Karnataka Times
Trending Stories, Viral News, Gossips & Everything in Kannada

AB de Villiers: ಟೀಮ್ ಇಂಡಿಯಾದ ಭವಿಷ್ಯದ ನಾಯಕನ ಹೆಸರು ತಿಳಿಸಿದ ಎಬಿಡಿ ವಿಲಿಯರ್ಸ್.

ಸದ್ಯ ದೇಶದಲ್ಲಿ ಯಾರ ಬಾಯಲ್ಲಿ ಕೇಳಿದ್ರು ಐಪಿಎಲ್ ಬಗ್ಗೆ ಮಾತು. 16ನೇ ಆವೃತ್ತಿಯ ಐಪಿಎಲ್ 2023 ಅದ್ದೂರಿಯಾಗಿ ಆರಂಭವಾಗಿದೆ. ಈ ರೋಚಕ ಪಂದ್ಯಗಳನ್ನು ಫೀಲ್ಡ್ ನಲ್ಲಿ ಹಾಗೂ ಟಿವಿ ಅಥವಾ ಮೊಬೈಲ್ ಪರದೆಯ ಮೇಲೆ ವೀಕ್ಷಿಸುವವರ ಸಂಖ್ಯೆಯಂತೂ ಅಪರಿಮಿತ. ಸದ್ಯ ಮುಂಬೈ ಇಂಡಿಯನ್ಸ್ ನ ಐಪಿಎಲ್ ಕ್ಯಾಪ್ಟನ್ ಆಗಿರುವ ರೋಹಿತ್ ಶರ್ಮ (Rohit Sharma) ಟೀಮ್ ಇಂಡಿಯಾ (Team India) ದ ಎಲ್ಲಾ ಮೂರು ಫಾರ್ಮೆಟ್ಸ್ ಗಳಲ್ಲಿ ಕ್ಯಾಪ್ಟನ್ ಆಗಿದ್ದಾರೆ. ಇವರ ಕ್ಯಾಪ್ಟನ್ಸಿಯಲ್ಲಿ, ಟೀಮ್ ಇಂಡಿಯಾ 2022, ಟಿ 20 ವಿಶ್ವಕಪ್ (T20 World Cup) ಸೋಲನ್ನು ಎದುರಿಸಿತ್ತು. ಹಾಗಾಗಿ ಅವರ ಕ್ಯಾಪ್ಟನ್ಸಿ ಬಗ್ಗೆ ಪ್ರಶ್ನೆ ಉದ್ಭವಿಸಿದೆ. ಈ ನಡುವೆ ಎ ಬಿ ಡೆವಿಲಿಯರ್ಸ್ (AB de Villiers) 28 ವರ್ಷದ ಈ ಸ್ಟಾರ್ ಆಟಗಾರ ನಾಯಕ ಆಗಬಹುದು ಎಂದು ಭವಿಷ್ಯ ನುಡಿದಿದ್ದು ದೊಡ್ಡ ಚರ್ಚೆಗೆ ಕಾರಣವಾಗಿದೆ.

Advertisement

ಎಬಿ ಸೂಚಿಸಿದ ಸ್ಟಾರ್ ಆಟಗಾರ ಯಾರು? 

Advertisement

ಟೀಮ್ ಇಂಡಿಯಾದಲ್ಲಿ ರೋಹಿತ್ ಶರ್ಮಾ ಅವರ ನಾಯಕತ್ವ ಕೆಲವೇ ದಿನಗಳಲ್ಲಿ ಅಂತ್ಯಗೊಳ್ಳಲಿದೆ ರೋಹಿತ ಶರ್ಮ ಅವರ ಬದಲಿಗೆ ಹಾರ್ದಿಕ ಪಾಂಡ್ಯ ನೇತೃತ್ವದಲ್ಲಿ ತಂಡ ಮುಂದುವರೆಯಬಹುದು. ಈ ಸಂದರ್ಭದಲ್ಲಿ ಸೌತ್ ಆಫ್ರಿಕನ್ ಮಿಸ್ಟರ್ 360 ಹಿಂದೆ ಹೆಸರಾಗಿರುವ ಎ ಬಿ ಡೆ ವಿಲ್ಲರ್ಸ್ ಟೀಮ್ ಇಂಡಿಯಾದ ಕ್ಯಾಪ್ಟನ್ ಬಗ್ಗೆ ತನ್ನ ಅಭಿಪ್ರಾಯವನ್ನು ಸೂಚಿಸಿದ್ದಾರೆ. ಅವರ ಪ್ರಕಾರ ಸಂಜು ಸ್ಯಾಮ್ಸನ್  ಟೀಮ್ ಇಂಡಿಯಾದ ನಾಯಕರಾಗಬೇಕು.

Advertisement

ಸಂಜು ನಾಯಕತ್ವದ ಬಗ್ಗೆ ಎಬಿ ಹೇಳಿದ್ದೇನು?

Advertisement

“ಸಂಜು ಸ್ಯಾಮ್ಸನ್ ಕ್ಯಾಪ್ಟನ್ ಆಗುವ ಹಲವು ಗುಣಗಳನ್ನು ಹೊಂದಿದ್ದಾರೆ ಯಾರಿಗೆ ಗೊತ್ತು ಮುಂದೊಂದು ದಿನ ಅವರು ಟೀಮ್ ಇಂಡಿಯಾದ ನಾಯಕರಾಗಬಹುದು ಎಂದು ನಾನು ಭಾವಿಸುತ್ತೇನೆ” ಎಬಿ ಡಿವಿಲಿಯರ್ಸ್ ಸಂಜು ಅವರ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಸಂಜು ಸ್ಯಾಮ್ಸನ್ ಒಬ್ಬ ಶ್ರೇಷ್ಠ ಆಟಗಾರ. ಅವರು ಶಾಂತವಾಗಿರುತ್ತಾರೆ. ಅವರು ಯಾವ ಸಂದರ್ಭದಲ್ಲಿ ಯಾವ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ ಎಂದು ಯಾರೂ ಊಹಿಸುವುದಕ್ಕೆಆಗದು. ಅವರಲ್ಲಿ ಒಬ್ಬ ಉತ್ತಮ ನಾಯಕನ ಚಿಹ್ನೆ ಇದೆ. ಇನ್ನು ದೈಹಿಕ ಸಾಮರ್ಥ್ಯಕ್ಕೆ ಬಂದರೆ ಅವರು ತುಂಬಾ ಬಲಶಾಲಿ ಎಂದು ನಾನು ಭಾವಿಸುತ್ತೇನೆ. ಸಂಜು ಸ್ಯಾಮ್ಸನ್ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಜೊತೆ ಸಮಯ ಕಳೆಯುತ್ತಿದ್ದು, ಅವರಿಂದ ಕಲಿಯುವುದು ಸಾಕಷ್ಟಿದೆ” ಎಂದಿದ್ದಾರೆ.

ಸಂಜು ನಾಯಕತ್ವದಲ್ಲಿ ಫೈನಲ್ಸ್ ತಲುಪಿದ ರಾಜಸ್ಥಾನ್ ರಾಯಲ್ಸ್!

ಟೀಮ್ ಇಂಡೀಯಾದ ಅತ್ಯುತ್ತಮ ಆಟಗಾರ ಸಂಜು ಸ್ಯಾಮ್ಸನ್ 33 ಐಪಿಎಲ್ ಪಂದ್ಯಗಳ ನಾಯಕತ್ವ ವಹಿಸಿದ್ದವರು. ಇದರಲ್ಲಿ 16 ಪಂದ್ಯಗಳಲ್ಲಿ ಗೆಲುವು ತಂದು ಕೊಟ್ಟಿದ್ದಾರೆ. ಕಳೆದ ಐಪಿಎಲ್ ನಲ್ಲಿ ರಾಜಸ್ಥಾನ್ ರಾಯಲ್ಸ್ ಫೈನಲ್‌ ತಲುಪಿದ್ದು ಸಂಜು ನಾಯಕತ್ವದ ಸಾಮರ್ಥ್ಯದಿಂದಲೇ. ಆದರೆ, ಫೈನಲ್ ನಲ್ಲಿ ಗುಜರಾತ್ ವಿರುದ್ಧ ಸೋಲು ಕಂಡಿತು. ನಾಯಕತ್ವ ಗುಣ ಇರುವ ಸಂಜು ವೇಗದ ಬ್ಯಾಟ್ಸ್ ಮ್ಯಾನ್ ಕೂಡ ಹೌದು.

Leave A Reply

Your email address will not be published.