ಇಂದು ಮಹಿಳಾ ಪರವಾದ ಯೋಜನೆಗಳು ರಾಜ್ಯದಲ್ಲಿ ಹೆಚ್ಚಾಗಿದೆ. ಮಹಿಳೆಯರನ್ನು ಅಭಿವೃದ್ಧಿ ಗೊಳಿಸುವ ನಿಟ್ಟಿನಲ್ಲಿ ಸರಕಾರ ಇಂದು ಹಲವು ರೀತಿಯ ಯೋಜನೆಗಳನ್ನು ಜಾರಿ ಮಾಡ್ತಾ ಇದೆ. ಹಾಗೆಯೇ ಮಹಿಳೆಯರು ಸ್ವಾವಲಂಬಿಯಾಗಿ ಬದುಕಲು ಸ್ವಂತ ಉದ್ಯಮ ವನ್ನು ಸ್ಥಾಪಿಸಲು ಸರಕಾರ ಬಡ್ಡಿರಹಿತ ಸಾಲ (Interest Free Loan) ವನ್ನುನೀಡ್ತಾ ಇದೆ. ಮಹಿಳೆಯರಿಗೆ ಸುಮಾರು ಮೂರು ಲಕ್ಷದ ವರೆಗೆ ಸಾಲ ಸೌಲಭ್ಯ ವನ್ನು ನೀಡಲಿದೆ.
ಉದ್ಯೋಗಿನಿ ಯೋಜನೆ!
ಬಡ ವರ್ಗದ ಮಹಿಳೆಯರಿಗಾಗಿಯೇ ಈ ಯೋಜನೆ (Udyogini Scheme) ಯನ್ನು ಆರಂಭ ಮಾಡಿದ್ದು ಮಹಿಳೆಯರಿಗೆ ಆರ್ಥಿಕ ನೆರವು ನೀಡುವ ಮೂಲಕ ಸರಕಾರ ನೆರವಾಗಲಿದೆ. ದೇಶದ ಆರ್ಥಿಕ ಬೆಳವಣಿಗೆಗಾಗಿ ಸಣ್ಣ ಸಣ್ಣ ಉದ್ಯಮಗಳ ಸ್ಥಾಪನೆಗೆ ಕೇಂದ್ರ ಸರ್ಕಾರದ ಮಹಿಳಾ ಅಭಿವೃದ್ಧಿ ನಿಗಮ ಈ ಯೋಜನೆ ಜಾರಿ ಮಾಡಿದೆ.
ಯಾವೆಲ್ಲ ಉದ್ದಿಮೆಗಳಿಗೆ ಸಾಲ?
ಮಹಿಳೆಯರು ಸ್ವಂತ ಉದ್ಯಮ ನಡೆಸಲು ದಿನಸಿ ಅಂಗಡಿ, ಕಾಫಿ, ಟೀ ಅಂಗಡಿ, ಬಳೆ ಅಂಗಡಿ, ನ್ಯಾಯಬೆಲೆ ಅಂಗಡಿ, ಅಗರ್ಬತ್ತಿ ತಯಾರಿಕೆ, ಲೀಫ್ ಕಪ್ಗಳ ರಚನೆ ಮೀನು ಮಾರಾಟ, ಉಪ್ಪಿನಕಾಯಿ, ಟೈಲರಿಂಗ್, ಪೋಟೋ ಸ್ಟೂಡಿಯೋ, ಕಾಂಡಿಮೆಂಟ್ಸ್, ಸೋಪ್ ಆಯಿಲ್, ಸೋಪ್ ಪೌಡರ್ ಇತ್ಯಾದಿ ಸಣ್ಣ ಉದ್ಯಮ ನಡೆಸಬಹುದು.
ಅರ್ಹತೆ ಏನು?
- ಮಹಿಳಾ ಅಭ್ಯರ್ಥಿಗಳ ವಯಸ್ಸು 18 ರಿಂದ 55 ವರ್ಷ ವಯಸ್ಸಿನವರಾಗಿರಬೇಕು.
- ಹಾಗೆಯೇ ಕುಟುಂಬದ ಆದಾಯ ವರ್ಷಕ್ಕೆ ರೂ 1.5 ಲಕ್ಷ ಮೀರಬಾರದು. ವಿಧವೆಯರು ಮತ್ತು ಅಂಗವಿಕಲ ಮಹಿಳೆಯರಿಗೆ ಯಾವುದೇ ಆದಾಯದ ನಿರ್ಬಂಧಗಳಿಲ್ಲ.
- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಕನಿಷ್ಠ 1 ಲಕ್ಷ ರೂಪಾಯಿಯಿಂದ ಗರಿಷ್ಠ 3 ಲಕ್ಷ ರೂಪಾಯಿವರೆಗೆ ಸಾಲ ಸೌಲಭ್ಯ ಸಿಗಲಿದ್ದು ಶೇ.50ರಂತೆ ಗರಿಷ್ಠ 1.50 ಲಕ್ಷ ರೂ. ವರೆಗೆ ಸಹಾಯಧನ ದೊರೆಯಲಿದೆ.
- ಸಾಮಾನ್ಯ ವರ್ಗ ಮತ್ತು ವಿಶೇಷ ವರ್ಗದ ಫಲಾನುಭವಿಗಳಿಗೆ ಸಾಲದ ಘಟಕ ವೆಚ್ಚವು ಗರಿಷ್ಠ 3 ಲಕ್ಷ ರೂಪಾಯಿ ಇದ್ದರೆ, ಶೇ. 30ರವರೆಗೆ ಅಂದರೆ 90,000 ರೂಪಾಯಿವರೆಗೂ ಸಹಾಯಧನ ಸಿಗಲಿದೆ.
ಈ ದಾಖಲೆಗಳು ಬೇಕು!
- ಜಾತಿ ಆದಾಯ ಪ್ರಮಾಣ ಪತ್ರ
- ಬಿಪಿಎಲ್ ಕಾರ್ಡ್
- ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ ಇತ್ಯಾದಿ