Karnataka Times
Trending Stories, Viral News, Gossips & Everything in Kannada

All-rounder: ಜಡೇಜಾ ಬದಲಿಗೆ ಮತ್ತೊಬ್ಬ ಆಲ್ರೌಂಡರ್ ಅನ್ನು ಟೀಮ್ ಗೆ ಕರೆ ತಂದ ಜಯ್ ಶಾ! ಜಡೇಜಾ ಗಿಂತ ಪವರ್ಫುಲ್.

advertisement

ಈ ಭಾರತೀಯ ಟಿ20 ವಿಶ್ವಕಪ್ (T20 World Cup) ಗೆಲುವಿನಲ್ಲಿ 140 ಕೋಟಿಗೂ ಹೆಚ್ಚಿನ ಭಾರತೀಯರು ಸಂತೋಷಪಟ್ಟಿದ್ದಾರೆ ಅದರ ಜೊತೆಗೆ ಸಾಕಷ್ಟು ದುಃಖ ಕೂಡ ಅವರಿಗೆ ಲಭಿಸಿದೆ ಎಂದು ಹೇಳಬಹುದಾಗಿದೆ. ಯಾಕೆಂದ್ರೆ ರವೀಂದ್ರ ಜಡೇಜಾ ವಿರಾಟ್ ಕೊಹ್ಲಿ (Virat Kohli) ರೋಹಿತ್ ಶರ್ಮ (Rohit Sharma) ಅವರಂತಹ ದಿಗ್ಗಜ ಆಟಗಾರರನ್ನು ಟಿ 20 ಫಾರ್ಮ್ಯಾಟ್ ನಿಂದ ಈ ವಿಶ್ವಕಪ್ ಮೂಲಕ ಭಾರತೀಯ ಕ್ರಿಕೆಟ್ ತಂಡ ಕಳೆದುಕೊಂಡಿದೆ ಎಂದು ಹೇಳಬಹುದಾಗಿದೆ. ಒಂದು ಸಂತೋಷದ ಸುದ್ದಿಯ ಜೊತೆಗೆ ಮೂರು ದುಃಖದ ಸುದ್ದಿಗಳು ಜೊತೆಯಾಗಿ ಬಂದಿರುವುದು ನಿಜಕ್ಕೂ ಕೂಡ ವಿಷಾದನೀಯ ಎಂದು ಹೇಳಬಹುದಾಗಿದೆ.

ಅದರಲ್ಲೂ ವಿಶೇಷವಾಗಿ ರವೀಂದ್ರ ಜಡೇಜಾ (Ravindra Jadeja) ಅವರು ಸೋಶಿಯಲ್ ಮೀಡಿಯಾ ಮುಖಾಂತರ ತಮ್ಮ ನಿವೃತ್ತಿಯನ್ನು ಘೋಷಿಸಿರುವುದು ಸಾಕಷ್ಟು ಸರ್ಪ್ರೈಸಿಂಗ್ ಆಗಿತ್ತು ಎಂದು ಹೇಳಬಹುದು. ಇತ್ತೀಚಿನ ವರ್ಷಗಳಲ್ಲಿ ಅವರ ಅಂತರಾಷ್ಟ್ರೀಯ ಟಿ 20 ಕರಿಯರ್ ಅಷ್ಟೊಂದು ಹೇಳಿಕೊಳ್ಳುವಷ್ಟು ಉತ್ತಮವಾಗಿರಲಿಲ್ಲ ಆದರೆ ರವೀಂದ್ರ ಜಡಿಜಾ ಬೌಲಿಂಗ್ ಅಥವಾ ಬ್ಯಾಟಿಂಗ್ನಲ್ಲಿ ಯಾವ ಕ್ಷಣದಲ್ಲಿ ಬೇಕಾದರೂ ಕೂಡ ತಂಡಕ್ಕೆ ಗೆಲುವನ್ನು ತಂದುಕೊಡಬಲ್ಲಂತಹ ಆಟಗಾರ ಅನ್ನೋದನ್ನ ನಾವು ಮರೆಯೋ ಹಾಗಿಲ್ಲ.

 

Image Source: Jagran

 

ಹೀಗಾಗಿ ಅವರ ಸ್ಥಾನವನ್ನು ತುಂಬಲು ಅವರಷ್ಟೇ ಎಫೆಕ್ಟಿವ್ ಆಗಿರುವಂತಹ ಹಾಗೂ ಸಾಕಷ್ಟು ಸಮಯಗಳವರೆಗೆ ಭಾರತೀಯ ಕ್ರಿಕೆಟ್ ತಂಡದಲ್ಲಿ ನೆಲೆಯೂರ ಬೇಕಾಗಿರುವಂತಹ ಆಟಗಾರ ತಂಡಕ್ಕೆ ಬೇಕಾಗಲಿದ್ದಾರೆ. ಇನ್ನು ಭಾರತೀಯ ಕ್ರಿಕೆಟ್ ತಂಡದ ಟೀ ಮ್ಯಾನೇಜ್ಮೆಂಟ್ ವಿಚಾರ್ದಲ್ಲಿ ಪ್ರಮುಖ ರೂವಾರಿಯಾಗಿರುವಂತಹ ಜಯ್ ಶಾ ರವೀಂದ್ರ ಜಡೇಜಾ ಅವರ ಬದಲಿ ಆಟಗಾರನ ಈಗಾಗಲೇ ಹುಡುಕಿದ್ದಾರೆ ಅನ್ನೋ ಮಾಹಿತಿ ಕೂಡ ಕೇಳಿ ಬರ್ತಾ ಇದ್ದು ಆತ ಅತ್ಯಂತ ಯುವ ಆಟಗಾರ ಆಗಿದ್ದು ಕಳೆದ ಬಾರಿಯ ಐಪಿಎಲ್ ನಲ್ಲಿ ಕೂಡ ಅತ್ಯುತ್ತಮವಾಗಿ ಪರ್ಫಾರ್ಮೆನ್ಸ್ ಮಾಡಿದ್ದು ಬನ್ನಿ ಆ ಆಟಗಾರ ಯಾರು ಅನ್ನೋದನ್ನ ಇವತ್ತಿನ ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

advertisement

ಟಿ ಟ್ವೆಂಟಿ ಕ್ರಿಕೆಟ್ ತಂಡದಲ್ಲಿ ರವೀಂದ್ರ ಜಡೇಜಾ ಅವರ ರಿಪ್ಲೇಸ್ಮೆಂಟ್ ಯಾರು ಗೊತ್ತಾ?

ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡು ವಿಭಾಗದಲ್ಲಿ (All-rounder) ಐಪಿಎಲ್ ನಲ್ಲಿ ಸಾಕಷ್ಟು ಉತ್ತಮ ಪರ್ಫಾರ್ಮೆನ್ಸ್ ನೀಡಿರುವಂತಹ ಅಭಿಷೇಕ್ ಶರ್ಮ (Abhishek Sharma) ರವೀಂದ್ರ ಜಡೇಜಾ (Ravindra Jadeja) ಅವರ ರಿಪ್ಲೇಸ್ಮೆಂಟ್ ಎಂಬುದಾಗಿ ಹೇಳಲಾಗುತ್ತಿದೆ. ಯುವರಾಜ್ ಸಿಂಗ್ ರವರ ಮಾರ್ಗದರ್ಶನದಲ್ಲಿ ಮೂಡಿ ಬಂದಿರುವಂತಹ ಈ ಪ್ರತಿಭೆ ಕಳೆದ ಬಾರಿ ಐಪಿಎಲ್ ನಲ್ಲಿ ಭರ್ಜರಿ ಪರ್ಫಾರ್ಮೆನ್ಸ್ ನೀಡಿದ್ರು.

 

Image Source: Business Standard

 

153 ಸ್ಟ್ರೈಕ್ ರೇಟ್ಗಿಂತಲೂ ಹೆಚ್ಚಿನ ಸ್ಟ್ರೈಟ್ ನಲ್ಲಿ ಬ್ಯಾಟಿಂಗ್ ಮಾಡುವಂತಹ ಇವರು 153 ಪಂದ್ಯಗಳಲ್ಲಿ 2671 ರಂದು ಬಾರಿಸಿದ್ದಾರೆ. ಇದರಲ್ಲಿ 16 ಅರ್ಧ ಶತಕಗಳು ಕೂಡ ಇವೆ. 2024ರ ಐಪಿಎಲ್ ನಲ್ಲಿ 200 ಸ್ಟ್ರೈಕ್ ರೇಟ್ಗಿಂತಲೂ ಅಧಿಕ ಸ್ಟ್ರೈಕ್ ರೇಟ್ ನಲ್ಲಿ 484 ರನ್ನುಗಳನ್ನು ಬಾರಿಸಿದ್ದು ಬೌಲಿಂಗ್ನಲ್ಲಿ ಸಾಕಷ್ಟು ಅವಕಾಶ ಸಿಗದೇ ಇದ್ದರೂ ಕೂಡ ಎರಡು ವಿಕೆಟ್ಗಳನ್ನು ಪಡೆಯುವುದಕ್ಕೆ ಯಶಸ್ವಿಯಾಗಿದ್ದಾರೆ. ಉತ್ತಮವಾದ ಬ್ಯಾಟಿಂಗ್ ಪ್ರದರ್ಶನ ಬೇಕು ಅಂತ ಅಂದ್ರೆ ಖಂಡಿತವಾಗಿ ಅಭಿಷೇಕ್ ಶರ್ಮ ಯಾವುದೇ ಕ್ರಮದಲ್ಲಿ ಕೂಡ ನಿಮಗೆ ರನ್ ಗಳಿಸಿಕೊಡಬಲ್ಲರು.

advertisement

Leave A Reply

Your email address will not be published.