Kiccha Sudeep: ದರ್ಶನ್ ಜೊತೆ ಬಿಜೆಪಿ ಪ್ರಚಾರಕ್ಕೆ ಬರ್ತಿರಾ ಎಂದ ಮಾಧ್ಯಮದವನಿಗೆ ಕಿಚ್ಚನ ಉತ್ತರ ಹೀಗಿತ್ತು.
ಕನ್ನಡ ಚಿತ್ರರಂಗದ (KFI) ಖ್ಯಾತ ನಟ ಪಾನ್ ಇಂಡಿಯಾ ಸ್ಟಾರ್ (Pan India Star) ಆಗಿರುವ ನಟ ಕಿಚ್ಚ ಸುದೀಪ್ ರವರು (Kiccha Sudeep) ಕಳೆದ ಎರಡ್ಮೂರು ದಿನಗಳಿಂದ ಬಾರಿ ಸುದ್ದಿಯಲ್ಲಿದ್ದಾರೆ. ಮೊದಮೊದಲು ಸುದೀಪ್ ಬಿಜೆಪಿ (BJP) ಪರ ಚುನಾವಣೆ (Election) ನಿಲ್ಲುತ್ತಾರೆ ಎಂಬ ಸುದ್ದಿ ಹರಿದಾಡಿತ್ತು. ನಂತರ ಕೇವಲ ಪ್ರಚಾರ (Promotion)
ಮಾತ್ರ ಮಾಡುತ್ತಾರೆ ಎನ್ನಲಾಯ್ತು. ಬಳಿಕ ಇದೆಲ್ಲಾ ಸುಳ್ಳು ಸುದ್ದಿ (Fake news) ಎಂದು ಕೂಡ ವೈರಲ್ ಆಯ್ತು. ಆದರೆ ಇದೀಗ ಅಂತೆ ಕಂತೆ ಗಳಿಗೆ ಕಿಚ್ಚ ಸುದೀಪ್ ಮತ್ತು ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ಜಂಟಿಯಾಗಿ ಪತ್ರಿಕಾಗೋಷ್ಠಿ (Press conference)ಮಾಡಿದ್ದಾರೆ.
ಕಿಚ್ಚನ ಸ್ಪಷ್ಟನೆ ಏನು?
ಸದ್ಯ ನಿನ್ನೆ ನಡೆದಂತಹ ಜಂಟಿ ಪತ್ರಿಕಾಗೋಷ್ಠಿಯಲ್ಲಿ ನಟ ಸುದೀಪ್ ರವರು ಸಿ ಎಂ ಬಸರಾಜ್ ಬೊಮ್ಮಾಯಿ ರವರ ಪರ ಪ್ರಚಾರ ಮಾಡುತ್ತೇನೆ ಎಂದು ನೇರವಾಗಿ ತಿಳಿಸಿದ್ದು ಅಲ್ಲದೆ ಸಿ ಎಂ ಸೂಚಿಸುವಂತಹ ಅಭ್ಯರ್ಥಿಗಳ ಪರ ಕೂಡ ಪ್ರಚಾರ ಮಾಡುತ್ತೇನೆ ಎಂದಿದ್ದಾರೆ.ಇನ್ನು ಸಿಎಂ ಬೊಮ್ಮಾಯಿ ತನ್ನ ಕಷ್ಟದ ಸಂದರ್ಭದಲಲ್ಲಿ ನೆರವಿಗೆ ಬಂದಿದ್ದರು. ಈ ಕಾರಣದಿಂದಾಗಿ ಈಗ ಅವರೊಂದಿಗೆ ನಿಲ್ಲುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಬೊಮ್ಮಾಯಿ ಮಾಮಾ ಪರ ಪ್ರಚಾರ ಅಷ್ಟೇ..ನನ್ನ ನಿಲುವು ಏನಿಲ್ಲ.
ಹೌದು ಸುದ್ದಿಗೊಷ್ಟಿಯಲ್ಲಿ ಮಾತನಾಡಿದ ಕಿಚ್ಚ ಚಿತ್ರರಂಗದಲ್ಲಿ ಕೆಲವೇ ಕೆಲವರು ನನ್ನೊಟ್ಟಿಗೆ ನಿಂತಿದ್ದವರಿದ್ದು ಅದರಲ್ಲಿ ನನ್ನ ಪ್ರೀತಿಯ ಬಸವರಾಜ್ ಬೊಮ್ಮಾಯಿ ಮಾಮಾ ಅಂದರೆ ತಪ್ಪಾಗಲ್ಲ. ಇಂದು ನನ್ನ ನಿಲುವು ಅಂತೇನು ಇಲ್ಲ. ಇಂದು ಅವರಿಗೆ ನಿಮ್ಮ ಪರ ನಿಲ್ಲುತ್ತೇನೆ ಎಂದು ಹೇಳುವುದಕ್ಕೆ ಬಂದೆ. ಇದನ್ನು ಇಷ್ಟು ಕ್ಯಾಮರಾಗಳ ಮುಂದೆ ಹೇಳುತ್ತೇನೆ ಎಂದು ಗೊತ್ತಿರಲಿಲ್ಲ ಎಂದರು ಕಿಚ್ಚ
ಪ್ರಚಾರ ಎಲ್ಲಿ ಮಾಡುತ್ತಾರೆ ಕಿಚ್ಚ?
ಇನ್ನು ಎಲ್ಲಾ ಕ್ಷೇತ್ರಗಳಿಗೂ ಕೂಡ ಪ್ರಚಾರ ಮಾಡುವುದಕ್ಕೆ ಸಾಧ್ಯವಿಲ್ಲ ಎಂದಿರುವ ಕಿಚ್ಚ ಸಿ ಎಂ ಬಸವರಾಜ ಬೊಮ್ಮಾಯಿ ರವಯ ಯಾರು ಯಾರಿಗೆ ಪ್ರಚಾರ ಮಾಡು ಎನ್ನುತ್ತಾರೋ ಮಾಡುತ್ತೇನೆ. ನನ್ನ ಕಷ್ಟದ ದಿನಗಳಲ್ಲಿ ನನ್ನ ಕೈಯಲ್ಲ ಬೆರಳು ಹಿಡಿದು ಕರೆದುಕೊಂಡು ಬಂದವರ ಪರ ನಿಲ್ಲುತ್ತೇನೆ. ಯಾವುದೇ ಪಕ್ಷದಲ್ಲಿ ಇದ್ದರೂ ಬೆಂಬಲ ನೀಡುತ್ತೇನೆ ಎಂದು ಸುದೀಪ್ ಸ್ಪಷ್ಟಪಡಿಸಿದ್ದಾರೆ.
ದರ್ಶನ್ ಜೊತೆ ಕಿಚ್ಚ ಪ್ರಚಾರ ಮಾಡ್ತಾರ?
ಇನ್ನು ಹಣ ತೆಗೆದುಕೊಂಡು ಇಲ್ಲಿಗೆ ಬಂದಿದ್ದೀರಾ ಎಂದು ಸಾಕಷ್ಟು ಜನ ಪ್ರಶ್ನೆ ಮಾಡುತ್ತಿದ್ದಾರೆ. ನನಗೆ ಸಿನಿಮಾದಲ್ಲೇ ಹಣ ಕೊಡುವವರು ಬಹಳಷ್ಟು ಮಂದಿ ಇದ್ದು ಅದನ್ನು ಕೊಡಿಸಿಬಿಡಿ ಮೊದಲು. ನನಗೆ ದುಡಿಯುವ ಆಗುವುದೇ ಇಲ್ಲ ಅಂತಾನಾ? ಎಂದು ಕಿಚ್ಚ ಸ್ಪಷ್ಟಪಡಿಸಿದ್ದಾರೆ. ನಂತರ ಪತ್ರಕರ್ತರೊಬ್ಬರು ದರ್ಶನ್ ಅವ್ರು ಕೂಡ ಬಿಜೆಪಿ ಸೇರಿದ್ರೆ ಅವ್ರ ಜೊತೆ ನೀವ್ ಪ್ರಚಾರ ಮಾಡುತ್ತೀರ ಎಂದು ಪ್ರಶ್ನೆ ಮಾಡಿದ್ದು ಇದಕ್ಕೆ ಕಿಚ್ಚ ಉತ್ತರಿಸದೆ ನಗು ಚೆಲ್ಲಿದ್ದಾರೆ. ನಂತರ ಸಿಎಂ ಇಂತಹ ಪ್ರಶ್ನೆ ಕೇಳಬೇಡಿ ಎಂದಿದ್ದಾರೆ.