Karnataka Times
Trending Stories, Viral News, Gossips & Everything in Kannada

Pradeep Eshwar: ಚಿಕ್ಕಬಳ್ಳಾಪುರದ ನೂತನ ಶಾಸಕ ಪ್ರದೀಪ್ ಈಶ್ವರ್ ಗೆ ಆಘಾತ

ರಾಜನಾಗಿರಲಿ ಇಲ್ಲ ಸಾಮಾನ್ಯ ಪ್ರಜೆಯೇ ಆಗಿರಲಿ ಮನಸ್ಸು ಹಿಂಡೊ ನೋವು ಬಂದರೆ ಎಲ್ಲರೂ ತಲೆ ಬಾಗಲೇ ಬೇಕು. ತಾಯಿ ಇಂದು ಜಗತ್ತಿನಲ್ಲಿ ಕಣ್ಣಿಗೆ ಕಾಣೊ ದೇವರೆಂದೆ ನಂಬಲಾಗುತ್ತಿದೆ ಅದೇ ರೀತಿ ಕಾಣುವ ದೇವರೆಂದರೆ ನಮಗೆಲ್ಲ ಭಕ್ತಿಭಾವನೆಯೊಂದಿಗೆ ಅವರು ಚಿರಂಜೀವಿ ಎಂದೇ ಭಾವಿಸುವೆವು ಆದರೆ ನಮಗೆ ಅರಿವಿಲ್ಲ ಸಾವು ಯಾರಿಗೆ ಯಾವ ಕ್ಷಣದಲ್ಲೂ ಧಾವಿಸಬಹುದೆಂದು ಹೀಗೆ ಕರೆಯದೆ ಬಂದ ಜವರಾಯನ ಅಂಕುಶದಿಂದ ನೋವಂತು ಕಟ್ಟಿಟ್ಟ ಬುತ್ತಿ ಇದೀಗ ಅದೇ ಮಾತೃ ವಿಯೋಗದ ನೋವಿನಲ್ಲು ಚಿಕ್ಕಬಳ್ಳಾಪುರದ ನೂತನ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಅವರಿದ್ದಾರೆ.

Advertisement

ಬಡತನದಿಂದ ಬೆಳೆದ ನಾಯಕ:

Advertisement

ಬಾಲ್ಯದಲ್ಲಿಯೇ ಅತೀ ಚಿಕ್ಕ ವಯಸ್ಸಿನಲ್ಲಿ ಬಡತನದ ಬೇಗೆಯ ನಡುವೆ ಹೆತ್ತ ತಂದೆ ತಾಯಿಯನ್ನು ಪ್ರದೀಪ್ ಅವರು ಕಳೆದುಕೊಂಡು ಅನಾಥರಾಗಿದ್ದರು ಆಗ ಅವರ ಬದುಕಿಗೊಂದು ಅರ್ಥನೀಡಿ ಬೆಳೆಸಿದ್ದ ಮಹಾ ತಾಯಿಯೇ ಈ ರತ್ನಮ್ಮ (Rathnama) ನವರು. ಈ ಮೂಲಕ ಮಗುವನ್ನು ಪ್ರೀತಿಯಿಂದ ಬೆಳಸಿ ವಿದ್ಯಾಭ್ಯಾಸ ಕೊಡಿಸಿ ಬಳಿಕ ಶಿಕ್ಷಕರಾಗುವಂತೆ ಸಹ ಪ್ರೇರೇಪಿಸಿದ್ದರು.

Advertisement

ರಾಜಕೀಯ ಆಸಕ್ತಿ:

Advertisement

ಆದರೆ ಕಾಲಕ್ರಮೇಣ ಅವರಿಗೆ ರಾಜಕೀಯ ಕೆಲ ನಾಯಕರ ಪರಿಚಯವಾಗಿ ಈ ಮೂಲಕ ಕಾಂಗ್ರೆಸ್ ಅವರ ಆಪ್ತರಾಗಿ ಚುನಾವಣಾ‌ ಪ್ರಚಾರ ಮಾಡುತ್ತಿದ್ದ ಅವರು ಬಳಿಕ ಈ ಬಾರಿ ನೇರ ಚುನಾವಣಾ ಅಖಾಡಕ್ಕೆ ಧುಮಿಕಿದ್ದು ಈ ಮೂಲಕ ಕಾಂಗ್ರೆಸ್ ಬಹುಮತ ಪಡೆಯಲು ಸಹ ಇವರು ನೆರವಾಗಿದ್ದರು ಚಿಕ್ಕಬಳ್ಳಾಪುರ ದ ನೂತನ ಶಾಸಕರಾಗಿ ಆಯ್ಕೆ ಆಗಿದ್ದು ಈ ಸಂತೋಷದಲ್ಲೆ ಅವರಿರ ಬೇಕಾದರೆ ಧೀಡಿರ್ ಆಗಿ ಬರಸಿಡಿಲಿನಂತೆ ತಾಯಿ‌ಕಳೆದುಕೊಂಡ ನೋವಿನ ಛಾಯೆ ಇವರ ಮನೆಯಲ್ಲಿ ಕಂಡುಬಂದಿದೆ.

ವಿಧಿ ವಿಧಾನ ನೆರವೆರಿಸಿದ ಮಗ:

ತಾಯಿ ಅಂದುಕೊಂಡಂತೆ ತಾನು ಸಾರ್ಥಕ ಬದುಕು ಕಾಣುತ್ತಿದ್ದೇನೆ ಇನ್ನು ಜನರಿಗೆ ಎಲ್ಲ ಸೌಕರ್ಯ ಕಲ್ಪಿಸಿ ಶಾಶ್ವತವಾಗಿ ತಾಯಿಗೆ ಹೆಮ್ಮೆ ಅನಿಸುವಂತೆ ಬದುಕಬೇಕೆಂಬ ಆಸೆ ಹೊತ್ತ ಪ್ರದೀಪ್ ಅವರು ಇದೀಗ ತಾಯಿ ಕಳೆದುಕೊಂಡ ನೋವಿನಲ್ಲೇ ಇದ್ದಾರೆ. ಮುಖ್ಯಮಂತ್ರಿ ಪದಗ್ರಹಣ ಸಮಾರಂಭದಲ್ಲಿದ್ದ ಇವರು ತಾಯಿ ನಿಧನದ ಸುದ್ದಿ ಕೇಳುತ್ತಲೇ ತಮ್ಮ ಹುಟ್ಟೂರಾದ ಪೇರೇಸಂದ್ರಕ್ಕೆ ಆಗಮಿಸಿ ತಾಯಿಯ ಕೊನೆಯ ವಿಧಿ ವಿಧಾಮಗಳನ್ನು ನೆರವೇರಿಸಿ ತಾಯಿಗೆ ಭಾವಪೂರ್ಣ ಅಂತಿಮ ವಿಧಾಯ ಹೇಳಿದ್ದಾರೆ. ಈಗಾಗಲೇ ಹೆತ್ತವರು ಕಳೆದುಕೊಂಡ ಅವರು ಮತ್ತೆ ಸಾಕು ತಾಯಿಯನ್ನು ಸಹ ಕಳೆದು ಕೊಂಡಿದ್ದು ಮತ್ತೆ ಪುನಃ ನೋವಿನಲ್ಲಿ ಮುಳುಗುವಂತಾಗಿದೆ. ಜನಸಾಮಾನ್ಯರು, ರಾಜಕೀಯ ನಾಯಕರು ಸಂತಾಪ ಸೂಚಿಸಿದ್ದಾರೆ. ತಾಯಿ ಕಳೆದುಕೊಂಡ ನೋವಿನಲ್ಲಿರುವ ಪ್ರದೀಪ್ ಅವರಿಗೆ ದೇವರು ಧೈರ್ಯ ನೀಡಿ ಈ ನೋವು ಸಹಿಸುವಂತಾಗಲಿ ಎಂದು ನಾವು ಸಹ ಕೇಳಿಕೊಳ್ಳೋಣ ಎಂದು ಈ ಮೂಲಕ ಹೇಳಲು ಇಚ್ಛಿಸುತ್ತೇವೆ.

Leave A Reply

Your email address will not be published.