Election Rules: ಜಾತ್ರೆ ಸಮಾರಂಭಕ್ಕೂ ತಟ್ಟುತ್ತಾ ನೀತಿಸಂಹಿತೆ? ಇಲ್ಲಿದೆ ರಿಪೋರ್ಟ್

Advertisement
ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈ ಬಾರಿಯ ರಾಜ್ಯಸಭೆ ಚುನಾವಣೆ (Rajyasabha Election) ಇದೇ ಮೇ 10ರಂದು ನಡೆಯಲಿದ್ದು ಫಲಿತಾಂಶ ಮೇ 13 ರಂದು ಹೊರಬರಲಿದೆ ಎನ್ನುವುದಾಗಿ ಚುನಾವಣಾ ಆಯೋಗ ಈಗಾಗಲೇ ಅಧಿಕೃತವಾಗಿ ಘೋಷಿಸಿದೆ. ಈಗಾಗಲೇ ಚುನಾವಣಾ ಸಂಹಿತೆ ಕೂಡ ಜಾರಿಗೆ ತರಲಾಗಿದೆ. ಹೀಗಾಗಿ ರಾಜಕೀಯ ಪ್ರೇರಿತ ಭಾಷಣಗಳನ್ನು ಮಾಡುವುದು ಹಾಗೂ ಪ್ರಚಾರ ಮಾಡುವುದು ಸೇರಿದಂತೆ ಇದಕ್ಕೆ ಸಂಬಂಧಿಸಿದ ಯಾವುದೇ ಕಾರ್ಯಗಳನ್ನು ಕೂಡ ಮಾಡುವಂತಿಲ್ಲ ಎಂಬುದನ್ನು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.
ಎಲ್ಲಕ್ಕಿಂತ ಪ್ರಮುಖವಾಗಿ ಈ ಜಾತ್ರೆ ಹಾಗೂ ಧಾರ್ಮಿಕ ಸಮಾರಂಭಗಳಲ್ಲಿ(Religious Function) ರಾಜಕೀಯ ಪ್ರೇರೇಪಿಸಿದ ಭಾಷಣಗಳನ್ನು ಮಾಡುವವರ ಸಂಖ್ಯೆ ಕೂಡ ಕೆಲವೊಮ್ಮೆ ಕಂಡುಬರುತ್ತಿದ್ದು ಅದರ ಕುರಿತಂತೆ ಕೂಡ ಚುನಾವಣಾ ಆಯೋಗದ ಅಧಿಕಾರಿಯಾಗಿರುವಂತಹ ಮನೋಜ್ ಕುಮಾರ್ ಮೀನಾ ಇತ್ತೀಚಿಗಷ್ಟೇ ಸುದ್ದಿಗೋಷ್ಠಿ ನಡೆಸಿ ಇದರ ಕುರಿತಂತೆ ಅಧಿಕೃತವಾಗಿ ಹೇಳಿಕೆಯನ್ನು ನೀಡಿದ್ದಾರೆ.
ಈಗಾಗಲೇ ಚುನಾವಣಾ ಸಂಹಿತೆ ಜಾರಿಗೆ ಬಂದಿದ್ದು ರಾಜಕಾರಣಿಗಳ ಎಲ್ಲಾ ಕಾರ್ಯಭಾರ ಕೂಡ ಮುಕ್ತಾಯವಾಗುತ್ತದೆ ಹೀಗಾಗಿ ಈ ಹಿಮಾಲಯದಲ್ಲಿ ಯಾವುದೇ ಧಾರ್ಮಿಕ ಕಾರ್ಯಕ್ರಮಗಳಲ್ಲಾಗಲಿ ಅಥವಾ ಎಲ್ಲೇ ಆಗಲಿ ರಾಜಕೀಯ ಪ್ರೇರಿತ ಸಮಾರಂಭಗಳನ್ನು ನಡೆಸುವುದು ಹಾಗೂ ಪ್ರಚೋದಿತ ಭಾಷಣಗಳನ್ನು ಮಾಡುವುದು ನಿಶಿದ್ಧವಾಗಿದ್ದು ಒಂದುವೇಳೆ ಅವರು ಮಾಡಿದರೆ ಅವರ ಮೇಲೆ ಕಾನೂನು ರೀತಿಯಾದಂತಹ ಕ್ರಮವನ್ನು ಕೈ ತೆಗೆದುಕೊಳ್ಳಲಾಗುವುದು ಎಂಬುದಾಗಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಯಾವುದೇ ಹೊಸ ಕಾರ್ಯಕ್ರಮವನ್ನು ಕೂಡ ಅನುಷ್ಠಾನಗೊಳಿಸುವಂತಿಲ್ಲ.
ಇದೇ ಮೇ 10 ರಂದು ರಾಜ್ಯದ 224 ವಿಧಾನಸಭೆ ಕ್ಷೇತ್ರದಲ್ಲಿ ಚುನಾವಣೆ ನಡೆಯಲಿದ್ದು, ಏಪ್ರಿಲ್ 11ರವರೆಗೆ ಮತದಾರರ ಪಟ್ಟಿಗೆ ಸೇರಲು ಅವಕಾಶವನ್ನು ನೀಡಲಾಗುತ್ತಿದೆ. ಈಗಾಗಲೇ ಚುನಾವಣಾ ಸಂಹಿತೆ ಜಾರಿ ಆಗಿರುವ ಹಿನ್ನೆಲೆಯಲ್ಲಿ ಸಂಹಿತೆ ಉಲ್ಲಂಘನೆ ಆಗುವಂತಹ ಯಾವುದೇ ಕಾರ್ಯಗಳು ನಡೆದಲ್ಲಿ ಅವರ ವಿರುದ್ಧ ಕಠಿಣ ಕ್ರಮವನ್ನು ಕೈ ತೆಗೆದುಕೊಳ್ಳಲಾಗುತ್ತದೆ ಎಂಬುದಾಗಿ ಮುಖ್ಯ ಚುನಾವಣಾ ಅಧಿಕಾರಿ(Election Commissioner) ತಿಳಿಸಿದ್ದಾರೆ.