Karnataka Times
Trending Stories, Viral News, Gossips & Everything in Kannada

Australia: ಇನ್ಮೇಲೆ ಈ ದೇಶದ ವಿರುದ್ಧ ಕ್ರಿಕೆಟ್ ಆಡದಂತೆ ನಿರ್ಧಾರ ಮಾಡಿದ ಆಸ್ಟ್ರೇಲಿಯಾ ಟೀಮ್!

advertisement

ಕ್ರಿಕೆಟ್ ಜಗತ್ತಿನಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ರೀತಿಯಲ್ಲಿ ಯಾವುದೇ ಬೇರೆ ದೇಶಗಳು ಖಂಡಿತವಾಗಿ ಅಷ್ಟೊಂದು ದೊಡ್ಡ ಮಟ್ಟದ ಸಾಧನೆ ಮಾಡಿರುವುದಕ್ಕೆ ಸಾಧ್ಯನೇ ಇಲ್ಲ ಅಂತ ಹೇಳಬಹುದಾಗಿದೆ. ಅತ್ಯಂತ ಹೆಚ್ಚು ವಿಶ್ವಕಪ್ಗಳನ್ನು ಗೆದ್ದಿರುವಂತಹ ಸಾಧನೆಯನ್ನು ಮಾಡಿರುವಂತಹ ಆಸ್ಟ್ರೇಲಿಯಾ ದೇಶದ ಕ್ರಿಕೆಟ್ ಇತಿಹಾಸ ಇವತ್ತಿಗೂ ಕೂಡ ಅತ್ಯಂತ ಅಮೋಘ ಎಂದು ಹೇಳಬಹುದಾಗಿದೆ, ಸೋಲನ್ನು ಆಸ್ಟ್ರೇಲಿಯಾ (Australia) ಕ್ರಿಕೆಟ್ ತಂಡ ಒಪ್ಪಿಕೊಳ್ಳುತ್ತದೆ ಎಂದು ಹೇಳಲು ಕೂಡ ಸಾಧ್ಯ ಇಲ್ಲ ಎನ್ನುವಷ್ಟರ ಮಟ್ಟಿಗೆ ಗೆಲುವಿನ ಹಸುವಿನಲ್ಲಿ ಈ ಕಾಂಗರುಗಳು ಇರುತ್ತಾರೆ.

ಆದರೆ ಈ ಬಾರಿಯ ಟಿ 20 ವಿಶ್ವಕಪ್ (T20 World Cup) ನಲ್ಲಿ ಸೆಮಿ ಫೈನಲ್ ಹಂತಕ್ಕೆ ಮೇಲೆ ಬರುವುದಕ್ಕೆ ಆಸ್ಟ್ರೇಲಿಯಾ (Australia) ಕ್ರಿಕೆಟ್ ತಂಡಕ್ಕೆ ಸಾಧ್ಯವಾಗಲಿಲ್ಲ ಅನ್ನೋದು ನಿಜಕ್ಕೂ ಕೂಡ ಒಂದು ರೀತಿಯ ಸರ್ಪ್ರೈಸ್ ಎಂದು ಹೇಳಬಹುದಾಗಿದೆ.

 

Image Credit: Crictoday

 

ಇದೇ ಕಾರಣಕ್ಕಾಗಿ ಈಗ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಈ ದೇಶದ ಜೊತೆಗೆ ಯಾವುದೇ ಸರಣಿಯನ್ನು ಆಡಿದಂತೆ ನಿರ್ಧರಿಸಿದೆ ಎಂಬುದಾಗಿ ತಿಳಿದು ಬಂದಿದ್ದು ಬನ್ನಿ ಆದೇಶ ಯಾವುದು ಹಾಗೂ ಕಾರಣ ಏನು ಎನ್ನುವಂತಹ ಸಂಪೂರ್ಣ ಮಾಹಿತಿಯನ್ನು ಇವತ್ತಿನ ಈ ಲೇಖನದ ಮೂಲಕ ಪಡೆದುಕೊಳ್ಳೋಣ.

advertisement

ಈ ತಂಡದ ಜೊತೆಗೆ ಆಸ್ಟ್ರೇಲಿಯ ಇನ್ನು ಮುಂದೆ ಆಡಲ್ವಂತೆ?

ಹೌದು ಕ್ರಿಕೆಟ್ ಆಸ್ಟ್ರೇಲಿಯಾ (Australia) ಅಧಿಕೃತವಾಗಿ ಮಾಡಿರುವಂತಹ ಘೋಷಣೆಯ ಪ್ರಕಾರ ಇನ್ಮುಂದೆ ಆಫ್ಘಾನಿಸ್ತಾನ (Afghanistan) ತಂಡದ ವಿರುದ್ಧ ದ್ವಿಪಕ್ಷಿಯ ಕ್ರಿಕೆಟ್ ಅನ್ನು ಯಾವುದೇ ಕಾರಣಕ್ಕೂ ಆಡುವುದಿಲ್ಲ ಕೇವಲ ಐಸಿಸಿ (ICC) ಇವೆಂಟ್ಗಳಲ್ಲಿ ಮಾತ್ರ ಆಡುತ್ತೇವೆ ಎಂಬುದಾಗಿ ಹೇಳಿಕೊಂಡಿದೆ.

 

Image Credit: myKhel

 

ಇದು ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ (T20 World Cup) ನಲ್ಲಿ ಅಫ್ಘಾನಿಸ್ತಾನ (Afghanistan) ತಂಡದ ವಿರುದ್ಧ ಆಸ್ಟ್ರೇಲಿಯಾ (Australia) ಸೋತಿದೆ ಎನ್ನುವ ಕಾರಣಕ್ಕಾಗಿ ಅಲ್ಲ ಬದಲಾಗಿ ಇದರ ಹಿಂದಿನ ಕಾರಣ ಬೇರೆನೇ ಇದೆ ಎಂದು ಆಸ್ಟ್ರೇಲಿಯಾ ಟೀ ಮ್ಯಾನೇಜ್ಮೆಂಟ್ ಹೇಳಿಕೊಂಡಿದೆ. ಹಾಗಿದ್ದರೆ ಆ ಕಾರಣ ಏನು ಅನ್ನೋದನ್ನ ಕೂಡ ಇವತ್ತಿನ ಈ ಲೇಖನದ ಮೂಲಕ ತಿಳಿಯೋಣ ಬನ್ನಿ.

ಈಗ ಸದ್ಯದ ಮಟ್ಟಿಗೆ ಅಫ್ಘಾನಿಸ್ತಾನದಲ್ಲಿ (Afghanistan) ನಿಮಗೆಲ್ಲರಿಗೂ ತಿಳಿದಿರುವ ಹಾಗೆ ತಾ-ಲಿಬಾನ್ ಸರ್ಕಾರದ ಆಡಳಿತ ಇದೆ. ಅಲ್ಲಿ ಮಹಿಳೆಯರಿಗೆ ಅಸಮಾನತೆ ಹಾಗೂ ಅವರನ್ನು ಇನ್ನಷ್ಟು ತುಚ್ಚವಾಗಿ ಕಾಣುತ್ತಾ ಅವರಿಗೆ ಬೇಕಾಗಿರುವಂತಹ ಯಾವುದೇ ಅಧಿಕಾರಿಗಳನ್ನು ಕೂಡ ನೀಡ್ತಾ ಇಲ್ಲ ಹಾಗೂ ಮೂಲಭೂತ ಸೌಕರ್ಯಗಳನ್ನು ಕೂಡ ಒದಗಿಸುತ್ತಿಲ್ಲ ಕಾರಣಕ್ಕಾಗಿ ಈ ವಿಚಾರದ ವಿರುದ್ಧ ಕ್ರಿಕೆಟ್ ಆಸ್ಟ್ರೇಲಿಯ ಸಂಸ್ಥೆ ಆಫ್ಘಾನಿಸ್ತಾನ ತಂಡದ ವಿರುದ್ಧ ದ್ವಿಪಕ್ಷೀಯವಾಗಿ ಯಾವುದೇ ಕಾರಣಕ್ಕೂ ಕ್ರಿಕೆಟ್ ಪಂದ್ಯವನ್ನು ಆಡುವುದಿಲ್ಲ ಹಾಗೂ ಕೇವಲ ಐಸಿಸಿ ಇವೆಂಟ್ಗಳಲ್ಲಿ ಮಾತ್ರ ಆಡುತ್ತೇವೆ ಅನ್ನೋದಾಗಿ ಸ್ಪಷ್ಟಪಡಿಸಿದೆ.

advertisement

Leave A Reply

Your email address will not be published.