ಟು ರಸ್ತೆಯಲ್ಲಿ ಟ್ರಾಫಿಕ್(Traffic) ಕಡಿಮೆ ಆಗಿರುವುದಕ್ಕೆ ಮೆಟ್ರೋದಲ್ಲಿ ಜನ ಓಡಾಡುತ್ತಿರುವುದೇ ಕಾರಣ ಎನ್ನಬಹುದು. ಈಗಾಗಲೇ ಮೆಟ್ರೋ ಎರಡು ಪರ್ಪಲ್ ಹಾಗೂ ಪಿಂಕ್ ಲೈನ್ಗಳಲ್ಲಿ ಚಲಿಸುತ್ತದೆ ಸಾಮಾನ್ಯವಾಗಿ ಮೆಟ್ರೋ ಸದಾ ಜನರಿಂದ ತುಂಬಿ ತುಳುಕಾಡುತ್ತದೆ ಹೀಗಾಗಿ ಪ್ರಯಾಣಿಕರಿಗೆ ಅನುಕೂಲವಾಗಲು ಒಂದು ಹೊಸ ಬದಲಾವಣೆ ಜಾರಿಗೆ ಬರಲಿದ್ದು, ಬಿ ಎಂ ಆರ್ ಸಿ ಎಲ್ ಅಧಿಕಾರಿಗಳು ಇದರ ಬಗ್ಗೆ ಸ್ಪಷ್ತನೆ ನೀಡಿದ್ದಾರೆ.
ಹೆಚ್ಚುವರಿ ಟ್ರಿಪ್ ಮಾಡಲಿರುವ ಮೆಟ್ರೋ
ಮೆಟ್ರೋದಲ್ಲಿ ಪ್ರಯಾಣಿಸುವವರ ಸಂಖ್ಯೆ ಜಾಸ್ತಿ ಆಗುತ್ತಿರುವ ಕಾರಣ ಜನರಿಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕೆ ಸೋಮವಾರದಿಂದ ಶುಕ್ರವಾರದ ವರೆಗೆ ನೇರಳೆ ಮಾರ್ಗದಲ್ಲಿ ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್ ನಿಂದ ಮಹಾತ್ಮ ಗಾಂಧಿ ರಸ್ತೆ ಮೆಟ್ರೋ ಸ್ಟೇಷನ್ ವರೆಗೆ ಹೆಚ್ಚುವರಿ ಟ್ರಿಪ್ ಮಾಡಲು ನಿರ್ಧರಿಸಲಾಗಿದೆ. ಇದನ್ನು ಆರಂಭದಲ್ಲಿ ಪ್ರಾಯೋಗಾತ್ಮಕವಾಗಿ ಮಾತ್ರ ಬಿಡಲಾಗುವುದು. ಇದು ಸರ್ಕಾರಕ್ಕೆ ಹೆಚ್ಚಿನ ಹೊರೆ ಆಗದೆ ಜನರಿಗೆ ಅನುಕೂಲವಾಗುವಂತಿದ್ದರೆ ಬಹುಶ: ಕಂಟಿನ್ಯೂ ಆಗಬಹುದು.
ಮುಂದುವರಿದ ಪಿಂಕ್ ಮಾರ್ಗದ ಕಾಮಗಾರಿ:
ಮಹಾತ್ಮ ಗಾಂಧಿ ರಸ್ತೆಯಿಂದ ಬೈಯಪ್ಪನ ಹಳ್ಳಿಗೆ ಹೋಗುವ ಜನರು ಮಹಾತ್ಮ ಗಾಂಧಿ ರಸ್ತೆ ಮೆಟ್ರೋ ಸ್ಟೇಷನ್ ನಲ್ಲಿ ಇಳಿದು ಅಲ್ಲಿಂದ ಬೈಯಪ್ಪನಹಳ್ಳಿ ಮೆಟ್ರೋ ಹತ್ತಿ ಹೋಗಬಹುದು ಎಂಬುದಾಗಿ ಬಿ ಎಂ ಆರ್ ಸಿ ಎಲ್ ಮಾಹಿತಿ ನೀಡಿದೆ.
721 ಮೀಟರ್ ನ ಸುರಂಗ ಮಾರ್ಗ:
ಪಿಂಕ್ ಮಾರ್ಗ ಕಾಮಗಾರಿ ಈಗಾಗಲೇ ನಡೆಯುತ್ತಿದೆ. ಲಕ್ಕಸಂದ್ರ ಬಳಿ ಸುರಂಗ ಮಾರ್ಗ ಕೊರೆದು, ವಮಿಕಾ ಟಿ ಬಿ ಎಂ ಯಂತ್ರ 721 ಮೀಟರ್ ನ ಸುರಂಗ ಮಾರ್ಗವನ್ನು ಕೊರೆದು ಲ್ಯಾಂಗೋರ್ಡ್ ಟೌನ್ ನಿರ್ಮಾಣ ಮಾಡಲಾಗಿದ್ದು ಬುಧವಾರ ಯಶಸ್ವಿಯಾಗಿದೆ.
ಲಕ್ಕಸಂದ್ರ ನಿಲ್ದಾಣದಿಂದ ಕಳೆದ ಏಪ್ರಿಲ್ ನಿಂದಲೇ ಕಾಮಗಾರಿ ಆರಂಭವಾಗಿದೆ. ರೀಚ್ 6ರಲ್ಲಿ 20.991 ಕೀ. ಮೀಟರ್ ಸುರಂಗ ಮಾರ್ಗ ನಿರ್ಮಾಣವಾಗಬೇಕಾಗಿದ್ದು ಅದರಲ್ಲಿ 17. 62 ಕಿವಿ ಹೊರಗಿನ ಸುರಂಗ ಮಾರ್ಗದ ಕಾರ್ಯ ಪೂರ್ಣಗೊಂಡಿದೆ.
ರೀಚ್ 6 ರ 9 ಟನಲ್ ಬೋರಿಂಗ್ ಮಷೀನ್ (ಟಿಬಿಎಂ) ಗಳಲ್ಲಿ ಈಗಾಗಲೇ ಆರು ಟನಲ್ ಬೋರಿಂಗ್ ನ ಕಾಮಗಾರಿ ಒಂದು ಹಂತಕ್ಕೆ ಮುಕ್ತಾಯವಾಗಿದೆ. ಸೌತ್ ರಾಂಪ್ ಹಾಗೂ ಡೈರಿ ಸರ್ಕಲ್ ಸುರಂಗ ಮಾರ್ಗಗಳ ನಡುವೆ 613.2 ಮೀಟರ್, ಡೈರಿ ಸರ್ಕಲ್ ನಿಂದ ಲಕ್ ಸಂದ್ರ ನಿಲ್ದಾಣದ ನಡುವೆ 743 ಕಿಲೋಮೀಟರು ಸುರಂಗ ಮಾರ್ಗದ ಕಾರ್ಯ ಮುಗಿಸಲಾಗಿದೆ. ಎಂದು ಬಿ ಎಂ ಆರ್ ಸಿ ಎಲ್ ಅಧಿಕಾರಿಗಳು ಸಂಪೂರ್ಣ ಮಾಹಿತಿ ಒದಗಿಸಿದ್ದಾರೆ.
ಈ ಎಲ್ಲಾ ಕಾಮಗಾರಿಗಳು ಪೂರ್ಣಗೊಳ್ಳುತ್ತಿದ್ದಂತೆ ಬೆಂಗಳೂರಿನ ಮೆಟ್ರೋ ಇನ್ನಷ್ಟು ವಿಸ್ತಾರವಾಗಲಿದ್ದು ಸಾಕಷ್ಟು ಪ್ರಯಾಣಿಕರಿಗೆ ಅನುಕೂಲವಾಗಲಿದೆ.