Karnataka Times
Trending Stories, Viral News, Gossips & Everything in Kannada

K Sudhakar: ಉರಿಗೌಡ ಹಾಗೂ ನಂಜೇಗೌಡ ಬಗ್ಗೆ ಸಚಿವ ಸುಧಾಕರ್ ಹೇಳಿದ್ದೇ ಬೇರೆ

Advertisement

ಸದ್ಯ ಇದೀಗ ರಾಜ್ಯದಲ್ಲಿ (State) ವಿಧಾನಸಭೆ ಚುನಾವಣೆಗೆ (Assembly Elections)ಇನ್ನೇನು ದಿನಗಣನೆ ಆರಂಭವಾಗುತ್ತಿದ್ದರೆ ಮತ್ತೊಂದು ಕಡೆ ರಾಜ್ಯ ರಾಜಕಾರಣದಲ್ಲಿ (State Politics) ಉರಿಗೌಡ ನಂಜೇಗೌಡ (Urigowda Nanjegowda) ವಿಚಾರ ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದೆ ಎನ್ನಬಹುದು. ಹೌದು ರಾಜಕೀಯ ನಾಯಕರು (Political leaders) ವಾದ ಹಾಗೂ ಪ್ರತಿವಾದಗಳು ಮಾಡುತ್ತಿದ್ದು ಇದೆಲ್ಲದರ ನಡುವೆ ಆರೋಗ್ಯ ಖಾತೆ ಸಚಿವರಾದ ಡಾ.ಕೆ.ಸುಧಾಕರ್ (K Sudhakar)​ ರವರು ಹೇಳಿಕೆ ನೀಡಿದ್ದು ಉರಿಗೌಡ ನಂಜೇಗೌಡ ಗೊತ್ತಿಲ್ಲ ಆದರೆ ದೇವೇಗೌಡ (Devegowda) ರಂಗೇಗೌಡ ಗೊತ್ತು ಎಂದಿದ್ದಾರೆ. ಹೌದು ಜಿಲ್ಲೆಯ ಶಿಡ್ಲಘಟ್ಟ (Shidlaghatta) ತಾಲೂಕಿನ ಅಮರಾವತಿ (Amaravati) ಗ್ರಾಮದಲ್ಲಿ ಬೆಂಗಳೂರು ಉತ್ತರ ವಿ.ವಿ. ಕ್ಯಾಂಪಸ್​ ಶಂಕು ಸ್ಥಾಪನೆ ಮಾಡಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಗೊತ್ತಿರುವವರ ಬಗ್ಗೆ ಮಾತ್ರ ನಾನು ಮಾತನಾಡುತ್ತೇನೆ. ಇನ್ನು ನನಗೆ ಗೊತ್ತಿಲ್ಲದವರ ಬಗ್ಗೆ ಮಾತನಾಡಲ್ಲ. ಉರಿಗೌಡ ನಂಜೇಗೌಡ ವಿಷಯವನ್ನು ದೊಡ್ಡದು ಮಾಡಬೇಕಿಲ್ಲ. ದೇಶಕ್ಕಾಗಿ ಹೋರಾಟ (Fight For Country)
ಮಾಡಿದರೆ ಅವರಿಗೆ ಗೌರವ ಸೂಚಿಸೋಣ ಎಂದು ನುಡಿದಿದ್ದಾರೆ.

ಇನ್ನು ಕಾರವಾದಲ್ಲಿ ಮಾತನಾಡಿರುವ ಬೃಹತ್​ ಕೈಗಾರಿಕಾ ಸಚಿವ ಮುರಗೇಶ್ ನಿರಾಣಿ ರವರು ಉರಿಗೌಡ ಮತ್ತು ನಂಜೇಗೌಡ ವಿಷಯ ಬಿಟ್ಟು ರಾಜ್ಯದ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡಬೇಕಿದ್ದು ಇದರಲ್ಲಿ ರಾಜಕಾರಣ ಬೇಡ ಎಂದು ಹೇಳಿದ್ದಾರೆ. ಇನ್ನು ಉತ್ತರ ಕನ್ನಡ (Uttara Kannada) ಜಿಲ್ಲೆ ಅಂಕೋಲದಲ್ಲಿ (Ankola) ನಡೆದ ಬಿಜೆಪಿ(BJP) ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು ನಮ್ಮ ಪಕ್ಷದವರನ್ನು ಸೇರಿ ಹೇಳುತ್ತಿದ್ದೇನೆ. ರಾಜ್ಯದ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡಬೇಕಿದ್ದು ಅದನ್ನ ಬಿಟ್ಟು ಇದರಲ್ಲಿ ರಾಜಕಾರಣ ಸರಿ ಅಲ್ಲ. ಹೌದು ಯುವಕರಿಗೆ ಉದ್ಯೋಗ ನೀಡುವುದರ ಬಗ್ಗೆ ಕೃಷಿಕರ ಅಭಿವೃದ್ಧಿ ಬಗ್ಗೆ ಚಿಂತನೆ ಇರಬೇಕಿದ್ದು ಸುಮ್ಮನೆ ಸಮಯ ಹಾಳು ಮಾಡುವುದರ ಬಗ್ಗೆ ಹೇಳಿಕೆ ನೀಡಬಾರದು ಎಂದು ಸ್ವಪಕ್ಷದವರ ಹೇಳಿಕೆಯನ್ನು ಮುರಗೇಶ್ ನಿರಾಣಿ ರವರು ಖಂಡಿಸಿದ್ದಾರೆ.

ಇನ್ನು ಬಿಜೆಪಿಯವರು ಜಾತಿ ಧರ್ಮದ ಹೆಸರಲ್ಲಿ ಸಮಾಜ ಒಡೆಯುತ್ತಿದ್ದಾರೆ ಎಂಬ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಹೇಳಿಕೆ ಪ್ರತಿಕ್ರಿಯಿಸಿದ್ದು, H.D.ಕುಮಾರಸ್ವಾಮಿ ಜಾತಿ ರಾಜಕಾರಣ ಮಾಡಲ್ವಾ ಎಂದು ತಿರುಗೇಟು ನೀಡಿದರು. ಹೌದು ಜಾತಿ ರಾಜಕಾರಣ ಮಾಡಲ್ಲ ಎಂದು ಎದೆಮುಟ್ಟಿಕೊಂಡು ಹೇಳಲಿ. ಒಕ್ಕಲಿಗ‌ ಸಮಾವೇಶದಲ್ಲಿ ನಾನು ನಿಮ್ಮ ಮಗ ಎಂದು ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ. ಶಿವಕುಮಾರ (DK Shivakumar) ಮತ ಕೇಳುತ್ತಾರೆ. ದಲಿತ ನಾಯಕರು ದಲಿತ ಸಮುದಾಯದ ಮನವಿ ಮಾಡಿಕೊಳುತ್ತಾರೆ. ಆದರೆ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಭಿನ್ನವಾಗಿ ಕಾಣುತ್ತಾರೆ. ಪ್ರಧಾನಿ ಮೋದಿ ಜಾತಿ ಧರ್ಮದ ಆಧಾರದ ಮೇಲೆ ಮತ ಕೇಳಲ್ಲ ಎಂದು ಕಿಡಿಕಾರಿದ್ದಾರೆ.

Leave A Reply

Your email address will not be published.