ಸ್ನೇಹಿತರೆ ಇದೀಗ ಕೇಂದ್ರ ಸರ್ಕಾರ ಮಹತ್ವದ ಯೋಜನೆಯೊಂದನ್ನು(PMSBY – Pradhan Mantri Suraksha Bima Yojana) ಜಾರಿ ಮಾಡಿ ಹಲವು ದಿನಗಳಾಗಿದೆ. ಅಪಘಾತ ವಿಮೆಗಾಗಿ ಕೇಂದ್ರ ಸರಕಾರ ಎರಡು ಲಕ್ಷದ ವರೆಗೆ ವಿಮೆ ಪ್ರಯೋಜನ ನೀಡುತ್ತಿದೆ. ಬ್ಯಾಂಕ್ ಖಾತೆ ಹೊಂದಿರುವ ಪ್ರತಿಯೊಬ್ಬ ನಾಗರಿಕರೂ ಈ ಸೌಲಭ್ಯವನ್ನು ಪಡೆಯಬಹುದು. ಇದು ಯಾವುದೇ ಆದಾಯಕ್ಕೆ ಸೀಮಿತವಾದ ಯೋಜನೆ ಅಲ್ಲ. ಹಾಗಿದ್ರೆ ಯಾರು ಇದರ ಸದುಪಯೋಗ ಮಾಡಿಕೊಳ್ಳಬಹುದು? ಅರ್ಜಿ ಸಲ್ಲಿಸುವುದು ಹೇಗೆ? ಇದರ ಪ್ರಯೋಜನೆಗಳೇನು? ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳಲು ಈ ಲೇಖನವನ್ನು ಪೂರ್ಣವಾಗಿ ಓದಿ.
ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY)
ಕೇಂದ್ರ ಸರ್ಕಾರವು ತನ್ನ ಯೋಜನೆಗಳಲ್ಲಿ ಒಂದಾಗಿ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯನ್ನು ಜಾರಿ ಮಾಡಿದೆ. ಇದರಲ್ಲಿ ಕೇವಲ ವರ್ಷಕ್ಕೆ 20ರೂ ಪಾವತಿಸದರೆ ಸಾಕು. ಎರಡು ಲಕ್ಷದ ವರೆಗೆ ಅಪಘಾತ ವಿಮಾ ರಕ್ಷಣೆಯನ್ನು ನೀವು ಪಡೆಯಬಹುದು.
ಯೋಜನೆಯ ಸ್ವರೂಪ
ಇದು ಅಪಘಾತದಿಂದ ಸಾವು ಅಥವಾ ಅಂಗವೈಕಲ್ಯ ಸಂಭವಿಸಿದಲ್ಲಿ ವಿಮಾ ರಕ್ಷಣೆ ಒದಗಿಸುವ ಯೋಜನೆ ಯಾಗಿದೆ. ಕೇವಲ ಇಪ್ಪತ್ತು ರೂಪಾಯಿ ಹಣವು ನಿಮ್ಮ ಬ್ಯಾಂಕ್ ಖಾತೆಯಿಂದ ಪ್ರತಿ ವರ್ಷ ಜೂನ್ 1 ರಂದು ಸ್ವಯಂಚಾಲಿತವಾಗಿ (Auto-debit) ಕಡಿತಗೊಳ್ಳುತ್ತದೆ.
ಯಾರಿಗೆ PMSBY ಲಭ್ಯ?
18 ರಿಂದ 70 ವರ್ಷ ವಯಸ್ಸಿನ ಬ್ಯಾಂಕ್ ಖಾತೆ ಹೊಂದಿರುವ ಪ್ರತಿಯೊಬ್ಬ ನಾಗರಿಕರು ಈ ಯೋಜನೆಯಲ್ಲಿ ಸೇರಬಹುದು.
ಆನ್‌ಲೈನ್‌ನಲ್ಲಿ ಅರ್ಹತೆ ಪರಿಶೀಲಿಸುವ ವಿಧಾನ (Check Eligibility)
ಅರ್ಜಿಸಲ್ಲಿಸುವ ಮೊದಲು ಅಧಿಕೃತ PMSBY ಪೋರ್ಟಲ್‌ನ ‘Check Eligibility’ ಬಟನ್ ಬಳಸಿ ನೀವು ಅರ್ಹರಾಗಿದ್ದೀರಾ ಎಂಬುದನ್ನು ಪರೀಕ್ಷಿಸಬಹುದು. ಇಲ್ಲಿ ನಿಮ್ಮ ವಯಸ್ಸು 18–70 ರ ನಡುವೆ ಇದೆಯೇ ಮತ್ತು ನಿಮ್ಮ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ಸೇವಿಂಗ್ಸ್ ಖಾತೆ ಆಧಾರ್‌ಗೆ ಲಿಂಕ್ ಆಗಿದೆಯೇ ಎಂಬುದನ್ನು ನಮೂದಿಸಿದರೆ, ನಿಮ್ಮ ಅರ್ಹತೆಯನ್ನು ತಕ್ಷಣ ಪರಿಶೀಲಿಸಬಹುದು.
PMSBY ಯೋಜನೆಯ ಲಾಭಗಳು (Benefits of the Scheme)
• ಸಾವು ಸಂಭವಿಸಿದಲ್ಲಿ – ನೋಮಿನಿಗೆ ₹2 ಲಕ್ಷ ವಿಮಾ ಮೊತ್ತ ಸಿಗುತ್ತದೆ.
• ಎರಡೂ ಕಣ್ಣುಗಳ ಸಂಪೂರ್ಣವಾಗಿ ನಷ್ಟವಾದಲ್ಲಿ , ಅಥವಾ ಎರಡೂ ಕೈ/ಕಾಲುಗಳ ನಷ್ಟವಾದಲ್ಲಿ , ಅಥವಾ ಒಂದು ಕಣ್ಣಿನ ದೃಷ್ಟಿ ಕಳೆದುಕೊಂಡು ಜೊತೆಗೆ ಒಂದು ಕೈ/ಕಾಲಿನ ನಷ್ಟವಾದಲ್ಲಿ – ವಿಮೆದಾರರಿಗೆ ₹2 ಲಕ್ಷ ಸಿಗುತ್ತದೆ.
• ಒಂದು ಕಣ್ಣಿನ ದೃಷ್ಟಿ ಸಂಪೂರ್ಣವಾಗಿ ಕಳೆದುಕೊಂಡಲ್ಲಿ , ಅಥವಾ ಒಂದು ಕೈ/ಕಾಲನ್ನು ಕಳೆದುಕೊಂಡ ಪರಿಸ್ಥಿತಿಯಲ್ಲಿ – ವಿಮೆದಾರರಿಗೆ ₹1 ಲಕ್ಷ ಸಿಗುತ್ತದೆ.
| ಲಾಭದ ವಿಧ (Benefit) | ವಿಮಾ ರಕ್ಷಣೆ (Sum Insured) |
|---|---|
| ಸಾವು (Death) | ₹2,00,000 |
| ಎರಡೂ ಕಣ್ಣುಗಳು ಕಳೆದುಕೊಂಡು ಅಥವಾ ಎರಡೂ ಕೈ/ಕಾಲುಗಳ ನಷ್ಟದಲ್ಲಿ ಅಥವಾ ಒಂದು ಕಣ್ಣು ಹಾಗೂ ಒಂದು ಕೈ/ಕಾಲಿನ ಹಾನಿಯಾದಲ್ಲಿ | ₹2,00,000 |
| ಒಂದು ಕಣ್ಣು ಅಥವಾ ಒಂದು ಕೈ/ಕಾಲಿನ ನಷ್ಟದ ಪರಿಸ್ಥಿತಿ | ₹1,00,000 |
ಎಲ್ಲಿ ಅರ್ಜಿ ಸಲ್ಲಿಸಬಹುದು?
PMSBY ಯೋಜನೆಗೆ ನೀವು ಕೆಳಗಿನ ಯಾವುದೇ ಮಾರ್ಗಗಳಿಂದ ನಮೂದಿಸಬಹುದು :
- ನೇರವಾಗಿ ನಿಮ್ಮ ಬ್ಯಾಂಕ್ ಶಾಖೆಯಲ್ಲಿ
- ನಿಮ್ಮ ಬ್ಯಾಂಕ್‌ನ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ
- ಮೊಬೈಲ್ ಬ್ಯಾಂಕಿಂಗ್ ಆಪ್ ಮೂಲಕ
- ಜನ್‌ಧನ್ ಖಾತೆ ಇರುವ ಬ್ಯಾಂಕ್ ಬ್ರಾಂಚ್‌ಗಳಲ್ಲಿ
- ಕೆಲವು ಬ್ಯಾಂಕ್‌ಗಳಲ್ಲಿ SMS ಸೇವೆಯ ಮೂಲಕವೂ ನೀವು ನಮೂದಿಸಬಹುದು (ಬ್ಯಾಂಕ್ ಕಳುಹಿಸುವ ಸಂದೇಶಕ್ಕೆ YES ಎಂದು ಪ್ರತಿಕ್ರಿಯಿಸುವ ಮೂಲಕ)
ಈ ಮಾರ್ಗಗಳಲ್ಲಿ ಯಾವುದರ ಮೂಲಕ ಅರ್ಜಿ ಸಲ್ಲಿಸಿದರೂ, ಕೇವಲ ₹20 ಪಾವತಿಸುವ ಮೂಲಕ ನೀವು ನಿಮ್ಮ ಕುಟುಂಬಕ್ಕೆ ಅಪಘಾತ ಸಂದರ್ಭದಲ್ಲಿ ₹2 ಲಕ್ಷದ ಭದ್ರತೆ ಪಡೆಯಬಹುದು.
ಅರ್ಜಿಸಲ್ಲಿಸುವ ವಿಧಾನ (How to Apply)
ಬ್ಯಾಂಕ್ ಶಾಖೆಯಲ್ಲಿ:
- PMSBY ಅರ್ಜಿ ಫಾರ್ಮ್ ಪಡೆದುಕೊಳ್ಳಿ.
- ನಿಮ್ಮ ಹೆಸರು, ಖಾತೆ ಸಂಖ್ಯೆ, ನೋಮಿನಿ ವಿವರಗಳನ್ನು ತುಂಬಿ ಸಲ್ಲಿಸಿ.
- ನಿಮ್ಮ ಖಾತೆಯಲ್ಲಿ ಕನಿಷ್ಠ ₹20 ಇರುವುದನ್ನು ಖಚಿತಪಡಿಸಿ.
- ಪ್ರತಿ ವರ್ಷ ಜೂನ್ 1ರಂದು Auto-debit ಮೂಲಕ ಪ್ರೀಮಿಯಂ ಕಡಿತಗೊಳ್ಳುತ್ತದೆ.
ಆನ್‌ಲೈನ್‌ನಲ್ಲಿ:
- ನಿಮ್ಮ ಇಂಟರ್ನೆಟ್ ಬ್ಯಾಂಕಿಂಗ್ ಅಥವಾ ಮೊಬೈಲ್ ಆಪ್‌ಗೆ ಲಾಗಿನ್ ಆಗಿ.
- Insurance → PMSBY Enrollment ಆಯ್ಕೆ ಮಾಡಿ.
- ವಿವರಗಳನ್ನು ಪರಿಶೀಲಿಸಿ Submit ಒತ್ತಿ.
- ನೋಂದಣಿ ಯಶಸ್ವಿಯಾದ ನಂತರ ಬ್ಯಾಂಕ್ SMS ಅಥವಾ ಇಮೇಲ್ ಮೂಲಕ ದೃಢೀಕರಣ ಕಳುಹಿಸುತ್ತದೆ.
ಈ ಯೋಜನೆ ನಿಮಗೆ ಏಕೆ ಉಪಯುಕ್ತ?
ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) ದೇಶದ ಸಾಮಾನ್ಯ ನಾಗರಿಕರಿಗೆ ಅತ್ಯಲ್ಪ ವೆಚ್ಚದಲ್ಲಿ ಮಹತ್ವದ ಅಪಘಾತ ವಿಮಾ ರಕ್ಷಣೆಯನ್ನು ಒದಗಿಸುತ್ತದೆ. ವರ್ಷಕ್ಕೆ ಕೇವಲ ₹20 ಪಾವತಿಸುವುದರಿಂದ 2 ಲಕ್ಷ ರೂಪಾಯಿ ವರೆಗೆ ಭದ್ರತೆ ದೊರಕುವುದರಿಂದ, ಇದು ಪ್ರತಿಯೊಬ್ಬ ಕುಟುಂಬಕ್ಕೂ ಆರ್ಥಿಕ ಸುರಕ್ಷತೆಯನ್ನು ನೀಡುವ ಉತ್ತಮ ಯೋಜನೆಯಾಗಿದೆ. ಈ ಯೋಜನೆಗೆ ಸೇರಿಕೊಳ್ಳುವುದು ಸರಳವಾಗಿದ್ದು, ಬ್ಯಾಂಕ್ ಶಾಖೆ ಅಥವಾ ಆನ್‌ಲೈನ್ ಮೂಲಕ ಸುಲಭವಾಗಿ ಅರ್ಜಿ ಸಲ್ಲಿಸಬಹುದು. ಅರ್ಹರಾಗಿರುವ ಪ್ರತಿಯೊಬ್ಬರೂ ಈ ಯೋಜನೆಯ ಸದುಪಯೋಗ ಪಡೆದು ತಮ್ಮ ಕುಟುಂಬಕ್ಕೆ ಅಗತ್ಯವಾದ ಭದ್ರತೆಯನ್ನು ಒದಗಿಸಬಹುದು.








