ನಟಿ ಸುಮಲತಾ ಅಂಬರೀಶ್ (Sumalatha Ambareesh) ಅವರು ನಟನೆಯಲ್ಲಿ ಪ್ರವೀಣರಾದಂತೆ ರಾಜಕೀಯದಲ್ಲೂ ಈಗ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ಅಷ್ಟೆ ಅವರು ಕ್ರಾಂತಿ ಸಿನೆಮಾದಲ್ಲೂ ಸಹ ಅಭಿನಯಿಸಿದ್ದು ಈಮೂಲಕ ಎಲ್ಲಕ್ಕೂ ಸುಮಲತಾ ಅವರು ಸೈ ಅನಿಸಿಕೊಳ್ಳುತ್ತಿದ್ದಾರೆ. ನಟ ಅಂಬರೀಶ್ (Actor Ambarish) ಅವರ ಅಗಲುವಿಕೆಯ ಬಳಿಕ ಮಂಡ್ಯ ಜನತೆಯ ಪ್ರೀತಿ ಗಳಿಸಿದ್ದ ಮಂಡ್ಯ ಸೊಸೆ ಖ್ಯಾತಿಯ ಸುಮಲತಾ (Sumalatha) ಅವರು ಸದ್ಯ ಈಗ ಮತ್ತೊಂದು ಚುನಾವಣೆಯ ಅಖಾಡಕ್ಕೆ ಜೆಡಿಎಸ್ (JDS) ಗೆ ತಿರುಗೇಟು ನೀಡಲು ಕಾಯುತ್ತಿದ್ದಾರೆ.
ಕಳೆದ ಬಾರಿ ಚುನಾವಣೆಯಲ್ಲಿ ನಿಖಿಲ್ ಕುಮಾರ ಸ್ವಾಮಿ (Nikhil Kumaraswamy). ಯನ್ನು ಬಾರಿ ಸಂಖ್ಯೆಯ ಬಹುಮತ ಗಳಿಸುವ ಮೂಲಕ ಸುಮಲತಾ ಜಯಬೇರಿ ಬಾರಿಸಿ ಜೆಡಿಎಸ್ (JDS) ಹೀನಾಯ ಸೋಲನ್ನು ಅನುಭವಿಸುವಂತೆ ಮಾಡಿದ್ದರು ಬಳಿಕ ಇದೀಗ ವಿಧಾನ ಸಭೆಯ ಚುನಾವಣೆಗೆ ಪಕ್ಷದ ಪರ ಚುನಾವಣಾ ಪ್ರಚಾರಕ್ಕೆ ಬಂದ ಸುಮಲತಾ ಅವರು ಇದೀಗ ಜೆಡಿಎಸ್ (JDS) ವಿರುದ್ಧ ಒಂದು ಹೇಳಿಕೆ ನೀಡಿದ್ದಾರೆ.
ಏನಂದ್ರು?
ಮಂಡ್ಯದಲ್ಲಿ ಜೆಡಿಎಸ್ (JDS) ಒಂದು ಪ್ರಬಲ ಪಕ್ಷ ಎಂಬುದು ನಮಗೆಲ್ಲ ತಿಳಿದೆ ಇದೆ. ಅಲ್ಲಿ ಅಂಬರೀಶ್ ಹೇಗೆ ಪ್ರಮುಖರೋ ಕುಮಾರಸ್ವಾಮಿ (Kumaraswamy) ಸಹ ಪ್ರಬಲ ವ್ಯಕ್ತಿಯೇ ಇಬ್ಬರಿಗೂ ಫ್ಯಾನ್ಸ್ ಕೂಡಾ ಇದ್ದಾರೆ. ಈ ಮೂಲಕ ಸುಮಲತಾ ಅವರು ಪತಿಯ ಬಳಿಕ ರಾಜಕೀಯ ರಂಗಕ್ಕೆ ಬಂದಿದ್ದಾರೆ. ಮಂಡ್ಯದಲ್ಲಿ ಸಂಸದೆಯಾದ ಇವರು ಜೆಡಿ ಎಸ್ ಎನ್ನುವುದು ಸ್ವಾಭಿಮಾನ ಇಲ್ಲದ ಒಂದು ಪಕ್ಷ ಎಂಬ ಹೇಳಿಕೆ ನೀಡಿದ್ದಾರೆ, ಸ್ವಾಭಿಮಾನಿಗಳು ಜೆಡಿಎಸ್ ಪಕ್ಷದಲ್ಲಿ ಇರೊಲ್ಲ ಎಂದಿದ್ದಾರೆ. ಅದೇ ರೀತಿ ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ (Uttar Pradesh CM Yogi Adhithyanath) ಅವರು ಇಲ್ಲಿಗೆ ಬರುವುದು ಪಕ್ಷಕ್ಕೆ ಮತ್ತಷ್ಟು ಪ್ರಚಾರ ಬಂದಂತೆ ಇದೆ ಎಂದಿದ್ದಾರೆ, ರಮ್ಯಾ ಬಗ್ಗೆ ಕೇಳಿದ್ದಕ್ಕೆ ಅದು ಅವರ ಪಕ್ಷ ಅವರು ಪ್ರಚಾರ ನೀಡಲಿ ನಾನು ನಮ್ಮ ಪಕ್ಷದ ಪರ ಪ್ರಚಾರ ಮಾಡುತ್ತಿದ್ದೇನೆ ಮಂಡ್ಯದಲ್ಲಿ ಬಿಜೆಪಿಗೆ ಉತ್ತಮ ಬೆಂಬಲ ಇದೆ ಗೆಲುವು ನಿಶ್ಚಿತ ಎಂದಿದ್ದಾರೆ.
ಒಟ್ಟಾರೆಯಾಗಿ ರಾಜ್ಯದೆಲ್ಲಡೆ ಚುನಾವಣಾ ಕಾವು ಜೋರಾಗಿಯೇ ಬೀಸುತ್ತಿದ್ದು ಮುಂಬರುವ ನಾಯಕರು ಯಾರೆಂಬ ಊಹೆ ಸಹ ಇಲ್ಲಿ ಸಿಗದಷ್ಟು ಈ ಬಾರಿ ಚುನಾವಣಾ ಫಲಿತಾಂಶ ಬರುವಂತಿದೆ. ಒಟ್ಟಿನಲ್ಲಿ ಸುಮಲತಾ ಅವರು ಜೆ ಡಿ ಎಸ್ ಗೆ ಟಾಂಗ್ ನೀಡುವ ಮೂಲಕ ಮಾತನಾಡಿದ್ದಾರೆ.