Karnataka Times
Trending Stories, Viral News, Gossips & Everything in Kannada

State Chief Minister: ರಾಜ್ಯದ ಮುಖ್ಯಮಂತ್ರಿ ಆದರೆ ನಿಮಗೆ ಸಿಗುವ ಸ್ಯಾಲರಿ ಎಷ್ಟು? ಯಾವೆಲ್ಲ ಸೌಲಭ್ಯಗಳು ಫ್ರೀ ಇಲ್ಲಿದೆ ವರದಿ

Advertisement

ರಾಜ್ಯದ ಮುಖ್ಯಮಂತ್ರಿ ಹುದ್ದೆಗೆ ಎಷ್ಟು ಸಂಭಾವನೆ ಇರಬಹುದು? ಅವರಿಗೆ ಏನೆಲ್ಲಾ ಉಚಿತ ಸೌಲಭ್ಯಗಳು ಇರಬಹುದು ಎಂಬುದು ಹಲವರ ಕುತೂಹಲ. ಹಾಗಾಗಿ ನಾವು ಈ ಲೇಖನದಲ್ಲಿ ಒಬ್ಬ ಮುಖ್ಯಮಂತ್ರಿ ಆದರೆ ರಾಜ್ಯ ಸರ್ಕಾರದಿಂದ ಏನೆಲ್ಲಾ ಸೌಲಭ್ಯಗಳು ಸಿಗುತ್ತವೆ ಎಂಬುದರ ಬಗ್ಗೆ ತಿಳಿಸಿಕೊಡುತ್ತೇವೆ.

ನಮ್ಮ ರಾಜ್ಯದ ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರಿಗೆ ಸಿಗುವ ಸಂಬಳ ಎಷ್ಟು ಗೊತ್ತಾ? ರಾಜ್ಯದಲ್ಲಿ ಮುಖ್ಯಮಂತ್ರಿ (Chief Minister) ಹುದ್ದೆಗೆ 75,000 ರೂ. ಮೂಲ ಸಂಭವನ ನೀಡಲಾಗುತ್ತದೆ ಮುಖ್ಯಮಂತ್ರಿ ಬಸವರಾಜ್ ಅವರಿಗೂ ಇದೆ ಸಂಭಾವನೆ ಸಿಗುತ್ತದೆ. ಅಂದ್ರೆ ವರ್ಷಕ್ಕೆ 9 ಲಕ್ಷ ರೂಪಾಯಿಗಳ ಸಂಭಾವನೆ ಸಿಗುತ್ತದೆ. ಆದರೆ ಇಷ್ಟೇ ಅಲ್ಲ ಇದರ ಜೊತೆಗೆ ಇನ್ನೂ ಹಲವು ಸೌಲಭ್ಯಗಳನ್ನು ಸರ್ಕಾರ ನೀಡುತ್ತದೆ. ವರ್ಷಕ್ಕೆ 4.50 ರೂ. ಲಕ್ಷಗಳ ಆಥಿತ್ಯ ಭತ್ಯೆ ದೊರೆಯುತ್ತದೆ. ಇನ್ನು ಮುಖ್ಯಮಂತ್ರಿಗಳಿಗೆ ಬೆಂಗಳೂರಿನಲ್ಲಿ ಒಂದು ಸುಸಜ್ಜಿತವಾದ ಮನೆಯನ್ನು ನೀಡಲಾಗುತ್ತದೆ ಅದರ ಖರ್ಚು ವೆಚ್ಚಗಳನ್ನು ಕೂಡ ಸರ್ಕಾರವೇ ಭರಿಸುತ್ತದೆ. ಸರ್ಕಾರ ಕೊಡುವ ಈ ಮನೆ ಬೇಡ ಎಂದರೆ ತಿಂಗಳಿಗೆ 1.50 ಲಕ್ಷ ಭತ್ಯೆ ಸರ್ಕಾರ ನೀಡುತ್ತದೆ.

ಮುಖ್ಯಮಂತ್ರಿ (Chief Minister) ಹುದ್ದೆಯಲ್ಲಿ ಇರುವವರಿಗೆ ಹಾಗೂ ಮುಖ್ಯಮಂತ್ರಿ ಹುದ್ದೆಯನ್ನು ಕಳೆದುಕೊಂಡ 60 ದಿನಗಳವರೆಗೆ ಈ ಮನೆಯಲ್ಲಿ ವಾಸ ಮಾಡಬಹುದು. ಇನ್ನು ಸರ್ಕಾರದಿಂದ ಮುಖ್ಯಮಂತ್ರಿಗಳಿಗೆ ಒಂದು ಕಾರನ್ನು ಅಲೋಟ್ ಮಾಡಿ ಕೊಡುತ್ತಾರೆ. ಈ ಕಾರಿನ ಎಲ್ಲಾ ಖರ್ಚು ವೆಚ್ಚಗಳು, ಡ್ರೈವರ್ ಭತ್ಯೆ ಎಲ್ಲವನ್ನು ಸರ್ಕಾರವೇ ಭರಿಸುತ್ತದೆ ಜೊತೆಗೆ ತಿಂಗಳಿಗೆ ಎರಡು ಸಾವಿರ ಲೀಟರ್ ಪೆಟ್ರೋಲ್ ಹಣ ಕೂಡ ಸರ್ಕಾರ ನೀಡುತ್ತದೆ. ಅಂದರೆ ತಿಂಗಳಿಗೆ ಸುಮಾರು ಎರಡು ಲಕ್ಷ ರೂಪಾಯಿಗಳ ಕಾರಿನ ಭತ್ಯೆ ಕೂಡ ದೊರೆಯುತ್ತದೆ. ಇನ್ನು ಮುಖ್ಯಮಂತ್ರಿಗಳು ಸ್ವಂತ ನಿವಾಸದಲ್ಲಿ ಇದ್ದರೆ ಕರೆಂಟ್ ಬಿಲ್ ಹಾಗೂ ವಾಟರ್ ಬಿಲ್ ಕೇವಲ 200 ರೂಪಾಯಿಗಳನ್ನು ಅಷ್ಟು ಮಾತ್ರ ಭರಿಸಬೇಕು. ಇನ್ನು ರಾಜ್ಯ ಸರ್ಕಾರದ (State Govt) ಹೆಲಿಕ್ಯಾಪ್ಟರ್ ಹಾಗೂ ವಿಮಾನಗಳನ್ನು ಆಫೀಶಿಯಲ್ ಕೆಲಸಕ್ಕಾಗಿ ಉಚಿತವಾಗಿ ಮುಖ್ಯಮಂತ್ರಿಗಳು ಬಳಸಿಕೊಳ್ಳಬಹುದು.

ಅಧಿಕಾರ ಸಿಕ್ಕಾಗ ತಮ್ಮ ಊರಿನಿಂದ ಬೆಂಗಳೂರಿಗೆ ಶಿಫ್ಟ್ ಆಗುವುದಕ್ಕೂ ಹಾಗೇನೆ ಅಧಿಕಾರ ಕಳೆದುಕೊಂಡು ಬೆಂಗಳೂರಿನಿಂದ ತಮ್ಮ ಊರಿಗೆ ಹೋಗುವುದಕ್ಕೂ ಕೂಡ ಪ್ರಯಾಣ ಭತ್ಯೆಯನ್ನು ಸರ್ಕಾರ ನೀಡುತ್ತದೆ. ಅದೇ ರೀತಿಯಾಗಿ ರಸ್ತೆ ರೈಲು ವಿಮಾನ ಯಾವುದ್ರಲ್ಲಿ ಪ್ರಯಾಣ ಮಾಡಿದ್ರು ಪ್ರಯಾಣ ಭತ್ಯೆ ಸಿಗುತ್ತದೆ. ಈ ಭತ್ಯೆ ಅವರು ಪ್ರಯಾಣಿಸುವ ಸಾರಿಗೆಯ ಮೇಲೆ ಅವಲಂಬಿತವಾಗಿರುತ್ತದೆ. ಇದರ ಜೊತೆಗೆ ಪ್ರಯಾಣದ ವೇಳೆ ಬೇರೆ ಸ್ಥಳದಲ್ಲಿ ಉಳಿದುಕೊಂಡರೆ ಅದಕ್ಕೂ ಕೂಡ ದಿನಭತ್ಯೆ ಸಿಗುತ್ತದೆ.

ಇನ್ನು ವಿದೇಶ ಪ್ರಯಾಣ ಮಾಡಿದರೆ ಆಫೀಸಿಯಲ್ ಆಗಿದ್ರೆ ಅಥವಾ ವೈದ್ಯಕೀಯ ಚಿಕಿತ್ಸೆಗಾಗಿ ಹೋಗಿದ್ದರು ಕೂಡ ಸರ್ಕಾರ ಇದಕ್ಕೆ ಭತ್ಯೆಯನ್ನು ನೀಡುತ್ತದೆ. ಇನ್ನು ಮುಖ್ಯಮಂತ್ರಿಗಳಿಗೆ ಹಾಗೂ ಅವರ ಕುಟುಂಬದವರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಸಿಗುತ್ತದೆ ಇನ್ನು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಂಡರೆ ಪಾವತಿಸಿದ ಹಣವನ್ನು ಪುನಃ ಸರ್ಕಾರ ಹಿಂತಿರುಗಿಸಿಕೊಡುತ್ತದೆ. ಮುಖ್ಯಮಂತ್ರಿ ಆಗಿರುವವರು ಎಂಎಲ್ಎ (MLA) ಕೂಡ ಆಗಿದ್ದರೆ ಅವರಿಗೆ ಎಂಎಲ್ಎ (MLA) ಗಳಿಗೆ ಏನೆಲ್ಲಾ ಸೌಲಭ್ಯಗಳನ್ನು ನೀಡಲಾಗುತ್ತದೆಯೋ ಅವುಗಳನ್ನು ಕೂಡ ಕೊಡಲಾಗುತ್ತದೆ. ಅಂದರೆ ಮುಖ್ಯಮಂತ್ರಿ ಗೆ ಸಿಗುವ ಸೌಲಭ್ಯದ ಜೊತೆಗೆ ಎಂಎಲ್ಎಗೆ ಸಿಗುವಂತಹ ಸೌಲಭ್ಯಗಳು ಕೂಡ ಒಬ್ಬ ಮುಖ್ಯಮಂತ್ರಿಗೆ ಸಿಗುತ್ತದೆ.

ಉದಾಹರಣೆಗೆ ಎಂಎಲ್ಎ (MLA) ಗೆ ಕೊಡಲಾಗುವ ಕ್ಷೇತ್ರ ಭತ್ಯೆ 60,000 ದೂರವಾಣಿ ಭತ್ಯೆ 20,000, ಆಪ್ತ ಸಹಾಯಕರನ್ನ ನೇಮಿಸಿಕೊಳ್ಳಲು 20,000 ರೂಪಾಯಿಗಳು ಹಾಗೂ ಪಿಂಚಣಿ ಕೂಡ ದೊರೆಯುತ್ತದೆ. ಇನ್ನು ಎಂಎಲ್ಎ ಗಳ ಸ್ಯಾಲರಿ ಯಂತೆ ಮುಖ್ಯಮಂತ್ರಿಗಳ ಸಂಬಳಕ್ಕೆ ಸಂಬಂಧಪಟ್ಟ ಹಾಗೆ ಐದು ವರ್ಷಗಳಿಗೊಮ್ಮೆ ವೇತನ ಪರಿಷ್ಕರಣೆ ಕೂಡ ಮಾಡಲಾಗುತ್ತದೆ. ಹೀಗೆ ಒಂದು ರಾಜ್ಯದ ಮುಖ್ಯಮಂತ್ರಿ ಆದರೆ ಸರ್ಕಾರದಿಂದ ಸಿಗುವ ಸೌಲಭ್ಯಗಳು ಸಾಕಷ್ಟು.

Leave A Reply

Your email address will not be published.