Sumalatha Ambareesh: ತಾಯಿ ಚಾಮುಂಡೇಶ್ವರಿ ಮೇಲೆ ಆಣೆ, ನನ್ನ ಮಾತು ಸತ್ಯ, ಸುಮಲತಾ ಅಂಬರೀಷ್ ಸ್ಫೋಟಕ ಹೇಳಿಕೆ

Advertisement
ಸುಮಲತಾ ಅಂಬರೀಷ್ ಈ ಹೆಸರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಚಿತ್ರ ರಂಗದಲ್ಲಿ ತನ್ನದೇ ಚಾಪು ಮೂಡಿಸಿರುವ ಈ ನಟಿ ರಾಜಕೀಯದಲಲ್ಲೂ ತಮ್ಮದೇ ಆದ ಹೆಸರು ಗಳಿಸಿರುವುದು ನಿಮಗೆಲ್ಲ ಗೊತ್ತೇ ಇದೆ. ಇದರ ಮಧ್ಯೆ ಇದೀಗ ನಮ್ಮ ಕರ್ನಾಟಕ ರಾಜ್ಯದಲ್ಲಿ ಭಾರಿ ಸದ್ದು ಮಾಡುತ್ತಿರುವ ವಿಚಾರ ಏನಪ್ಪಾ ಅಂದ್ರೆ, ಸುಮಲತಾ ಅವರು ಈ ಭಾರಿ ಚುನಾವಣೆಗೆ ಬಿಜೆಪಿ ಪಕ್ಷ ಸೇರುತ್ತಾರ ಎನ್ನುವುದು. ಈ ವಿಚಾರ ಎಲ್ಲೂ ಅಧಿಕೃತವಾಗಿ ಘೋಷಣೆ ಹೊರಬಿದ್ದಿಲ್ಲವಾದರೂ, ಇದರ ಬೆನ್ನಲ್ಲೇ ಅಭಿಷೇಕ್ ಅಂಬರೀಷ್ (Abhishek Ambareesh) ಕೂಡ ರಾಜಕೀಯ ಪ್ರವೇಶ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
Advertisement
ಈ ಎಲ್ಲಾ ಗಾಳಿ ಸುದ್ದಿಗೆ ನಟಿ ಹಾಗೂ ಸಂಸದೆ ಸುಮಲತಾ ಅಂಬರೀಶ್ ಅವರು ಮೊನ್ನೆ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಸ್ಪಷ್ಟತೆ ನೀಡಿದ್ದೂ, ನಟಿ ಸುಮಲತ ಅಂಬರೀಷ್ ಈ ರೀತಿ ಹೇಳಿಕೊಂಡಿದ್ದಾರೆ. ತಾಯಿ ಚಾಮುಂಡಿ ಮೇಲೆ ಆಣೆ ಮಾಡಿ ಹೇಳುತ್ತೇನೆ, ನಾನು ನನ್ನ ಮಗನಿಗೆ ಯಾವ ಪಕ್ಷದ ಸದಸ್ಯರ ಬಳಿ ಟಿಕೆಟ್ ಮನವಿ ಮಾಡಿಲ್ಲ. ಹಾಗೆ ನಾನು ರಾಜಕೀಯ ರಂಗದಲ್ಲಿ ಇರುವ ವರೆಗೂ ಕೂಡ ಅಭಿಷೇಕ್ ರಾಜಕೀಯಕ್ಕೆ ಬರುವುದಿಲ್ಲ ಇಷ್ಟಂತು ಸ್ಪಷ್ಟತೆ ಇರಲಿ. ಹಾಗೇನಾದರೂ ನಾನು ಪಕ್ಷದವರ ಬಳಿ ಟಿಕೆಟ್ ಕೇಳಿದ್ರೆ ನಾನು ಅಂಬರೀಷ್ ಅವರ ಪತ್ನಿ ಎಂದು ಕರೆಸಿಕೊಳ್ಳಲು ಲಾಯಕ್ಕೆ ಇಲ್ಲ. ನಾನು ಕೇಳಿದ್ದೆ ಆದಲ್ಲಿ ಆ ತಾಯಿ ಚಾಮುಂಡಿ ಮುಂದಿನ ನಿರ್ಧಾರ ಮಾಡಲಿ ಎಂದು ಹೇಳುವ ಮುಖಾಂತರ ಎಲ್ಲಾ ಗಾಳಿ ಸುದ್ದಿಗೂ ಸುಮಲತಾ ಅಂಬರೀಶ್ ಬ್ರೇಕ್ ಆಕಿದ್ದಾರೆ.
Advertisement