Karnataka Times
Trending Stories, Viral News, Gossips & Everything in Kannada

Sumalatha: ಇಡಿ ಹಾಗೂ ಐಟಿಗೆ ದಾಳಿಗೆ ಹೆದರಿ ಬಿಜೆಪಿ ಸೇರಿದ್ರಾ ಕೇಳಿದ್ದಕ್ಕೆ ಉತ್ತರ ಕೊಟ್ಟ ಸುಮಲತಾ

Advertisement

ರಾಜಕೀಯಕ್ಕೆ ಬಂದು ಯಶಸ್ಸುಕಂಡವರು ಅಂಬರೀಶ್ (Ambareesh) ತನ್ನ ವೈಯಕ್ತಿಕ ನಿಲುವುಗಳ ಮೂಲಕ ಸಂಸದರಾಗಿ, ಸಚಿವರಾಗಿ ಅವರು ರಾಜಕೀಯದಲ್ಲಿ ಸಕ್ರಿಯರಾಗಿದ್ದವರು, ಜನ ಪರ ಚಿಂತನೆಗಳನ್ನು ಮಾಡಿ ಹೆಸರು ಗಿಟ್ಟಿಸಿಕೊಂಡವರು. ಕಾಂಗ್ರೆಸ್ ಪಕ್ಷದಲ್ಲಿಯೇ ರಾಜಕೀಯ ನಿಲುವನ್ನು ಕಂಡವರು,ಸಿನಿಮಾದಿಂದ ರಾಜಕೀಯಕ್ಕೆ ಬಂದ ಅಂಬರೀಶ್ ಅವರು 1994 ರಲ್ಲಿ ಪಿ.ವಿ.ನರಸಿಂಹರಾವ್ (Narasimha Rao) ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದ್ದರು. 2013ರ ವಿಧಾನಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದರು ಇವರಾಗಿದ್ದಾರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ವಸತಿ ಸಚಿವರು ಕೂಡ ಆಗಿದ್ದಾರೆ.

ಜಿಜೆಪಿ ಸಪೋರ್ಟ್ ಮಾಡಲು ಕಾರಣವೇನು:

ಕಳೆದ ಲೋಕಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿ ಸುಮಲತಾ ಅಂಬರೀಷ್‌ (Sumalatha Ambareesh), ನಿಖಿಲ್‌ ಕುಮಾರಸ್ವಾಮಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದರು. ಮಂಡ್ಯದಲ್ಲಿ ಸುಮಲತಾ ಅವರು ಜಯಭೇರಿ ಬಾರಿಸಲು ಬೇಕಾದ ಎಲ್ಲಾ ನೆರವೂ ಸಿಕ್ಕಿತ್ತು. ಆದ್ರೆ, ಸಂಸದರಾದ ಬಳಿಕ ಸುಮಲತಾ ಅವರು ಯಾವುದೇ ಪಕ್ಷದ ಜೊತೆ ಗುರುತಿಸಿ ಕೊಳ್ಳಲಿಲ್ಲ, ಕಳೆದ 4 ವರ್ಷಗಳಿಂದ ತಮ್ಮ ರಾಜಕೀಯ ನಿಲುವನ್ನ ಯಾರ ಜೊತೆಯು ಹೇಳಿ ಕೊಂಡಿಲ್ಲ, ಈಗ ಬಿಜೆಪಿ ಸೇರಿದ್ದಾರೆ ಎನ್ನುವ ಸುದ್ದಿ ಹರಡಿದೆ

ಸ್ಪಷ್ಟನೆ ಕೊಟ್ಟ Sumalatha:

ಇಡಿ ಹಾಗೂ ಐಟಿ ಗೆ ಹೆದರಿ ಬಿಜೆಪಿ ಸೇರಿದ್ರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸುಮಲತಾ ಅಂಬರೀಶ್ ಯಾವತ್ತು ತನ್ನ ನಿಲುವನ್ನು ಬದಲಾಯಿಸಿಲ್ಲ, ಆದರೆ ಬೇರೆ ಪಕ್ಷದ ವಿಚಾರಗಳನ್ನು ಅವರು ಓಪ್ಪಿದ್ದರು, ಐಟಿ ಗೆ ಹೆದರಿ ಕುರೂವಷ್ಟು ನಮ್ಮಲ್ಲಿ ಹಣ ಓಡವೆ‌ ಇಲ್ಲ ಅಂದರು, ಪ್ರಧಾನಿ ಮೋದಿ ಅವರು ಚುನಾವಣಾ ಪ್ರಚಾರ ಸಮಾವೇಶದಲ್ಲಿ ಅಂಬರೀಶ್ ಅವರನ್ನು ಹೊಗಳಿ, ಸುಮಲತಾ ಅವರಿಗೆ ತಮ್ಮ ಬೆಂಬಲ ಕೂಡ ಘೋಷಿಸಿದ್ದರು. ಮೋದಿ ಅವರು‌ ಸುಸ್ಥಿರ ನಾಯಕತ್ವ ಹಾಗೂ ಜನ ಪರ ಕಾಳಜಿ ಇಟ್ಟುಕೊಂಡು ದೇಶ, ರಾಜ್ಯ, ಹಳ್ಳಿಗಳನ್ನು ಅಭಿವೃದ್ದಿ ದಾರಿಯಲ್ಲಿ ಕರೆದುಕೊಂಡು ಹೋಗುವ ನಾಯಕತ್ವ ಪ್ರಧಾನಿ ನರೇಂದ್ರ ಮೋದಿ ಅವರು ಮಾಡುತ್ತಿದ್ದಾರೆ, ಪಕ್ಷವನ್ನು ವಿರೋಧಿ ಸಲು ಸಾಧ್ಯ ವಿಲ್ಲ ಅಂದರು

Leave A Reply

Your email address will not be published.