Karnataka Times
Trending Stories, Viral News, Gossips & Everything in Kannada

RCB Vs MI: ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ 101 ಮೀಟರ್ ಸಿಕ್ಸರ್ ಬಾರಿಸಿದ 22 ವರ್ಷದ ನೇಹಲ್ ವಡೆರ! ವಿಡಿಯೋ ಇಲ್ಲಿದೆ.

Advertisement

ಚಿನ್ನಸ್ವಾಮಿ ಸ್ಟೇಡಿಯಂ (Chinnaswamy Stadium) ಕೂಡ ಚಿಕ್ಕದಾಯಿತು ಈ ಹುಡುಗನಿಗೆ. ನಿನ್ನೆ ನಡೆದಿರುವಂತಹ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore) ತಂಡದ ಮೊದಲ ಪಂದ್ಯದಲ್ಲಿ ಸುಲಭ ಗೆಲುವನ್ನು ಸಾಧಿಸುವ ಮೂಲಕ ಆರ್‌ಸಿಬಿ (RCB) ತಂಡ ಮೊದಲ ಪಂದ್ಯದಲ್ಲಿ ಗೆಲುವಿನ ಮೂಲಕ ಶುಭಾರಂಭವನ್ನು ಮಾಡಿದೆ. ಅದರಲ್ಲೂ ವಿಶೇಷವಾಗಿ ಮುಂಬೈ ಇಂಡಿಯನ್ಸ್(Mumbai Indians) ತಂಡದ ಯುವ ಆಟಗಾರನ ಬ್ಯಾಟಿಂಗ್ ಪ್ರದರ್ಶನ ಆರ್ಸಿಬಿ ಅಭಿಮಾನಿಗಳನ್ನು ಕೂಡ ಥ್ರಿಲ್ ಮಾಡಿದೆ ಎನ್ನುವುದು ಮತ್ತೊಂದು ವಿಶೇಷವಾಗಿದೆ.

ಮುಂಬೈ ಇಂಡಿಯನ್ಸ್ (Mumbai Indians) ಕನ್ನಡ 48 ರಂದುಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡು ಒದ್ದಾಡುತ್ತಿದ್ದ ಸಂದರ್ಭದಲ್ಲಿ ಕ್ರೀಸ್ ಗೆ ಆಗಮಿಸಿದ ನೆಹಲ್ ವಡೆರ (Nehal Wadhera) ತಂಡದ ಆಧಾರ ಸ್ತಂಭವಾಗಿ ನಿಲ್ಲುತ್ತಾರೆ ಇವರಿಗೆ ತಂಡದ ಮತ್ತೊಬ್ಬ ಯುವ ಆಟಗಾರ ಆಗಿರುವಂತಹ ತಿಲಕ್ ವರ್ಮ (Tilak Varma) ಕೂಡ ಸಾತ್ ನೀಡುತ್ತದೆ. ನೆಹಲ್ (Nehal Wadhera) ಅವರ ಚಿಕ್ಕ ಇನಿಂಗ್ಸ್ ದೊಡ್ಡ ಮಟ್ಟದ ಇಂಪ್ಯಾಕ್ಟ್ ಅನ್ನು ಪಂದ್ಯದಲ್ಲಿ ಬೀರಿತ್ತು ಎಂದರು ಕೂಡ ತಪ್ಪಾಗಲಾರದು. ಅದರಲ್ಲೂ ವಿಶೇಷವಾಗಿ ಆ ಎರಡು ಸಿಕ್ಸರ್ ಗಳು RCB ಅಭಿಮಾನಿಗಳು ಕೂಡ ಎದ್ದು ನಿಂತು ಸೆಲ್ಯೂಟ್ ಹೊಡೆಯುವಂತೆ ಮಾಡಿದೆ.

ಹೌದು ಮಿತ್ರರೇ ತಿಲಕ್ ವರ್ಮ (Tilak Varma) ಜೊತೆಗೋಡಿ ಮುಂಬೈ ಇಂಡಿಯನ್ಸ್ ತಂಡದ ವಿನ್ನಿಂಗ್ಸ್ ಅನ್ನು ಬೆಳೆಸಿದ ನೆಹಲ್ ವಡೆರ (Nehal Wadhera) ಅನುಭವಿ ಕರಣ್ ಶರ್ಮಾ ಅವರ ಓವರ್ನಲ್ಲಿ ಎರಡು ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಗಳನ್ನು ಬಾರಿಸಿ ಅದರಲ್ಲಿ ವಿಶೇಷವಾಗಿ ಒಂದು ಸಿಕ್ಸರ್ 101 ಮೀಟರ್ ಕ್ರಮಿಸಿ ಚಿನ್ನಸ್ವಾಮಿ ಕ್ರೀಡಾಂಗಣವನ್ನು ಚಿಕ್ಕದು ಮಾಡಿತ್ತು. ಅದೇ ಓವರ್ನಲ್ಲಿ ಕರಣ್ ಶರ್ಮಾ ಅವರ ಎಸೆತದಲ್ಲಿ ವಿರಾಟ್ ಕೊಹ್ಲಿ ಅವರಿಗೆ ಕ್ಯಾಚ್ ನೀಡಿ ನಿರ್ಗಮಿಸಿದರು ಕೂಡ 13 ಎಸೆತಗಳಲ್ಲಿ 21 ರನ್ನುಗಳನ್ನು 161.54ರ ಸ್ಟ್ರೈಕ್ ರೇಟ್ ನಲ್ಲಿ ಬಾರಿಸುವ ಮೂಲಕ ಎದುರಾಳಿ ತಂಡದ ಸಮರ್ಥಕರಿಂದಲೂ ಕೂಡ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಾರೆ ಈ 22 ವರ್ಷದ ಪ್ರತಿಭೆ. ನಿನ್ನೆಯ ಪಂದ್ಯದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಕೂಡ ಹಂಚಿಕೊಳ್ಳಬಹುದಾಗಿದೆ.

 

 

Leave A Reply

Your email address will not be published.