Karnataka Times
Trending Stories, Viral News, Gossips & Everything in Kannada

Govt Schemes: ಎಲ್ಲಾ ವರ್ಗದ ಜನರಿಗೂ ಸಿಗುತ್ತೆ ತಿಂಗಳಿಗೆ 3000 ರೂ, ಈ ಯೋಜನೆಗೆ ತಡಮಾಡದೆ ಅರ್ಜಿ ಹಾಕಿ

advertisement

Employment Schemes | e-SHRAM: ಕೇಂದ್ರದಲ್ಲಿ ಬಿಜೆಪಿ ಸರಕಾರ ಕೂಡ ಈ ಬಾರಿ ಮೂರನೇ ಅವಧಿಯ ಆಡಳಿತವನ್ನು ಬಹಳ ಉತ್ತಮವಾಗಿ ನೆರವೇರಿಸುತ್ತಿದ್ದಾರೆ ಎಂದು ಹೇಳಬಹುದು. ಈಗಾಗಲೇ ಕೃಷಿಕರಿಗೆ , ಉದ್ಯಮದವರಿಗೆ, ವಿದ್ಯಾರ್ಥಿಗಳಿಗೆ, ವಯೋವೃದ್ಧರಿಗೆ ಪ್ರತ್ಯೇಕವಾಗಿ ಅನೇಕ ಯೋಜನೆ ಜಾರಿಗೆ ತರಲಾಗಿದ್ದು ಇದೀಗ ಕೇಂದ್ರ ಸರಕಾರದಿಂದ ಮಾಸಿಕ 6000 ಉಚಿತವಾಗಿ ನೀಡಲಾಗುತ್ತಿದೆ. ಈ ಸಹಾಯಧನ ಪಡೆಯಲು ಯಾರು ಅರ್ಹರು ಎಂಬ ಇತ್ಯಾದಿ ಅಂಶದ ಬಗ್ಗೆ ನಾವಿಂದು ನಿಮಗೆ ಮಾಹಿತಿ ನೀಡಲಿದ್ದು ಕೊನೆ ತನಕ ಓದಿ.

ಈ ಒಂದು ಯೋಜನೆ ಅಡಿಯಲ್ಲಿ ಗಂಡ ಮತ್ತು ಹೆಂಡತಿ ಇಬ್ಬರಿಗೂ ಸೇರಿ 6000 ರೂಪಾಯಿ ನೀಡಲಾಗುವುದು. ಗಂಡನಿಗೆ 3000 ಹಾಗೂ ಹೆಂಡತಿಗೆ 3000 ದಂತೆ ಹಣ ನೀಡಲಾಗುತ್ತದೆ. ತರಕಾರಿ ಮಾರುವವರು, ಬೀದಿ ಬದಿ ವ್ಯಾಪಾರ ಮಾಡುವವರು, ಗಾರೆ ಕೆಲಸ, ಮೇಸ್ತೀ ಕೆಲಸ, ರಿಕ್ಷಾ ಕೆಲಸ ಮಾಡುವ ಸಣ್ಣ ಪುಟ್ಟ ಕೆಲಸ ಸ್ವ ಉದ್ಯಮ ಮಾಡಿಕೊಂಡಿರಿವವರು ಅರ್ಜಿ ಸಲ್ಲಿಸಿದರೆ ಅರ್ಹರಿಗೆ 3000 ದಂತೆ ಹಣ ಮಂಜೂರು ಆಗಲಿದೆ. ಆದರೆ ಸರಕಾರಿ ಉದ್ಯೋಗದಲ್ಲಿ ಇರುವವರು ಅನರ್ಹರು ಎನ್ನಬಹುದು.

Image Source: Getty Images

advertisement

ಈ ದಾಖಲೆ ಅಗತ್ಯ
*ಅರ್ಜಿ ಸಲ್ಲಿಕೆ ಮಾಡುವವರು 18 ವರ್ಷದ ಮೇಲೆ 48 ವರ್ಷದ ಒಳಗಿನವರಾಗಿರಬೇಕು.
*ಮೊಬೈಲ್ ಸಂಖ್ಯೆ ಅಗತ್ಯ.
*ಬ್ಯಾಂಕ್ ಪಾಸ್ ಬುಕ್ ಅಗತ್ಯ.
*ಓಟಾರ್ ಐಡಿ ಅಗತ್ಯ ನೀಡಬೇಕು.
*ಇದಕ್ಕೆ ನೀವು ಅರ್ಜಿ ಸಲ್ಲಿಸಬೇಕು.
*ಪ್ರತೀ ತಿಂಗಳು 55 ರೂಪಾಯಿ ಕಟ್ಟಿದರೆ 60 ವರ್ಷದ ಬಳಿಕ ತಿಂಗಳಿಗೆ 6000 ರೂಪಾಯಿ ಹಣ ಬರಲಿದೆ.

ಎಲ್ಲಿ ಅರ್ಜಿ ಸಲ್ಲಿಸಬೇಕು?
ಈ ಒಂದು ಯೋಜನೆಗೆ ಇ ಶ್ರಮ್ ಕಾರ್ಡ್ ಎನ್ನಬಹುದು. ಇದರ ಅಡಿಯಲ್ಲಿ ಅರ್ಜಿ ಸಲ್ಲಿಸಲು ಗ್ರಾಮ ಒನ್, ಬೆಂಗಳೂರು ಒನ್ ಹಾಗೂ ಕರ್ನಾಟಕ ಒನ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಕೆಲವೊಂದು ಸೈಬರ್ ಸೆಂಟರ್ ನಲ್ಲೊ ಕೂಡ ಈ ಸಂಬಂಧಿತ ಅರ್ಜಿ ಸಲ್ಲಿಸಬಹುದು. ನೀವು ಅಲ್ಲಿಗೆ ಅಪ್ಲಿಕೇಶನ್ ಹಾಕಲು ಹೋಗುವಾಗ ಇ ಶ್ರಮ್ ಕಾರ್ಡ್ ಗೆ ಅಪ್ಲಿಕೇಶನ್ ಹಾಕಬೇಕು ಎಂದು ಕೇಳಿ ಆಗ ಅಪ್ಲಿಕೇಶನ್ ಅರ್ಹರಿಗೆ ಹಣ ಬರಲಿದೆ. 60 ವರ್ಷ ಮೀರಿದ್ದವರಿಗೆ ಮೊದಲೇ ನೋಂದಣಿ ಮಾಡಿದ್ದರೆ ಹಣ ಶೀಘ್ರ ಬರಲಿದೆ.

ನೀವು 55ರೂಪಾಯಿ ಕಟ್ಟಿದರೆ ಕೇಂದ್ರ ಸರಕಾರ 55 ರೂಪಾಯಿ ಕಟ್ಟಲಿದೆ. ಹೀಗೆ ಒಟ್ಟು 110 ರೂಪಾಯಿ ಪೇ ಆದಂತೆ ಆಗಲಿದೆ. ವಯಸ್ಸಿನ ಆಧಾರದ ಮೇಲೆ ಈ ಮೊತ್ತ ವಿಭಿನ್ನವಾಗಿ ಇರಲಿದೆ. 18 ವರ್ಷದವರು 55 ರೂಪಾಯಿ, 19 ವರ್ಷದವರು 58 ರೂಪಾಯಿ, 20 ವರ್ಷದವರು 60 ರೂಪಾಯಿ, ನಿಮ್ಮ ವಯಸ್ಸು 30 ಎಂದಾದರೆ ಆಗ 105 ರೂಪಾಯಿ ನೀವು ಕಟ್ಟಿದರೆ 105 ರೂಪಾಯಿ ಕೇಂದ್ರ ಸರಕಾರ ನೀಡಲಿದೆ. ಹಾಗಾಗಿ ಈ ಇ ಶ್ರಮ್ ಕಾರ್ಡ್ ಅಡಿಯಲ್ಲಿ ಇಳಿ ವಯಸ್ಸಿಗೆ ಆರ್ಥಿಕ ಸಹಾಯಧನ ಸಿಕ್ಕಂತೆ ಆಗಲಿದೆ ಎಂದು ಕೂಡ ಹೇಳಬಹುದು.

advertisement

Leave A Reply

Your email address will not be published.