Sumalatha Ambareesh: ಮಗ ಅಭಿಷೇಕ್ ವಿಚಾರವಾಗಿ ಮಹತ್ವದ ನಿರ್ಧಾರ ತಿಳಿಸಿದ ಸುಮಲತಾ

Advertisement
ಸುಮಲತಾ ಅಂಬರೀಶ್ (Sumalatha Ambareesh) ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಇಂದಿಗೂ ಯಂಗ್ ಆಗೇ ಕಾಣುವ ಸುಮಲತಾ ರಾಜಕೀಯ ವಿಚಾರದಲ್ಲಿ ಸದ್ದು ಮಾಡುತ್ತಾಲೇ ಇರುತ್ತಾರೆ, ಇತ್ತೀಚೆಗೆ ಬಿಜೆಪಿ ಸೇರ್ತಾರೆ ಎನ್ನುವ ಊಹಾಪೋಹಗಳು ಕೇಳಿಬಂದಿತ್ತು, ಮಗ ಅಭೀಷೇಕ್ (Abishek Ambareesh) ಅವರು ರಾಜಕೀಯ ಬರುತ್ತಾರೆ ಎನ್ನಲಾಗಿತ್ತು, ಇದಕ್ಕೆ ಸುದ್ದಿಗೋಷ್ಠಿ ಮೂಲಕ ಸುಮಲತಾ ಉತ್ತರ ನೀಡಿದ್ದಾರೆ.
ಅಭಿಷೇಕ್ ರಾಜಕೀಯ ಪ್ರವೇಶ ಮಾಡಲ್ಲ:
ಕಳೆದ ಕೆಲವು ದಿನಗಳಿಂದ ಅಭಿಷೇಕ್ ಅಂಬರೀಶ್ ರಾಜಕೀಯಕ್ಕೆ ಎಂಟ್ರಿ ಕೊಡ್ತಾರೆ ಅನ್ಬಲಾಗಿತ್ತು, ಸುಮಲತಾ ಪುತ್ರನಿಗೆ ಟಿಕೆಟ್ ಕೇಳಿದ್ದಾರೆ ಅನ್ನೋ ಸುದ್ದಿ ಹಬ್ಬಿತ್ತು. ಅದಕ್ಕೆ ಪತ್ರಿಕಾಗೋಷ್ಠಿಯಲ್ಲಿ ಸುಮಲತಾ ಸ್ಪಷ್ಟತೆ ಕೊಟ್ಟಿದ್ದಾರೆ, ಅಂಬರೀಶ್, ನಾನು, ಅಭಿಷೇಕ್ , ರಾಜಕೀಯ ಮಾಡಲ್ಲ. ನಾನು ರಾಜಕೀಯದಲ್ಲಿ ಇರುವವರೆಗೆ ಅಭಿಷೇಕ್ ರಾಜಕೀಯಕ್ಕೆ ಬರಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ, ರಾಜಕೀಯ ವಿಚಾರದಲ್ಲಿ ಯಾವತ್ತು ತಪ್ಪು ನಿರ್ಧಾರ ತೆಗೆದುಕೊಳ್ಳುವುದಿಲ್ಲ, ನಮ್ಮ ಐಡೆಂಟಿಡಿ ನಮಗೆ ಬಹಳ ಮುಖ್ಯ ಎಂದಿದ್ದಾರೆ. ಒಟ್ಟಿನಲ್ಲಿ ಅಭೀಷೇಕ್ ರಾಜಕೀಯ ಬರಲ್ಲ ಎಂದಾಯಿತು.
ಬಿಜೆಪಿ ಸೇರಲ್ಲ, ಬೆಂಬಲ ಇದೆ:
ಸದ್ಯಕ್ಕೆ ನಾನು ಬಿಜೆಪಿ ಸೇರ್ಪಡೆಯಾಗಲ್ಲ, ಸದ್ಯ ಮೋದಿ ಮಂಡ್ಯ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಕಾಳಜಿ ಹೊಂದಿದ್ದಾರೆ. ಲೋಕಸಭಾ ಚುನಾವಣೆ ವೇಳೆ ಬಿಜೆಪಿ ಬೆಂಬಲ ನೀಡಿತ್ತು. ಅಂಬರೀಶ್ ಹೆಸರಿಗೆ ಕಳಂಕ ತರುವ ಕೆಲಸ ನಾನು ಮಾಡುವುದಿಲ್ಲ ಎಂದಿದ್ದಾರೆ, ಮಂಡ್ಯ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿ ಸುಮಲತಾ ಅಂಬರೀಶ್, ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧೆ ಮಾಡಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿರುದ್ಧ ಗೆಲುವು ದಾಖಲಿಸಿ ಮೆಚ್ಚುಗೆ ಪಡೆದಿದ್ದರು.
Advertisement
ಯಾವ ಪಕ್ಷದಿಂದ ಆಹ್ವಾನ:
ಅಭಿಷೇಕ್ ಚುನಾವಣೆಯಲ್ಲಿ ಸ್ಪರ್ಧಿಸುವುದಾದರೆ ಟಿಕೆಟ್ ಕೊಡುವುದಾಗಿ ಎರಡು ರಾಜಕೀಯ ಪಕ್ಷಗಳು ಆಹ್ವಾನ ನೀಡಿವೆ, ಆದರೆ ಸಧ್ಯಕ್ಕೆ ಅಭಿಷೇಕ್ ನನ್ನು ರಾಜಕೀಯಕ್ಕೆ ತರುವ ವಿಚಾರವಿಲ್ಲ. ನಾನಿರುವವರೆಗೆ ಆತ ರಾಜಕೀಯಕ್ಕೆ ಬರುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ಅಮ್ಮನ ತೀರ್ಮಾನಕ್ಕೆ ಬದ್ಧ ಅಭಿಷೇಕ್:
ನನ್ನ ತಾಯಿ ರಾಜಕೀಯವಾಗಿ ಏನೇ ತೀರ್ಮಾನ ತೆಗೆದುಕೊಂಡರೂ ನಾನು ಬದ್ಧ ಎಂದು ಅಭಿಷೇಕ್ ಹೇಳಿದ್ದಾರೆ, ಸದ್ಯ ಅಭಿಷೇಕ್ ಮದುವೆ ತಯಾರಿಯಲ್ಲಿ ಇದ್ದಾರೆ,ಅಮ್ಮನ ಮಾತಿಗೆ ಕಳಂಕ ತರುವುದಿಲ್ಲ ಅಂದಿದ್ದಾರೆ,ರಾಜಕೀಯ ಬಗ್ಗೆ ಯಾವತ್ತು ಗೌರವ ಇದೆ ಎಂದು ತಿಳಿಸಿದ್ದಾರೆ.
ಅಭಿಷೇಕ್ ಪ್ರಸ್ತುತ ಸಿನಿಮಾದಲ್ಲಿ ಬ್ಯುಸಿ:
ಅಭಿಷೇಕ್ ಸದ್ಯ ಸಿನಿಮಾದಲ್ಲೂ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೆ ಸೂರಿ ನಿರ್ದೇಶನದ ಬ್ಯಾಡ್ ಮ್ಯಾನರ್ಸ್ ಸಿನಿಮಾ ಮುಗಿಸಿ , ಕಾಳಿ ಹಾಗೂ ಮಹೇಶ್ ಕುಮಾರ್ ನಿರ್ದೇಶನದ ಹೊಸ ಸಿನಿಮಾದ ಚಿತ್ರೀಕರಣ ದಲ್ಲಿ ಬ್ಯುಸಿ ಇದ್ದಾರೆ,ಮದುವೆ ತಯಾರಿ ಜೊತೆ ಸಿನಿಮಾದೊಂದಿಗೂ ಕೈ ಜೋಡಿಸಿದ್ದಾರೆ. ಒಟ್ಟಿನಲ್ಲಿ ಸುಮಲತಾ ಆಂಬರೀಷ್ ಬಿಜೆಪಿಗೆ ಸೇರ್ತಾರೆ ಅನ್ನೋ ಮಾತು ಕೇಳಿ ಬಂದ ಹಿನ್ನೆಲೆ ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ಕೊಟ್ಟಿದ್ದಾರೆ. ಅಭಿಷೇಕ್ ರಾಜಕೀಯಕ್ಕೆ ಬರಲ್ಲ, ಆದರೆ ನನ್ನ ಬೆಂಬಲ ಇದೆ ಅಂದಿದ್ದಾರೆ.
Advertisement