Karnataka Times
Trending Stories, Viral News, Gossips & Everything in Kannada

Babar Azam: ಬುಮ್ರಾ ಅಲ್ಲ ಸಿರಾಜ್ ಅಲ್ಲ ಬಾಬರ್ ಆಜಂ ನ ಔಟ್ ಮಾಡೋದು ಯಾರು ಗೊತ್ತಾ?

Advertisement

ಪಾಕಿಸ್ತಾನದ ನಾಯಕ ಬಾಬರ್ ಅಜಮ್ (Pakistan Captain Babar Azam) ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಇತ್ತೀಚೆಗಷ್ಟೇ ಏಷ್ಯಾಕಪ್‌ನ (Asia Cup) ಮೊದಲ ಪಂದ್ಯದಲ್ಲಿ ನೇಪಾಳ ವಿರುದ್ಧ 151 ರನ್ ಗಳಿಸುವ ಮೂಲಕ ಬಾಬರ್ ತನ್ನ ಫಾರ್ಮ್ ಅನ್ನು ಜಗತ್ತಿಗೆ ತೋರಿಸಿದ್ದರು.

ಈಗ ಅವರು ಸೆಪ್ಟೆಂಬರ್ 2 ರಂದು ಭಾರತದ ವಿರುದ್ಧ ದೊಡ್ಡ ಇನ್ನಿಂಗ್ಸ್  ಆಡುವ ಮೂಲಕ ತಮ್ಮ ತಂಡವನ್ನು ಗೆಲುವಿನತ್ತ ಮುನ್ನಡೆಸಲು ಮುಂದಾಗಿದ್ದಾರೆ, ಆದರೆ ಇದನ್ನು ಮಾಡಲು ಪಾಕಿಸ್ತಾನಿ ನಾಯಕ ಕುಲದೀಪ್ ಯಾದವ್ (Kuldeep Yadav) ಎಂಬ ಮಾಸ್ಟರ್ ಬೌಲರ್ ಅನ್ನು ಜಯಿಸಬೇಕಾಗುತ್ತದೆ.

ಭಾರತದ ವಿರುದ್ಧ ಬಾಬರ್ ಆಟ:

ಭಾರತದ ಎದುರಿನ ಪಂದ್ಯಗಳಲ್ಲಿ ಬಾಬರ್ ಅಜಮ್ ಅಂಕಿ-ಅಂಶಗಳನ್ನು ಹೋಲಿಸಿದರೆ, ಕೊಹ್ಲಿ (Virat Kohli) ಯೇ ಅದ್ಭುತ ಪ್ರದರ್ಶನ ನೀಡಿದ್ದಾರೆ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ. ಬಾಬರ್ ಈವರೆಗೂ ಭಾರತದ ವಿರುದ್ದ 5 ಏಕದಿನ ಪಂದ್ಯ (ODI Match) ಗಳಲ್ಲಿ ಕಣಕ್ಕಿಳಿದಿದ್ದು, 31.60ರ ಸರಾಸರಿಯಲ್ಲಿ ಕೇವಲ 158 ರನ್ ಸಿಡಿಸಿದ್ದಾರೆ. 2017ರಲ್ಲಿ ಮೊದಲ ಬಾರಿಗೆ ಭಾರತದ ಎದುರು ಏಕದಿನ ಆಡಿದ್ದರು. ಆಡಿರುವ ಐದು ಪಂದ್ಯಗಳಲ್ಲಿ 8, 46, 47, 9, 48 ರನ್‌ ಗಳಿಸಿದ್ದರು.

ಹೌದು, IND vs PAK ಪಂದ್ಯದಲ್ಲಿ, ಬಾಬರ್ ಅಜಮ್ (Babar Azam) ವಿರುದ್ಧ ಭಾರತೀಯ ನಾಯಕ ರೋಹಿತ್ ಶರ್ಮಾ (Indian Captain Rohit Sharma) ಗೆ ದೊಡ್ಡ ಅಸ್ತ್ರವೆಂದರೆ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಅಥವಾ ಮೊಹಮ್ಮದ್ ಸಿರಾಜ್ ಅಲ್ಲ ಬದಲಾಗಿ ಕುಲ್ದೀಪ್ ಯಾದವ್ (Kuldeep Yadav). ಹೌದು ಈ ಎಡಗೈ ಸ್ಪಿನ್ ಬೌಲರ್ ಇಲ್ಲಿಯವರೆಗೆ ಬಾಬರ್ ಅಜಮ್‌ಗೆ ಉತ್ತಮ ಆಟ ಆಡಿದ್ದಾರೆ.

ಯಾವಾಗ ಬಾಬರ್ ಮತ್ತು ಕುಲದೀಪ್ ಮೈದಾನದಲ್ಲಿ ಮುಖಾಮುಖಿಯದರೆ ಬಾಬರ್ ಡಲ್ ಆಗುತ್ತಾರೆ ಎನ್ನಲಾಗಿದೆ:

ಪ್ರಸ್ತುತ, ಪಾಕಿಸ್ತಾನದ ಅತಿದೊಡ್ಡ ಬ್ಯಾಟ್ಸ್‌ಮನ್ ಬಾಬರ್ ಅಜಮ್ (Babar Azam), ಕುಲದೀಪ್ ಯಾದವ್ ಅವರ ಕೇವಲ 34 ಎಸೆತಗಳನ್ನು ಎದುರಿಸಿದ್ದಾರೆ, ಈ ಸಮಯದಲ್ಲಿ ಭಾರತೀಯ ಸ್ಪಿನ್ನರ್ ಅವರಿಗೆ ಎರಡು ಬಾರಿ ಪೆವಿಲಿಯನ್ ಹಾದಿಯನ್ನು ತೋರಿಸಿದ್ದಾರೆ. ಕುಲದೀಪ್ ವಿರುದ್ಧ ಬಾಬರ್ ಅಜಮ್ ಅವರ ಸ್ಟ್ರೈಕ್ ರೇಟ್ ಕೂಡ ಕೇವಲ 52 ಆಗಿ ಉಳಿದಿದೆ ಮತ್ತು ಅವರ ಸರಾಸರಿ 9 ಆಗಿದೆ.

ಹೀಗಿರುವಾಗ ಕುಲದೀಪ್ (Kuldeep Yadav) ಬಾಬರ್ ಆಜಮ್ ಅನ್ನು ಸಮವಾಗಿ ಎದುರಿಸುತ್ತಾರೆ ಎನ್ನಲಾಗಿದೆ . ಹೀಗಿರುವಾಗ ಇಂದು ಯಾರ ಮೇಲುಗೈ ಎಂಬುದು ಕುತೂಹಲ ಮೂಡಿಸಿದೆ.

 

Image Source: LatestLY

ಭಾರತ ತಂಡ:

ರೋಹಿತ್ ಶರ್ಮಾ (Captain), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಕೆಎಲ್ ರಾಹುಲ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ (Vice Captain), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್. ಸಿರಾಜ್, ಪ್ರಸಿದ್ಧ್ ಕೃಷ್ಣ

ಪಾಕಿಸ್ತಾನ ತಂಡ:

ಅಬ್ದುಲ್ಲಾ ಶಫೀಕ್, ಬಾಬರ್ ಅಜಮ್ (Captain), ಫಖರ್ ಜಮಾನ್, ಇಮಾಮ್ ಉಲ್ ಹಕ್, ತಯ್ಯಬ್ ತಾಹಿರ್, ಅಘಾ ಸಲ್ಮಾನ್, ಫಹೀಮ್ ಅಶ್ರಫ್, ಇಫ್ತಿಕರ್ ಅಹ್ಮದ್, ಮೊಹಮ್ಮದ್ ನವಾಜ್, ಸೌಪ್ ಶಕೀಲ್, ಶಾದಾಬ್ ಖಾನ್, ಮೊಹಮ್ಮದ್ ಹ್ಯಾರಿಸ್ (Wicket Keeper), ಮೊಹಮ್ಮದ್ ರಿಜ್ವಾನ್ (Wicket Keeper), ಹಾರಿಸ್ ರೌಫ್, ಮೊಹಮ್ಮದ್ ವಾಸಿಮ್, ನಸೀಮ್ ಶಾ, ಶಾಹೀನ್ ಅಫ್ರಿದಿ, ಉಸಾಮಾ ಮಿರ್.

 

 

Not Bumrah and not Siraj know who will out Babar Azam

Leave A Reply

Your email address will not be published.