ಈ ಬಾರಿಯ ಐಪಿಎಲ್ 2023 (IPL 2023) ಈಗಾಗಲೇ ಪ್ರಾರಂಭವಾಗಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡ ತನ್ನ ಮೊದಲ ಪಂದ್ಯವನ್ನು ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಅದ್ದೂರಿಯಾಗಿ ಗೆದ್ದು ಬೀಗಿದೆ. ಅದರಲ್ಲೂ ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ (Virat Kohli) ಅವರು ಅತ್ಯದ್ಭುತ ಪ್ರದರ್ಶನವನ್ನು ನೀಡಿರುವುದು ಬೆಂಗಳೂರು ತಂಡದ ಅಭಿಮಾನಿಗಳಿಗೆ ಮತ್ತಷ್ಟು ಕಿಚ್ಚು ನೀಡಿದೆ.
ಆದರೆ ಮೊದಲ ಪಂದ್ಯವನ್ನು ಗೆದ್ದ ಬೆನ್ನಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಈಗ ಮತ್ತೊಂದು ಆ’ ಘಾತ ಬಂದೆರಗಿದೆ. ಹೌದು ಗೆಲ್ಲುವ ಕನಸಿನಲ್ಲಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಈಗ ಒಬ್ಬ ಆಟಗಾರನ ಇಂ’ ಜುರಿಯೆನ್ನುವುದು ಕಬ್ಬಿಣದ ಕಡಲೆ ಯಾಗಿ ಪರಿಣಮಿಸಿದೆ. ಅದರಲ್ಲೂ ಕಳೆದ ಬಾರಿ ಈ ಆಟಗಾರ ತಂಡದ ಮ್ಯಾಚ್ ವಿನ್ನರ್ ಪರ್ಫಾರ್ಮರ್ ಆಗಿ ಕಾಣಿಸಿಕೊಂಡಿದ್ದ ಈ ಯುವ ಪ್ರತಿಭೆ ಈ ಬಾರಿ ಐಪಿಎಲ್ ಆರಂಭಿಕ ಪಂದ್ಯಗಳಲ್ಲಿ ಇಂಜುರಿ ಆಗುವ ಮೂಲಕ ಇಡೀ ಐಪಿಎಲ್ (IPL) ನಿಂದಲೇ ಹೊರ ಹೋಗಿದ್ದಾರೆ.
ಹೌದು ಗೆಳೆಯರೇ ಆರ್ಸಿಬಿ ತಂಡದ ಕಳೆದ ಬಾರಿಯ ಮ್ಯಾಚ್ ವಿನ್ನರ್ ಬ್ಯಾಟ್ಸ್ಮನ್ ಆಗಿದ್ದ ರಜತ್ ಪಾಟೀದಾರ್ (Rajath Patidar) ಹಿಮ್ಮಡಿ ಇಂಜುರಿಯಿಂದಾಗಿ ಈ ಬಾರಿ ಐಪಿಎಲ್ ನಿಂದ ಹೊರ ಹೋಗುತ್ತಿದ್ದಾರೆ. ಹೌದು ಮಿತ್ರರೇ, ಕಳೆದ ಬಾರಿ ಭರವಸೆಯ ಬ್ಯಾಟ್ಸ್ಮನ್ ಆಗಿ ತಂಡದ ಸೋಲಿನ ಸಂದರ್ಭದಲ್ಲಿ ಗೆಲುವಿನ ಸಿಹಿಯನ್ನು ಉಣಿಸಿದ್ದ ಆಟಗಾರ ಈ ಬಾರಿ ತಂಡದಿಂದ ಹೊರ ಹೋಗುತ್ತಿರುವುದು ನಿಜಕ್ಕೂ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳಿಗೆ ಬೇಸರವನ್ನು ಮೂಡಿಸಿದೆ. ಮುಂದಿನ ದಿನಗಳಲ್ಲಿ ಅವರ ಅನುಪಸ್ಥಿತಿಯಲ್ಲಿ ಬ್ಯಾಟಿಂಗ್ ಕ್ರಮಾಂಕ ಯಾವ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.