ಪ್ರಜಾಕೀಯ ಅಂದ ತಕ್ಷಣ ಎಲ್ಲಾರಿಗೂ ನೆನಪು ಆಗೋದು ನಟ ಉಪೇಂದ್ರ (Upendra) ಅವರು ಪ್ರಜಾಕೀಯ ಪಕ್ಷವನ್ನು ಬೆಂಬಲಿಸಿ ಸಪೊರ್ಟ್ ಮಾಡಿ, ನಿಮ್ಮಗಾಗಿಯೇ ಈ ಪಕ್ಷ ಎಂದು ಉಪೇಂದ್ರ ಅವರು ಹೇಳ್ತಾ ಬಂದಿದ್ದಾರೆ, ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly Elections 2023) ಸಮೀಪಿಸುತ್ತಿದ್ದು, ಎಲ್ಲ ರಾಜಕೀಯ ಪಕ್ಷಗಳು ಪ್ರಚಾರಕ್ಕೆ ಇಳಿದಿವೆ, ತಮ್ಮ ಪಕ್ಷದ ಉದ್ದೇಶ,ಗುರಿ, ಏನು ಮಾಡಲಿದ್ದೇವೆ ಎಂಬುದನ್ನು ಪ್ರಚಾರ ಮಾಡ್ತಾ ಬರ್ತಾ ಇದೆ, ಇನ್ನೂ ಚುನಾವಣೆ ದಿನಾಂಕ ಘೋಷಣೆಗೂ ಮುನ್ನವೇ ಪಕ್ಷಗಳು ತಮ್ಮ ಅಪಾರ ಪ್ರಚಾರವನ್ನ ಶುರುಮಾಡಿಕೊಂಡಿವೆ.
ಕೋವಿಡ್ ಸಂದರ್ಭದಲ್ಲಿ ಪ್ರಜಾಕೀಯ ಸಹಾಯ ಮಾಡಿದೆಯೇ?
ಉಪೇಂದ್ರ ಅವರಿಗೆ ಜನಸಾಮನ್ಯರೊಬ್ಬರು ಪ್ರಜಾಕೀಯ ಪಕ್ಷದ ಬಗ್ಗೆ ಹೇಳುವ ನೀವೇ ಯಾಕೆ ಹಳ್ಳಿಗಳಿಗೆ ಭೇಟಿ ಕೊಟ್ಟು ಜನರ ಸಮಸ್ಯೆ ಹೋಗಲಾಡಿಸಬಾರದು ಎಂದಿದ್ದಾರೆ. ಇನ್ನು ಕೋವಿಡ್ ಸಂದರ್ಭದಲ್ಲಿ ನಿಮ್ಮ ಸದಸ್ಯರ ಸಹಾಯ ವೇನು ಕೇಳಿದಕ್ಕೆ ಪ್ರಜಾಕೀಯದಲ್ಲಿ ಸದಸ್ಯರೇ ಇಲ್ಲ, ಜನಸಾಮಾನ್ಯರೇ ನೀವುಗಳೇ ಪ್ರಜೆಗಳು ಎಂದಿದ್ದಾರೆ, ಇಲ್ಲಿ ಯಾರನ್ನೂ ದೂಷಿಸುವುದಿಲ್ಲ, ಸುಳ್ಳು ಭರವಸೆಗಳನ್ನು ನೀಡುವುದಿಲ್ಲ. ರಾಜಕೀಯ ಲಾಭಕ್ಕಾಗಿ ಮಾಡುವ ಪ್ರತಿಭಟನೆಗಳು ಇರುವುದಿಲ್ಲ. ರಾಜಕೀಯ ಲಾಭಕ್ಕಾಗಿ ಮಾಡುವ ಸಮಾಜಸೇವೆ ಇರುವುದಿಲ್ಲ ಎಂದು ತಮ್ಮ ಉದ್ದೇಶಗಳನ್ನು ಉಪೇಂದ್ರ ಅವರು ಈಗಾಗಲೇ ಹೇಳಿದ್ದಾರೆ.
ಉಪೇಂದ್ರ ಪ್ರಜಾಕೀಯ ಪಕ್ಷದ ಅಧಿಕೃತ ಚಿಹ್ನೆ:
ಪ್ರಜಾಕೀಯ ಪಕ್ಷಕ್ಕೆ ಈ ಬಾರಿಯ 2023 ವಿಧಾನಸಭಾ ಚುನಾವಣೆಗೆ ಆಟೋ ರಿಕ್ಷಾ ಚಿಹ್ನೆ ಲಭಿಸಿದೆ. ಉತ್ತಮ ಪ್ರಜಾಕೀಯ ಪಕ್ಷದಿಂದ ಸ್ಪರ್ಧೆ ಮಾಡುವ ಅಭ್ಯರ್ಥಿಗಳು ಆಟೋರಿಕ್ಷಾ ವನ್ನು ಚಿಹ್ನೆಯಾಗಿ ಬಳಸ ಬೇಕೆಂದು ಚುನಾವಣಾ ಆಯೋಗ ಹೇಳಿದೆ. ಹೊಸ ಪಕ್ಷ ಸ್ಥಾಪನೆಯ ವೇಳೆಯೇ ವಿನೂತನ ಕಲ್ಪನೆ ಮೂಲಕ ಉಪೇಂದ್ರ ಅವರು ಈಗಾಗಲೇ ಗಮನ ಸೆಳೆದಿದ್ದಾರೆ.
ಅಭ್ಯರ್ಥಿಗಳ ಆಯ್ಕೆಗೆ ಸಂದರ್ಶನ ಮತ್ತು ಅವರ ಕ್ಷೇತ್ರದ ಸಮಸ್ಯೆಗಳೇನು, ಅದಕ್ಕೆ ಪರಿಹಾರ ವರದಿಯನ್ನು ಆಧರಿಸಿ ಪಕ್ಷವನ್ನು ಸಂಘಟಿಸುತ್ತಿದ್ದಾರೆ, ತಮ್ಮ ಅಭ್ಯರ್ಥಿಗಳು ಜನಸಾಮಾನ್ಯರೇ ಆಗಿದ್ದಾರೆ. ಜನರ ಜೊತೆ ಸಂಪರ್ಕದೊಂದಿಗೆ ,ಅವರನ್ನು ಅರಿತು , ಅವರಿಗೆ ಏನು ಬೇಕು ಎಂಬುದನ್ನು ತಿಳಿದು ಅದಕ್ಕೆ ಯೋಜನೆ ರೂಪಿಸುತ್ತೇವೆ, ನಂತರ ಅದನ್ನು ಜನರ ಪರಾಮರ್ಶೆಗೇ ಬಿಟ್ಟು ಅಂತಿಮವಾಗಿ ಅವರ ನಿರ್ಧಾರ ಮೇಲೆ ನಿರ್ಧಾರ ಕೈಗೊಳ್ಳುತ್ತೇವೆ. ಇದು ಪ್ರಜಾಕೀಯ ಪಕ್ಷದ ನಿರ್ಧಾರ ಎಂದು ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಪಕ್ಷದ ಬಗ್ಗೆ ತಿಳಿಸಿದ್ದಾರೆ.