Kiccha Sudeep: ಬಿಜೆಪಿ ಪಾಲಾದ ಸುದೀಪ್ ಗೆ ಚಾಲೆಂಜ್ ಹಾಕಿದ ಹಿರಿಯ ನಟ ಪ್ರಕಾಶ್ ರಾಜ್

Advertisement
ರಾಜ್ಯದಲ್ಲಿ ವಿಧಾನ ಸಭೆಯ ಚುನಾವಣೆ ಪ್ರಚಾರ ಬರದಿಂದ ಸಾಗುತ್ತಿದ್ದು ಪ್ರಚಾರದ ಕಾವು ಹೆಚ್ಚಲು ಈಗ ಸಿನೆಮಾ ಕಲಾವಿದರು ಚುನಾವಣಾ ಪ್ರಚಾರದ ಅಖಾಡಕ್ಕೆ ದುಮಿಕಿದ್ದಾರೆ. ಇತ್ತೀಚೆಗಷ್ಟೇ ನಟ ಕಿಚ್ಚ ಸುದೀಪ್ (Sudeep) ಅವರು ಬಿಜೆಪಿಗೆ ಬೆಂಬಲ ನೀಡುತ್ತಲೇ ಈ ವಿಚಾರ ಎಲ್ಲೆಡೆ ಸಾಕಷ್ಟು ಪರ ವಿರೋಧಕ್ಕೆ ಕಾರಣವಾಯ್ತು. ಈ ಮೂಲಕ ಹಿರಿಯ ನಟ ಪ್ರಕಾಶ್ ರಾಜ್ ಕೂಡ ಇದಕ್ಕೆ ಪುಷ್ಠಿ ನೀಡುವ ಹೇಳಿಕೆಯೊಂದನ್ನು ನೀಡಿದ್ದಾರೆ.
ಪ್ರಕಾಶ್ ರಾಜ್ ಕಿಚ್ಚನ ವಿರುದ್ದ ಹೇಳಿಕೆ:
ನಟ ಸುದೀಪ್ ಬಿಜೆಪಿ ಪಕ್ಷದ ಬೆಂಬಲ ನೀಡುವ ವಿಚಾರ ತಿಳಿಯುತ್ತಿದ್ದಂತೆ ನಟ ಪ್ರಕಾಶ್ ರಾಜ್ (Prakash Raj) ಜನಪರವಾಗಿ ಕಿಚ್ಚನಿಗೆ ಎಚ್ಚರಿಕೆ ನೀಡಿದ್ದಾರೆ ಎಂದು ಹೇಳಬಹುದು. ಕಿಚ್ಚ ಸುದೀಪ್ ಅವರು ರಾಜಕೀಯಕ್ಕೆ ಬರ್ತಾರೆ ಎಂದು ಸಹ ಸುದ್ದಿಯಾಗಿತ್ತು ಆದರೆ ಅವರು ರಾಜಕೀಯಕ್ಕೆ ಬರುತ್ತಿಲ್ಲ ಬದಲಾಗಿ ಒಂದು ಪ್ರಬಲ ಪಕ್ಷದ ಪರವಾಗಿ ಪ್ರಚಾರಕ್ಕೆ ಬರುತ್ತಾರೆ ಎಂದು ತಿಳಿದು ಬಂದಿದ್ದರು ಈ ಮೂಲಕ ಸಿಎಂ ಬೊಮ್ನಾಯಿ ನೇತ್ರತ್ವದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಎಲ್ಲ ಅಂತೆ ಕಂತೆಗಳಿಗೂ ಸರಿಯಾಗಿ ಉತ್ತರ ದೊರೆಯಿತು. ಇದಾದ ಬಳಿಕ ಇತ್ತೀಚೆಗಷ್ಟೇ ನಟ ಸುದೀಪ್ ಅವರಿಗೆ ಅಶ್ಲೀಲವಾಗಿ ಬೆದರಿಕೆ ಪತ್ರ ಬಂದ ನ್ಯೂಸ್ ಸಹ ವೈರಲ್ ಆದ ಬೆನ್ನಲ್ಲೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ವಿರುದ್ಧ ಹಿರಿಯ ಬಹುಭಾಷಾ ನಟ ಪ್ರಕಾಶ್ ರಾಜ್ ಕಿಡಿಕಾರಿದ್ದಾರೆ.
ಏನಂದ್ರು ನಟ ಪ್ರಕಾಶ್ ರಾಜ್?
ನಟ ಪ್ರಕಾಶ್ ಸುದೀಪ್ ಅವರು ಮೇರು ಕಲಾವಿದನಾಗಿ ಸಮಾಜದ ಎಲ್ಲ ವರ್ಗದ ಜನರ ಪ್ರೀತಿಯಿಂದ ಬೆಳೆದ ನೀವು ಜನಸಾಮಾನ್ಯರಿಗೆ ದನಿ ಆಗುವಿರಿ ಎಂದು ಆಶಿಸಿದ್ದೆ. ತಾವು ಒಂದು ರಾಜಕೀಯ ಪಕ್ಷದ ಬಣ್ಣ ಬಳಿದುಕೊಳ್ಳುತ್ತೀರಿ ಎಂದು ನಿರೀಕ್ಷಿಸಿರಲಿಲ್ಲ. ಇನ್ನು ಮುಂದೆ ನಿಮ್ಮನ್ನು ನಿಮ್ಮ ಪಕ್ಷವನ್ನು ಪ್ರಶ್ನಿಸುವ ಜನ ದನಿಗೆ ತಯಾರಾಗಿರಿ ಎಂದು ಕಿಚ್ಚನ ವಿರುದ್ಧ ಕಿಡಿಕಾರಿದ್ದಾರೆ. ಈ ಮೂಲಕ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಕಿಚ್ಚನ ಅಭಿಮಾನಿಗಳು ಹಿರಿಯ ನಟ ಪ್ರಕಾಶ್ ರಾಜ್ ಅವರಿಗೆ ತಿರುಗೇಟಿನ ಉತ್ತರ ನೀಡಿದ್ದಾರೆ. ನಮ್ಮ ಅಣ್ಣ ಕಿಚ್ಚನ ವಿರುದ್ಧ ಸುಖಾ ಸುಮ್ಮನೆ ಆರೋಪಿಸದಿರಿ ಅವರು ಏನು ನಿರ್ಧಾರಕ್ಕೆ ಬಂದರೂ ಅಲ್ಲೊಂದು ಕಾರಣ ಇರುತ್ತೆ ಎಂದೆಲ್ಲ ಪ್ರತಿಕ್ರಿಯೆ ನೀಡಿದ್ದಾರೆ.
ಒಂದೇ ಸಿನಿಮಾದಲ್ಲಿ ನಟನೆ:
ನಟ ಕಿಚ್ಚ ಸುದೀಪ್ ಹಾಗೂ ಪ್ರಕಾಶ್ ರಾಜ್ ಅವರು ಒಂದೇ ಸಿನೆಮಾದಲ್ಲಿ ಜೊತೆಯಾಗಿ ಅಭಿನಯಿಸಿದ್ದು ಹಲವಾರು ಕಾರ್ಯಕ್ರಮದಲ್ಲೂ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಕೊಟಿಗೊಬ್ಬ ಭಾಗ 2ರಲ್ಲಿ ಸುದೀಪ್ ತಂದೆಯಾಗಿ ಪ್ರಕಾಶ್ ರಾಜ್ ಅಭಿನಯ ಎಲ್ಲರ ಮನ ಗೆದ್ದಿತ್ತು. ಈ ಮೂಲಕ ಸಿನಿ ಪರದೆಯಲ್ಲಿ ಒಟ್ಟಾಗಿ ಸಾಗಿದ್ದ ಇವರ ಪಯಣ ಇನ್ನು ಮುಂದೆ ಜಿದ್ದಾಜಿದ್ದಿ ಸಮರ ಆಗುತ್ತಾ ಎಂದು ಕಾದುನೋಡಬೇಕು.