Kiccha Sudeep: IT ದಾಳಿಗೆ ಹೆದರಿ ಬಿಜೆಪಿ ಸೇರಿದ್ರಾ ಎಂದವನಿಗೆ ಉತ್ತರ ಕೊಟ್ಟ ಕಿಚ್ಚ

Advertisement
ಸದ್ಯ ಕಳೆದ ಕೆಲವು ದಿನಗಳಿಂದ ಕಿಚ್ಚ ಸುದೀಪ್ (Kiccha Sudeep) ರವರು ಬಿಜೆಪಿ (BJP) ಸೇರುತ್ತಾರೆ ಎಂಬ ಸುದ್ದಿ ದೊಡ್ಡಮಟ್ಟದಲ್ಲಿ ಹರಿದಾಡುತ್ತಲೇ ಇದೆ. ಇನ್ನು ಕಿಚ್ಚ ಸುದೀಪ್ ಬಿಜೆಪಿ ಸೇರುತ್ತಾರೆ ಎನ್ನುವ ಸುದ್ದಿ ಹೊರ ಬೀಳುತ್ತಿದ್ದಂತೆ ಪರ-ವಿರೋಧ (For and Against) ಚರ್ಚೆ ಪ್ರಾರಂಭ ಆಗಿದ್ದು ಇದೇ ಸಂಧರ್ಭದಲ್ಲಿ ನಟ ಪ್ರಕಾಶ್ ರಾಜ್ (Prakash Raj) ಟ್ವೀಟ್ (Tweet) ಮಾಡಿ ನಮ್ಮ ಕಿಚ್ಚ ಮಾರಿಕೊಳ್ಳುವವರಲ್ಲ ಎಂದಿದ್ದಾರೆ. ಹೌದು ಕರ್ನಾಟಕದಲ್ಲಿ (Karnataka) ಸೋಲುವ ಭಯದಲ್ಲಿ . ಭ್ರಷ್ಟ BJP ಹರಡುತ್ತಿರುವ ಸುಳ್ಳು ಸುದ್ದಿ ಎಂದು ನಾನು ನಂಬುತ್ತೇನೆ . ನಮ್ಮ ಕಿಚ್ಚ ಮಾರಿಕೊಳ್ಳುವವರಲ್ಲ ಎಂದು ಬಹುಭಾಷಾ ನಟ ಪ್ರಕಾಶ್ ರಾಜ್ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ನಿನ್ನೆ ಮಧ್ಯಾಹ್ನ ಎರಡು ಗಂಟೆ ವೇಳೆಗೆ ಬೆಂಗಳೂರಿನ ಅಶೋಕ ಹೊಟೇಲ್‌ನಲ್ಲಿ (Ashoka Hotel Banglore) ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಮತ್ತು ಕಿಚ್ಚ ಸುದೀಪ್ ಪತ್ರಿಕಾಗೋಷ್ಠಿಯಲ್ಲಿ (Press Conference) ಭಾಗವಹಿಸಿದ್ದು ಈ ವೇಳೆ ಸುದೀಪ್ ಬಿಜೆಪಿಗೆ ಸೇರುತ್ತಾರಾ ಇಲ್ವಾ ಎಂಬ ಸ್ಪಷ್ಟನೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ನೀಡಿದ್ದಾರೆ.
ಸ್ಪಷ್ಟನೆ ನೀಡಿದ ಸಿ ಎಂ.
ಮೊದಲು ಆತ್ಮೀಯ ಮಾಧ್ಯಮ ಮಿತ್ರರೇ ತಾವೆಲ್ಲಾ ನಿನ್ನೆಯಿಂದ ನಿರೀಕ್ಷೆ ಮಾಡಲಾಗಿದ್ದಂತಹ ಸುದ್ದಿ ಇದೀಗ ನಿಜವಾಗಿದೆ ಎಂದು ಮಾತನ್ನು ಪ್ರಾರಂಭಿಸಿದ ಬಸವರಾಜ ಬೊಮ್ಮಾಯಿ ರವರು ನಿಮ್ಮ ಊಹೆ ಸರಿಯಾಗಿದೆ ಅದಕ್ಕಾಗಿ ನಿಮಗೆ ಅಭಿನಂದನೆಗಳು ಎಂದರು. ಇನ್ನು ಕಿಚ್ಚ ಸುದೀಪ್ ಕುರಿತು ಮಾತನಾಡಿದ ಬಸವರಾಜ ಬೊಮ್ಮಾಯಿ ರವರು ನಮ್ಮವರೇ ಆದಂತಹ ಆತ್ಮೀಯರು ಎಂಬುದು ನಿಮಗೆ ಗೊತ್ತಿದೆ.. ಇನ್ನು ಅವರು ಈವತ್ತು ತಮ್ಮ ನಿಲುವನ್ನು ಪ್ರಕಟಣೆ ಮಾಡಲಿದ್ದು ಆ ನಂತರ ನಾನು ಅದರ ಬಗ್ಗೆ ಮಾತನಾಡುತ್ತೇನೆ ಎಂದು ತೀರ್ಮಾನವನ್ನು ತಿಳಿಸಲು ಸುದೀಪ್ ಅವರ ಕೈಗೆ ಮೈಕ್ ನೀಡಿದರು.
ಕಿಚ್ಚನ ನಿಲುವೇನು?
ನಟ ಸುದೀಪ್ ರವರು ಬಸವರಾಜ ಬೊಮ್ಮಾಯಿ ಅವರನ್ನು ನಾನು ಚಿಕ್ಕ ವಯಸ್ಸಿನಿಂದಲೂ ಕೂಡ ನೋಡುತ್ತಾ ಬೆಳೆದವನಾಗಿದ್ದು ಅವರನ್ನು ಮಾಮ ಎಂದೇ ಕರೆಯುತ್ತೇನೆ. ಹೀಗಾಗಿಯೇ ಅವರ ಪರವಾಗಿ ನಾನು ನಿಲ್ಲುತ್ತೇನೆ.. ಯಾವ ಪಕ್ಷದ ಪರವೂ ಅಲ್ಲ ಎಂದಿದ್ದಾರೆ. ಈ ಮೂಲಕವಾಗಿ ಸುದೀಪ್ ತಾನು ಬಿಜೆಪಿ ಪರ ಅಲ್ಲ ತನ್ನ ಕಷ್ಟಕ್ಕೆ ಆದವರ ಪರ ಮಾತ್ರ ಪ್ರಚಾರ ಮಾಡುತ್ತೇನೆ ಎಂದು ತಿಳಿಸಿದರು ಮತ್ತು ಮಾಧ್ಯಮದವರು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಸುದೀಪ್ ಉತ್ತರಿಸಿದರು.
ಐಟಿ ರೇಡ್ ಗೆ ಭಯ ಬಿದ್ದು ನಿಜೆಪಿ ಸೇರಿದರ ಕಿಚ್ಚ?
ಹೌದು ಈ ಹಿಂದೆ ದಿವಂಗತ ನಟ ಪುನೀತ್ ರಾಜ್ ಕುಮಾರ್ (Puneeth Rajkumar) ರವರಿಗೆ ಬಿಜೆಪಿ ಸೇರಿವೊಂತೆ ಒತ್ತಯಿಸಲಾಗಿತ್ತು.. ಆದರೆ ತಂದೆಯಂತೆ ರಾಜಕೀಯ ಇಷ್ಟವಿಲ್ಲದ ಅಪ್ಪು ನಿರಾಕರಿಸಿದ್ದರು ಆದ ಕಾರಣ ಅವರ ಮನೆ ಐಟಿ (IT) ರೇಡ್ ಮಾಡಿಸಲಾಗಿತ್ತು ಎಂಬ ಸುದ್ದಿ ಹರಿದಾಡಿತ್ತು. ಈಗ ಕಿಚ್ಚ ಐಟಿ ರೇಡ್ ಗೆ ಹೆದರಿ ಬಿಜಿಪಿ ಸೇರಿಕೊಂಡ್ರ? ಎಂಬ ಪ್ರಶ್ನೆಯನ್ನ ಕೇಳಲಾಗಿದ್ದು ಇದಕ್ಕೆ ಜೋರಾಗಿ ನಕ್ಕಿದ ಕಿಚ್ಚ ‘ ಸರ್ ಐಟಿ ರೇಡ್ ಮಾಡಿದ್ದು ಆಯ್ತ. ಏನೂ ಸಿಗದೇ ಹೋಗಿದ್ದು ಆಯ್ತು.. ಈಗ ಯಾಕೆ ಹಾಗೆ ತಿಳಿದುಕೊಳ್ಳುತ್ತೀರ..?
Why Do You Think I Come Behind All That?
ಯಾರದೋ ಒತ್ತಡ ಮೇಲೆ ಬರುವ ವ್ಯಕ್ತಿನಾ ಸರ್ ನಾನು? ಹಂಗ್ ಕಾಣಸ್ತಿನ ನಾನು? ಪ್ರತೀಗೋಸ್ಕರ ಬಂದಿದ್ದೇನೆ ಎಂದಿದ್ದಾರೆ ಕಿಚ್ಚ ಸುದೀಪ್.