ಸಾಮಾಜಿಕ ದೇಶದಲ್ಲಿ ಈ ಸೈಬರ್ (Cyber) ವಂಚಕರು ಕಳುಹಿಸುವಂತಹ ನಕಲಿ (Fake) ಲಿಂಕ್ ಅನ್ನು ಕ್ಲಿಕ್ (Click) ಮಾಡಿ ಹಣ ಕಳೆದುಕೊಳ್ಳುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ ಎನ್ನಬಹುದು. ಹೌದು ಇದೀಗ ನಟಿ ರಾಜಕಾರಣಿ ನಗ್ಮಾ (Nagma) ಕೂಡ ಇದೇ ರೀತಿ ವಂಚನೆಗೆ ಗುರಿಯಾಗಿದ್ದಾರೆ. ಹೌದು ಆಕೆಯ ಖಾತೆಯಿಂದ ಸೈಬರ್ ವಂಚಕರು ಬರೋಬ್ಬರಿ 1 ಲಕ್ಷ ರೂ. ಎಗರಿಸಿದ್ದಾರೆ. ಕನ್ನಡ (Kannada) ಸೇರಿದಂತೆ ಹಲವು ಭಾಷೆಗಳಲ್ಲಿ ನಟಿ ನಗ್ಮಾ ರವರು ನಟಿಸಿದ್ದು ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ (Super Hit Movies) ಮಿಂಚಿ ಗಮನ ಸೆಳೆದಿದ್ದಾರೆ.
ಸದ್ಯ ಬ್ಯಾಂಕ್ ಖಾತೆಯ ಕೆವೈಸಿ (KYC) ಅಪ್‌ಡೇಟ್ ಮಾಡಯವಂತಜ ನೆಪದಲ್ಲಿ ವಂಚಕರು ಇದೀಗ ಬ್ಯಾಂಕ್ ಗ್ರಾಹಕರ ಖಾತೆಗಳಿಗೆ ಕನ್ನ ಹಾಕುತ್ತಿದ್ದು ನಟಿ ನಗ್ಮಾ ರವರು ಕೂಡ ಇದೇ ರೀತಿ ತಮ್ಮ ಫೋನ್‌ಗೆ ಬಂದ ಲಿಂಕ್ ಕ್ಲಿಕ್ ಮಾಡಿ ಎಡವಟ್ಟು ಮಾಡಿಕೊಂಡಿದ್ದಾರೆ. ಹೌದು ಫೆಬ್ರವರಿ 28ರಂದು ನಟಿಯ ಫೋನ್‌ಗೆ ಬ್ಯಾಂಕ್‌ನವರು ಕಳುಹಿಸಿದಂತೆ ಒಂದು ಎಸ್ ಎಂ ಎಸ್ ಬಂದಿದೆ. ಅದರಲ್ಲಿದ್ದ ಲಿಂಕ್ ಅನ್ನು ನಗ್ಮಾ ಕ್ಲಿಕ್ ಮಾಡಿದ್ದಯ ಕೂಡಲೇ ಆಕೆಗೆ ಫೋನ್‌ಗೆ ಕರೆ ಬಂದಿದೆ. ಬ್ಯಾಂಕ್ ಉದ್ಯೋಗಿ ಎಂದು ಪರಿಚಯಿಸಿಕೊಂಡ ವಂಚಕರು ತಾನು ಹೇಳಿದಂತೆ ಮಾಡಿ ಕೆವೈಸಿ (KYC) ಕಂಪ್ಲೀಟ್ ಮಾಡುವಂತೆ ಹೇಳಿದ್ದಾರೆ.
ಇನ್ನು ನಟಿ ನಗ್ಮಾ ಯಾವುದೇ ಅಕೌಂಟ್ ಡಿಟೈಲ್ಸ್ (Accounts Details) ಶೇರ್ ಮಾಡದ ಕಾರಣ ವಂಚಕ ತನ್ನ ಆನ್‌ಲೈನ್ ಅಕೌಂಟ್‌ಗೆ ಲಾಗಿನ್ ಆಗಿದ್ದು ಬೆನಿಫಿಷರಿ ಅಕೌಂಟ್ ಕ್ರಿಯೇಟ್ ಮಾಡಿ ಬರೋಬ್ವರಿ 1 ಲಕ್ಷ ರೂ. ಟ್ರಾನ್ಸ್‌ಫರ್ (Transfer) ಮಾಡಿಕೊಂಡಿದ್ದಾನೆ. ವಂಚಕ ಲಾಗಿನ್ ಆಗಲು ಸಾಕಷ್ಟು ಅಟೆಂಪ್ಟ್ ಮಾಡಿದ್ದು ತನ್ನ ಮೊಬೈಲ್‌ಗೆ ಸಾಕಷ್ಟು ಓಟಿಪಿಗಳು (OTP) ಬಂದಿದೆ ಎಂದು ನಗ್ಮಾ ಹೇಳಿದ್ದಾರೆ. ಬರೀ 1 ಲಕ್ಷ ಮಾತ್ರ ಕಳೆದುಕೊಂಡಿದ್ದಕ್ಕೆ ಬೇಸರದಲ್ಲೂ ನಗ್ಮಾ ಖುಷಿಪಟ್ಟಿದ್ದು ನಗ್ಮಾ ಅಕೌಂಟ್‌ನಿಂದ ಒಂದು ನ್ಯಾಷನಲ್ ಬ್ಯಾಂಕ್‌ಗೆ 99.998 ರೂ. ಟ್ರಾನ್ಸ್‌ಫರ್ ಆಗಿದೆ. ನಟಿ ಗ್ರಾಹಕರಾಗಿರುವ ಆಗಿರುವ ಅದೇ ಬ್ಯಾಂಕಿನ 80 ಮಂದಿ ಗ್ರಾಹಕರಿಗೆ ಇದೇ ರೀತಿ ವಂಚನೆ ಮಾಡಿದ್ದಾರೆ ಎನ್ನಲಾಗಿದೆ.
ಸದ್ಯ ಸೈಬರ್ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು ಅದೇ ರೀತಿಯಾಗಿ ಸೈಬರ್ ಕ್ರೈಂ ಬಗ್ಗೆ ಎಚ್ಚರದಿಂದ ಇರುವಂತೆ ಜಾಗೃತಿ ಮೂಡಿಸಲಾಗುತ್ತಿದೆ. ಹೌದು ಅನುಮಾನ ಬರುವಂತಹ ಯಾವುದೇ ಲಿಂಕ್ ಕ್ಲಿಕ್ ಮಾಡಬೇಡಿ ಯಾವುದೇ ಬ್ಯಾಂಕ್ ಮಾಹಿತಿ ಓಟಿಪಿಯನ್ನು ಗೊತ್ತಿಲ್ಲದವರ ಜೊತೆ ಹಂಚಿಕೊಳ್ಳಬೇಡಿ ಎಂದು ಎಚ್ಚರಿಸುತ್ತಿದ್ದಾರೆ. ಇನ್ನು 90ರ ದಶಕದಲ್ಲಿ ನಟಿ ನಗ್ಮಾ ಬಹುಬೇಡಿಕೆಯ ನಟಿಯಾಗಿದ್ದರು. ಹೌದು ಕುರುಬನ ರಾಣಿ ಯಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಹೃದಯವಂತ ರವಿಮಾಮ ಚಿತ್ರಗಳಲ್ಲೂ ನಟಿಸಿದ್ದರು.