Aaron Finch: ಈ ಏಕದಿನ ವರ್ಲ್ಡ್ ಕಪ್ ಗೆಲ್ಲೋದು ಭಾರತವಲ್ಲ, ಆರೋನ್ ಪಿಂಚ್ ಹೇಳಿದ ತಂಡ ಇಲ್ಲಿದೆ.

Advertisement
ಈ ಬಾರಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ನಮ್ಮ ಭಾರತದಲ್ಲಿ ಅಕ್ಟೋಬರ್ ತಿಂಗಳಿನ ಆಸುಪಾಸಿನಲ್ಲಿ ಈ ಬಾರಿಯ 2023 ಏಕದಿನ ವರ್ಲ್ಡ್ ಕಪ್ ನಡೆಯಲಿದ್ದು ಇದು ಪ್ರಾರಂಭ ಆಗುವುದಕ್ಕೂ ಮುನ್ನವೇ ಈಗಾಗಲೇ ಭಾರತದಲ್ಲಿ ಕ್ರಿಕೆಟ್ ಹಬ್ಬ ಐಪಿಎಲ್ ಅದ್ದೂರಿಯಾಗಿ ನಡೆಯುತ್ತಿದೆ. ಇದಕ್ಕೂ ಮುನ್ನವೇ ಈ ಬಾರಿ ಗೆಲ್ಲೋದಕ್ಕೆ ಪ್ರಬಲ ಸ್ಪರ್ಧಿಗಳು ಯಾರು ಎಂಬುದನ್ನು ಆಸ್ಟ್ರೇಲಿಯಾದ ಮಾಜಿ ನಾಯಕ ಆಗಿರುವ ಆರೋನ್ ಪಿಂಚ್ (Aaron Finch) ಹೇಳಿದ್ದಾರೆ.
Aaron Finch ಭಾರತದಲ್ಲಿ ಈ ವರ್ಷ ನಡೆಯಲಿರುವ ಏಕದಿನ ವರ್ಲ್ಡ್ ಕಪ್ ನಲ್ಲಿ ಯಾರು ಗೆಲ್ಲಬಹುದು ಎನ್ನುವ ಕುರಿತಂತೆ, ಭವಿಷ್ಯವಾಣಿಯನ್ನು ಇತ್ತೀಚಿಗಷ್ಟೇ ನಡೆದಿರುವ ಸಂದರ್ಶನದಲ್ಲಿ ಹೇಳಿಕೊಂಡಿದ್ದು ಅವರ ಪ್ರಕಾರ ಈ ಮೂರು ತಂಡಗಳು ವಿಶ್ವಕಪ್ ಗೆಲ್ಲುವಂತಹ ಹೆಚ್ಚಿನ ಸಾಧ್ಯತೆಯನ್ನು ಹೊಂದಿದ್ದಾರೆ ಎಂಬುದಾಗಿ ಹೇಳಿದ್ದಾರೆ. ಆದರೆ ಭಾರತಕ್ಕಿಂತ ಹೆಚ್ಚಾಗಿ ಮತ್ತೊಂದು ದೇಶ ಈ ಬಾರಿ ನಡೆಯಲಿರುವ ಏಕದಿನ ವಿಶ್ವಕಪ್ ಅನ್ನು ಗೆಲ್ಲುವ ಹೆಚ್ಚಿನ ಸಂಭಾವನೆಯನ್ನು ಹೊಂದಿದೆ ಎಂಬುದಾಗಿ ಫಿಂಚ್ ಭವಿಷ್ಯ ನುಡಿದಿದ್ದಾರೆ. ಅಷ್ಟಕ್ಕೂ ಈ ಬಾರಿ Finch ಅವರ ಪ್ರಕಾರ ವಿಶ್ವಕಪ್ ಗೆಲ್ಲಲು ಫೇವರೆಟ್ ತಂಡ ಯಾವುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಹೌದು Finch ಅವರ ಪ್ರಕಾರ ಈ ಬಾರಿ ಇಂಗ್ಲೆಂಡ್ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ವಿಶ್ವಕಪ್ ಗೆಲ್ಲಲು ಉತ್ತಮ ಅವಕಾಶವನ್ನು ಹೊಂದಿರುವ ತಂಡಗಳು ಎಂಬುದಾಗಿ ಭವಿಷ್ಯ ನುಡಿದಿದ್ದಾರೆ. ಅದರಲ್ಲೂ ವಿಶೇಷವಾಗಿ ಇಂಗ್ಲೆಂಡ್ (Team England) ತಂಡ ಆಕ್ರಮಕಾರಿ ಬ್ಯಾಟಿಂಗ್ ಹಾಗೂ ಭಾರತದ ಪಿಚ್ ಗೆ ತಕ್ಕಂತೆ ಸ್ಪಿನ್ ಬೌಲಿಂಗ್ ಆಯ್ಕೆಯನ್ನು ಕೂಡ ಅತ್ಯುತ್ತಮವಾಗಿ ಹೊಂದಿರುವ ಹಿನ್ನೆಲೆಯಲ್ಲಿ ಈ ಬಾರಿ ಬೇರೆಲ್ಲ ತಂಡಗಳಿಗಿಂತ ಹೆಚ್ಚಾಗಿ ವಿಶ್ವಕಪ್ ಗೆಲ್ಲುವ ಸಾಧ್ಯತೆಯನ್ನು ಹೊಂದಿದೆ ಎಂಬುದಾಗಿ ಫಿಂಚ್ ಈ ಬಾರಿಯ ಏಕದಿನ ವಿಶ್ವಕಪ್ ನ ಭವಿಷ್ಯವನ್ನು ನುಡಿದಿದ್ದಾರೆ.