Ind China ಮೊದಲಿಗೆ ಭಾರತ ದೇಶದ ಪ್ರತಿಯೊಂದು ತಯಾರಿಗಳು ಹಾಗೂ ಪ್ರತಿಯೊಂದು ಕಾರ್ಯಾಚರಣೆಗಳು ಕೂಡ ನೆರೆಹೊರೆಯ ದೇಶವಾಗಿರುವಂತಹ ಪಾಕಿಸ್ತಾನವನ್ನು(Pakistan) ಗಮನದಲ್ಲಿ ಇರಿಸಿಕೊಂಡು ತಯಾರಿಸಲಾಗುತ್ತಿತ್ತು ಆದರೆ ಈಗ ಕಾಲ ಬದಲಾಗಿದೆ. ಈಗ ಪ್ರತಿಯೊಂದು ಭಾರತದ ಕಾರ್ಯಾಚರಣೆಗಳು ಕೂಡ ಅತ್ಯಂತ ವೇಗವಾಗಿ ಬೆಳೆಯುತ್ತಿರುವಂತಹ ಚೀನಾ ದೇಶವನ್ನು ಗಮನದಲ್ಲಿರಿಸಿಕೊಂಡು ತಯಾರಿಯಾಗುತ್ತಿದೆ. ಅದರಲ್ಲೂ ಇಡೀ ಜಾಗತಿಕ ಮಟ್ಟದಲ್ಲಿ ಗಮನಿಸುವುದಾದರೆ ಏಷ್ಯಾದಿಂದ ಚೀನಾ(China) ಹಾಗೂ ಭಾರತ(Bharath) ದೇಶಗಳ ನಡುವಿನ ಹಗ್ಗ ಜಗ್ಗಾಟ ಎನ್ನುವುದು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
ಚೀನಾದ ವಿರುದ್ಧವಾಗಿ ದ್ವೀಪ(Island) ಗಳಲ್ಲಿ ಸಮುದ್ರ ಮಾರ್ಗವನ್ನು ನಿರ್ಮಿಸುವುದು ಸೇರಿ, ಬೇರೆ ಬೇರೆ ದೇಶಗಳ ಜೊತೆಗೆ ವಾಣಿಜ್ಯ ಸಂಬಂಧವನ್ನು ಗಟ್ಟಿ ಮಾಡಿಕೊಳ್ಳುವುದು ಮತ್ತು ಕ್ವಾಡ್ ನಲ್ಲಿ ಚೀನಾದ ವಿರುದ್ಧವಾಗಿ ಭಾರತದ ರಣ ನೀತಿ ಸೇರಿದಂತೆ ಹಲವಾರು ವಿಚಾರಗಳಲ್ಲಿ ಚೀನಾವನ್ನು ಹಿಂದಿಕ್ಕುವ ಪ್ರಯತ್ನವನ್ನು ಭಾರತ ಮಾಡುತ್ತಿದೆ. ಇನ್ನು ಮೇಕ್ ಇನ್ ಇಂಡಿಯಾ(Make In India) ಮೂಲಕ ಚೀನಾದ ಹೂಡಿಕೆ ಮತ್ತು ವಸ್ತುಗಳನ್ನು ಕೂಡ ಭಾರತದ ಮಾರುಕಟ್ಟೆಗಳಿಂದ ದೂರ ಇಡುವಂತಹ ಪ್ರಯತ್ನವನ್ನು ಕೂಡ ಮಾಡಲಾಗುತ್ತಿದೆ.
ಇದರ ನಡುವೆ ಸಾಮಾನ್ಯ ಚೀನಿಯರು ಭಾರತೀಯರ ಕುರಿತಂತೆ ಯಾವ ರೀತಿಯಲ್ಲಿ ಯೋಚಿಸುತ್ತಾರೆ ಹಾಗೂ ಮೋದಿ (Modi) ಅವರನ್ನು ಲಾವೋಶಿಯನ್(Lavoshian) ಎಂಬುದಾಗಿ ಕರೆಯುತ್ತಾರೆ ಇದರ ಅರ್ಥ ಏನು ಎಂಬುದನ್ನು ತಿಳಿಯೋಣ ಬನ್ನಿ. ಭಾರತದ ಬಗ್ಗೆ ಸಾಮಾನ್ಯ ಚೀನಿಯರಲ್ಲಿ ಇರುವ ಅಭಿಪ್ರಾಯಗಳ ಕುರಿತಂತೆ ಮಾತನಾಡುತ್ತಾ ಚೀನಾ ಮೂಲದ ಜಾಗತಿಕ ಜರ್ನಲಿಸ್ಟ್ ಆಗಿರುವ Mu Chun Shaung ದ ಡಿಪ್ಲೋಮೇಟ್ ಎನ್ನುವಂತಹ ಜಾಗತಿಕ ನ್ಯೂಸ್ ಸೈಟ್ ನಲ್ಲಿ ಚೀನಿಯರಲ್ಲಿ ಭಾರತದ ಕುರಿತಂತೆ ಹೇಳುವಷ್ಟರ ಮಟ್ಟಿಗೆ ದ್ವೇಷ ಇಲ್ಲ. ಗಡಿ ವಿವಾದದ ಕುರಿತಂತೆ ಕೆಲವೊಂದು ಅಸಮಾಧಾನಗಳು ಇರಬಹುದು ಆದರೆ ಪಾಕಿಸ್ತಾನಕ್ಕೆ ಹೋಲಿಸಿದರೆ ಭಾರತದ ಕುರಿತಂತೆ ಚೀನಿಯರಲ್ಲಿ ಒಲವು ಹೆಚ್ಚಿದೆ.
ಯಾಕೆಂದರೆ ಚೀನಾ ಪ್ರತಿವರ್ಷ ಭಾರತದ ಜೊತೆಗೆ 115 ಬಿಲಿಯನ್ ಡಾಲರ್ (Billion Dollars) ಗೂ ಅಧಿಕ ವ್ಯವಹಾರವನ್ನು ನಡೆಸುತ್ತದೆ. ಇನ್ನು ಅದರಲ್ಲೂ ಪ್ರಮುಖವಾಗಿ ಚೀನಿಯರು ಮೋದಿ(Modi) ಅವರನ್ನು ಲಾವೋಶಿಯನ್(Lawoshian) ಎನ್ನುವುದಾಗಿ ಕರೆಯುತ್ತಾರೆ. ಇದರ ಅರ್ಥ ಅತ್ಯಂತ ತೇಜಸ್ವಿ ಅಥವಾ ನಿಪುಣ ಚಾಣಾಕ್ಷ ಎನ್ನುವುದಾಗಿದೆ. ಒಟ್ಟಾರೆಯಾಗಿ ಮೋದಿ ಹಾಗೂ ಭಾರತೀಯರ ಕುರಿತಂತೆ ಸಾಮಾನ್ಯ ಚೀನಿಯರಲ್ಲಿ ಹೇಳುವಷ್ಟು ದ್ವೇಷ ಇಲ್ಲ ಹಾಗೂ ಉತ್ತಮ ಅಭಿಪ್ರಾಯವನ್ನು ಹೊಂದಿದ್ದಾರೆ ಎನ್ನುವುದಾಗಿ Mu Chun Shaung ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ.