Nita Ambani: ರಕ್ಷಾ ಬಂಧನಕ್ಕೆ ವಿಶೇಷ ಸೀರೆಯುಟ್ಟ ನೀತಾ ಅಂಬಾನಿ! ಬೆಲೆ ಎಷ್ಟು ಗೊತ್ತಾ?

Advertisement
ಉದ್ಯಮಿ ಮುಕೇಶ್ ಅಂಬಾನಿ (Mukesh Ambani) ಹಾಗೂ ಅವರ ಪತ್ನಿ ನೀತಾ ಅಂಬಾನಿ ಒಂದಲ್ಲ ಒಂದು ವಿಚಾರದಲ್ಲಿ ಸುದ್ದಿಯಾಗುತ್ತಾರೆ. ಅದರಲ್ಲಿಯೂ ನೀತ ಅಂಬಾನಿ ಅವರ ಬಗ್ಗೆ ಸಾಕಷ್ಟು ಮಾಹಿತಿಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತವೆ. ಇತ್ತೀಚೆಗೆ ನೀತಾ ಅಂಬಾನಿ (Nita Ambani) ಅವರು ರಿಲಯನ್ಸ್ ಫೌಂಡೇಶನ್ ಆಯೋಜಿಸಲಾಗಿದ್ದ 46ನೇ ವಾರ್ಷಿಕ ಸಾಮಾನ್ಯ ಸಭೆಯ ಕೈಯಿಂದ ನಗೆ ಮಾಡಲಾದ ಬನಾರಸಿ ಸೀರೆಯನ್ನು ಉಟ್ಟು ಮಿಂಚಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಇವರು ಧರಿಸಿದ್ದ ಸೀರೆಯ ನೆಲೆ ಎಷ್ಟಿರಬಹುದು ಎಂದು ಎಲ್ಲರೂ ಊಹಿಸುವುದಕ್ಕೆ ಶುರು ಮಾಡಿದ್ದಾರೆ.
46ನೇ ಎಜಿಎಂ ನಲ್ಲಿ ಮಿಂಚಿದ ನೀತಾ ಅಂಬಾನಿ!
ನೀತಾ ಅಂಬಾನಿ ಸಾಕಷ್ಟು ಐಶಾರಾಮಿ ವಸ್ತುಗಳನ್ನು ಬಳಸುತ್ತಾರೆ. ಆದರೆ ಅವೆಲ್ಲ ನೋಡುವುದಕ್ಕೆ ಬಹಳ ಸಿಂಪಲ್ ಆಗಿರುತ್ತೆ. ಅದರ ಬೆಲೆ ಕೇಳಿದ್ರೆ ಮಾತ್ರ ನಿಮಗೆ ಶಾಕ್ ಆಗೋದು ಗ್ಯಾರಂಟಿ. ಉದ್ಯಮಿ ನೀತಾ ಅಂಬಾನಿ ಅವರು ತಾವು ಯಾವುದೇ ದೊಡ್ಡ ಕಾರ್ಯಕ್ರಮಕ್ಕೆ ಭಾಗವಹಿಸುವುದಿದ್ದರು ಸಾಂಪ್ರದಾಯಿಕ ಸೀರೆಯನ್ನು ಕೊಡುತ್ತಾರೆ.
ಈ ಸೀರೆಗಳು ಬಹುತೇಕ ಕೈಯಿಂದ ನೇಯ್ಗೆ ಮಾಡಿದ್ದೆ ಆಗಿರುತ್ತದೆ. ನೀತಾ ಅಂಬಾನಿ ಅವರ ಸೀರೆಯನ್ನು ತಯಾರು ಮಾಡಲು ಕನಿಷ್ಠ ಒಂದರಿಂದ ಎರಡು ತಿಂಗಳು ವಿಶೇಷವಾಗಿ ಕಾಲಾವಕಾಶವನ್ನು ತೆಗೆದುಕೊಂಡು ಕುಶಲಕರ್ಮಿಗಳು ಡಿಸೈನ್ ಮಾಡುತ್ತಾರೆ. ಇತ್ತೀಚಿಗೆ ನಡೆದ ರಿಲಯನ್ಸ್ ಇಂಡಸ್ಟ್ರಿ ಲಿಮಿಟೆಡ್ ನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ, ನೀತಾ ಅಂಬಾನಿ (Nita Ambani) ರಿಲಯನ್ಸ್ ಕುಟುಂಬವನ್ನು ಉದ್ದೇಶಿಸಿ ಮಾತನಾಡಿದ್ದಾರೆ, ತಮ್ಮ ಫೌಂಡೇಶನ್ ಹಲವು ಕೆಲಸಗಳಿಗೆ ಸ್ಥಳೀಯ ಕುಶಲಕರ್ಮಿಗಳ ಬೆಂಬಲಕ್ಕೆ ಹೆಸರುವಾಸಿಯಾಗಿದೆ ಎಂಬುದಾಗಿ ತಿಳಿಸಿದ್ದಾರೆ. ತಮ್ಮ ಜೊತೆಗೆ ಕೆಲಸ ಮಾಡುವ ಎಂಪ್ಲಾಯಿಗಳ ಯೋಗಕ್ಷೇಮವನ್ನು ಕೂಡ ರಿಲ್ಯಾನ್ಸ್ ಚೆನ್ನಾಗಿ ನೋಡಿಕೊಳ್ಳುತ್ತದೆ. ಇನ್ನು ಈ ಸಂದರ್ಭದಲ್ಲಿ ನೀತಾ ಅಂಬಾನಿ ಕೈಯಿಂದ ನೀಗೆ ಮಾಡಿದ ಬ್ರೋಕೆಡ್ ಬನಾರಸಿ ಸೀರೆ ಆಯ್ದುಕೊಂಡಿದ್ದರು.
ಅತ್ಯಂತ ದುಬಾರಿ ಈ ಸೀರೆ:
42ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ನೀತಾ ಅಂಬಾನಿ (Nita Ambani) ಲೆವೆಂಡರ್ ಅಥವಾ ತಿಳಿ ಗುಲಾಬಿ ಬಣ್ಣದ ಬನಾರಸಿ ಬ್ರೋಕೆಡ್ ಸಾರಿ ಅನ್ನು ಮ್ಯಾಚಿಂಗ್ ಬ್ಲೌಸ್ ನೊಂದಿಗೆ ಧರಿಸಿದ್ದು ಜನರ ಗಮನ ಸೆಳೆದಿದೆ. ಯಾಕೆಂದರೆ ಈ ಸೀರೆಯನ್ನು ಇಕ್ಬಾಲ್ ಅಹಮದ್ ಎನ್ನುವವರು ಕೈಯಿಂದ ನೇಯ್ಗೆ ಮಾಡಿದ್ದು. ಈ ಸೀರಿಯ ವಿನ್ಯಾಸ ಕ್ಲಾಸಿಕ್ ಜರಿ ಬಾರ್ಡರ್ ಎಲ್ಲವೂ ಬಹಳ ವಿಶೇಷವಾಗಿದ್ದು ಆಕರ್ಷಣೀಯವಾಗಿತ್ತು.
ನಿತಾಂಬನಿಯವರು ಇಂತಹ ಸೀರೆಯನ್ನು ಧರಿಸುವುದರ ಮೂಲಕ ವಾರಣಾಸಿಯ ಶತಮಾನಗಳಷ್ಟು ಹಳೆಯ ಕರಕುಶಲತೆಗೆ ಮಹತ್ವ ನೀಡಿದ್ದಾರೆ. ಸ್ವದೇಶಿ ಕರಕುಶಲತೆಗೆ ಹೆಚ್ಚಿನ ಗೌರವ ನೀಡುವ ನೀತಾ ಅಂಬಾನಿ ಧರಿಸಿದ್ದ ಸೀರೆ ಕೂಡ ನೋಡುವುದಕ್ಕೆ ಸಿಂಪಲ್ ಆಗಿದ್ದರೂ ಸಾಕಷ್ಟು ದುಬಾರಿಯಾಗಿತ್ತು. ಈ ಸೀರೆಯ ಬೆಲೆ 1.4 ಲಕ್ಷಗಳಿಗಿಂತಲೂ ಅಧಿಕ. ಈ ಸೀರಿಯಲ್ ಉಟ್ಟು ಕೋಲ್ ರಿಂಗ್ ಐಸ್, ತಿಳಿ ಗುಲಾಬಿ ಬಣ್ಣದ ಲಿಪ್ಸ್ಟಿಕ್ ವಜ್ರದ ಕಿವಿ ಓಲೆ ವಜ್ರದ ಬಳೆ ಹಾಗೂ ಉದ್ದವಾದ ಮುತ್ತಿನ ಹಾರ ಧರಿಸಿ ನೀತಾ ಅಂಬಾನಿ ಲಕ್ಷ್ಮಿಯಂತೆ ಕಂಗೊಳಿಸಿದ್ದಾರೆ.
ಈ ಹಿಂದೆಯೂ ಎಸ್ ನಲ್ಲಿ ಶ್ವೇತ ಭವನದಲ್ಲಿ ಪ್ರಧಾನ ನರೇಂದ್ರ ಮೋದಿ (Narendra Modi) ಅವರ ಜೊತೆಗಿನ ಡಿನ್ನರ್ ಸಂದರ್ಭದಲ್ಲಿ ನೀತಾ ಅಂಬಾನಿ ಧರಿಸಿದ ಗುಜರಾತ್ ನ ಪಟಾನ್ ಸೀರೆ ಕೂಡ ಸಾಕಷ್ಟು ಫೇಮಸ್ ಆಗಿತ್ತು, ಇದರ ಬೆಲೆ ಕೂಡ ಒಂದುವರೆ ಲಕ್ಷಕ್ಕಿಂತ ಅಧಿಕವಾಗಿದ್ದು ಈ ಸೀರೆ ಒಂದನ್ನು ನೇಯ್ಗೆ ಮಾಡಲು ಕನಿಷ್ಠ ಎರಡು ತಿಂಗಳ ಅವಧಿ ತೆಗೆದುಕೊಳ್ಳಲಾಗಿತ್ತು.