Actress Ramya: ಸಂಕಷ್ಟದಲ್ಲಿದ್ದಾಗ ರಾಹುಲ್ ಗಾಂಧಿ ಮಾಡಿದ ಆ ಸಹಾಯವನ್ನು ಮುಲಾಜಿಲ್ಲದೆ ಹೇಳಿದ ರಮ್ಯಾ

Advertisement
ಸಿನೆಮಾ ತಾರೆಯರು ರಾಜಕೀಯಕ್ಕೆ ಬರುವುದು ಹೊಸತೇನಲ್ಲ. ಬಹುತೇಕ ಸಿನೆಮಾ ತಾರೆಯರು ರಾಜಕೀಯದಲ್ಲಿ ಸಹ ಫೇಮಸ್ ಆಗಿದ್ದಾರೆ. ಈ ನಿಟ್ಟಿನಲ್ಲಿ ನಟಿ ರಮ್ಯಾ (Actress Ramya) ಅವರ ಸಾಧನೆಯನ್ನು ಸಹ ಕಾಣಬಹುದು. ಫೇಮಸ್ ನಟಿಯಾದ ಇವರು ಬಳಿಕ ಪ್ರಖ್ಯಾತ ರಾಜಕೀಯವ್ಯಕ್ತಿ ಸಹ ಆಗುತ್ತಾರೆ ಈ ಜರ್ನಿ ಬಗ್ಗೆ ವೀಕೆಂಡ್ ವಿತ್ ರಮೇಶ್ (Weekend With Ramesh) ಕಾರ್ಯಕ್ರಮದಲ್ಲಿ ಮಾತನಾಡಿದ್ದು ಸದ್ಯ ಈ ಶೋ ಅಂತೂ ಫೇಮಸ್ ಆಗಿದೆ.
ನಟಿ ರಮ್ಯಾ ಅವರು ಮಂಡ್ಯ 2013ರ ಉಪಚುನಾವಣೆಯಲ್ಲಿ ನಿಂತು ಗೆದ್ದಿದ್ದರು. ಸಂಸದರಾಗಿ ಸ್ವಲ್ಪ ಕಾಲದಲ್ಲೆ ಮತ್ತೊಂದು ಲೋಕಸಭಾ ಚುನಾವಣೆಯಲ್ಲಿ ಸೋತು ಹೋದರು. ಈ ಅವಧಿಯಲ್ಲಿ ಸಿಕ್ಕ ಅಪರೂಪದ ಅನುಭವವನ್ನು ಅವರು ಹಂಚಿಕೊಂಡಿದ್ದಾರೆ. ರಾಷ್ಟ್ರೀಯ ಕಾಂಗ್ರೆಸ್ ನ (Congress) ಸಾಮಾಜಿಕ ಜಾಲತಾಣದ ಮುಖ್ಯಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಅವರು ಅಲ್ಲಿನ ತಮ್ಮ ಕೊಲೀಕ್ಸ್ ಅವರನ್ನು ಭೇಟಿ ಮಾಡಿ ಖುಷಿಪಟ್ಟಿದ್ದಾರೆ.
ರಾಹುಲ್ ಗಾಂಧಿ ಸಾಂತ್ವನ:
ಈ ಬಗ್ಗೆ ಮಾತಾಡಿದ್ದ ಅವರು ನನ್ನ ಜೀವನದಲ್ಲಿ ಆಕಸ್ಮಿಕ ಸಂಗತಿಗಳೇ ಹೆಚ್ಚು ನಡೆದವು ಸಂಸದೆಯಾಗಿ ಗೆದ್ದಾಗ ಪ್ರೋತ್ಸಾಹಿಸಲು ತಂದೆ ಇದ್ದರೂ ಆದರೆ ನಾನು ಪುನಃ ಸೋತಾಗ ಅವರೂ ಇರಲಿಲ್ಲ. ತಂದೆಯ ಅಗಲಿಕೆ ನನಗೆ ಆತ್ಮಹತ್ಯೆಯ ಯೋಚನೆಗೂ ದಾರಿ ಮಾಡಿಕೊಟ್ಟಿತ್ತು. ಆ ಸಮಯದಲ್ಲಿ ನಂಗೆ ಸಾಂತ್ವಾನ ಹೇಳಿದವರ ಸಾಲಿನಲ್ಲಿ ರಾಹುಲ್ ಗಾಂಧಿ (Rahul Gandhi) ಅವರು ಯಾವಾಗಲೂ ನೆನಪಾಗುತ್ತಾರೆ. ಅವರು ನನಗೆ ಜೀವನದಲ್ಲಿ ಬದುಕಲು ಮರು ಉತ್ಸಾಹ ನೀಡಿದರು, ನನಗೆ ರಾಜಕೀಯ, ಚುನಾವಣೆ ಎಲ್ಲ ಹೊಸದಾಗಿತ್ತು ಅದನ್ನು ಕಲಿಯಲು ಮಂಡ್ಯದ ಅಭಿಮಾನಿಗಳು ಸಾತ್ ನೀಡಿದರು. ಬಳಿಕ ಅಂಬರೀಶ್ ಅವರ ಬಗ್ಗೆ ಮಾತಾಡಿ ಅವರು ನೀಡಿದ್ದ ನಾಯಿ ಮರಿ ಬ್ರ್ಯಾಂಡಿ ಬಗ್ಗೆ ಸಹ ಮಾತಾಡಿದ್ದಾರೆ ಇಂದು ಅದು ನನ್ನ ಜೊತೆಗಿಲ್ಲವಾದರೂ ಅದರೊಂದಿಗಿನ ನೆನಪೊಂದು ಶಾಶ್ವತ ಎಂದಿದ್ದಾರೆ.
ಈ ಮೂಲಕ ಈ ಬಾರಿಯ ವೀಕೆಂಡ್ ವಿತ್ ರಮೇಶ್ ಶೊ ಮಾತ್ರ ಮೊದಲ ಸಾಧಕರೇ ಹೆಚ್ಚು ಹೈಲೈಟ್ ಆಗಿದ್ದು ಮುಂದಿನ ದಿನದಲ್ಲಿ ಯಾವೆಲ್ಲ ಸಾಧಕರು ಬರಬಹುದು ಎಂದು ಅಭಿಮಾನಿಗಳೇ ಅವರಿವರ ನಿರೀಕ್ಷೆಯಲ್ಲಿ ಇದ್ದಾರೆ.