Karnataka Times
Trending Stories, Viral News, Gossips & Everything in Kannada

Ishan Kishan: T20 ವಿಶ್ವಕಪ್ ಹಾಗು ಜಿಂಬಾಬ್ವೆ ಸರಣಿಗೂ ಸೆಲೆಕ್ಟ್ ಆಗದಿದ್ದಕ್ಕೆ ಸಣ್ಣ ವಯಸ್ಸಲ್ಲೇ ಇಶಾನ್ ಕಿಶನ್ ಹೊಸ ನಿರ್ಧಾರ

advertisement

ಇಶಾನ್ ಕಿಶನ್ (Ishan Kishan) ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮಹೇಂದ್ರ ಸಿಂಗ್ ಧೋನಿ (MS Dhoni) ರವರ ರಾಜ್ಯ ಆಗಿರುವಂತಹ ಜಾರ್ಖಂಡ್ ನಿಂದ ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದ ಎರಡನೇ ಆಟಗಾರ ಆಗಿದ್ದರು. ಏಕದಿನ ಫಾರ್ಮೆಟ್ ನಲ್ಲಿ ಅತ್ಯಂತ ವೇಗದ ದ್ವಿಷತಕವನ್ನು ಬಾರಿಸುವಂತಹ ಆಟಗಾರ ಇತ್ತೀಚಿನ ದಿನಗಳಲ್ಲಿ ಭಾರತೀಯ ಕ್ರಿಕೆಟ್ ತಂಡದ ತಮ್ಮ ವಿಕೆಟ್ ಕೀಪರ್ ಸ್ಥಾನದಿಂದ ಹೊರ ಬಿದ್ದಿದ್ದಾರೆ ಎಂದು ಹೇಳಬಹುದಾಗಿದೆ ಹಾಗೂ ಇದಕ್ಕೂ ಕೂಡ ಅವರದ್ದೇ ತಪ್ಪು ಇದೆ ಅನ್ನೋದನ್ನ ನಾವಿಲ್ಲಿ ಪ್ರಮುಖವಾಗಿ ಗಮನಿಸಬೇಕಾಗುತ್ತದೆ.

ಏಕದಿನ ವಿಶ್ವಕಪ್ ವರೆಗೂ ಕೂಡ ತಂಡದ ಪ್ರಮುಖ ಆಟಗಾರರಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಿದ್ದ ಕಿಶಾನ್ (Ishan Kishan) ತಮ್ಮದೇ ಆಗಿರುವಂತಹ ತಪ್ಪಿನಿಂದ ತಂಡದಿಂದ ಹೊರಗೆ ಬಿದ್ದಿದ್ದಾರೆ ಎಂದು ಹೇಳಬಹುದಾಗಿದ್ದು ಬನ್ನಿ ಈ ಪರಿಸ್ಥಿತಿಯನ್ನು ಸರಿಯಾದ ರೀತಿಯಲ್ಲಿ ಅರ್ಥ ಮಾಡಿಕೊಳ್ಳುವಂತಹ ಪ್ರಯತ್ನವನ್ನು ಮಾಡೋಣ.

 

Image Credit: Hindustan Times

 

ಕಳೆದ ಬಾರಿ ರಣಜಿ ಆಡಬೇಕು ಎಂಬುದಾಗಿ ಇಶಾನ್ ಕಿಶನ್ ರವರಿಗೆ BCCI ಆದೇಶ ನೀಡಿತ್ತು ಆದರೆ ಸುಳ್ಳು ನೆಪಗಳನ್ನು ಹೇಳಿ ತಪ್ಪಿಸಿಕೊಂಡ್ರು. ಅದಾದ ನಂತರ ಅವರನ್ನು ಬಿಸಿಸಿಐ ಕಾಂಟ್ರಾಕ್ಟ್ ಹೊಂದಿರುವಂತಹ ಕ್ರಿಕೆಟಿಗರ ಲಿಸ್ಟ್ ಇಂದ ತೆಗೆದು ಹಾಕಲಾಗಿತ್ತು. ಈಗ ಕೊನೆಗೂ ಇಶಾನ್ ಕಿಶನ್ (Ishan Kishan) ಬಿಸಿಸಿಐ ಮುಂದೆ ತಲೆಬಾಗಿದ್ದಾರೆ ಎಂಬುದಾಗಿ ತಿಳಿದು ಬಂದಿದ್ದು ಮತ್ತೆ ರಣಜಿ ಆಡೋದಕ್ಕೆ ಸಿದ್ಧವಾಗಿದ್ದಾರೆ ಎನ್ನುವಂತಹ ಮಾಹಿತಿ ಸಿಕ್ಕಿದೆ.

advertisement

ಈ ಸಂದರ್ಭದಲ್ಲಿ ಮಾನಸಿಕವಾಗಿ ನಾನು ಸ್ವಲ್ಪ ಮಟ್ಟಿಗೆ ಸುಸ್ತಾಗಿದ್ದೆ ಎನ್ನುವ ಕಾರಣಕ್ಕಾಗಿಯೇ ಬ್ರೇಕ್ ತೆಗೆದುಕೊಂಡಿದ್ದೆ ಆದರೆ ಈಗ ಮತ್ತೆ ಜಾರ್ಖಂಡ್ ತಂಡದ ಪರವಾಗಿ ಡೊಮೆಸ್ಟಿಕ್ ಕ್ರಿಕೆಟ್ ನಲ್ಲಿ ನಾನು ಚೆನ್ನಾಗಿ ಆಡಲು ಬಯಸುತ್ತೇನೆ ಎಂಬುದಾಗಿ ಇತ್ತೀಚಿಗಷ್ಟೇ ನೀಡಿರುವಂತಹ ಇಂಟರ್ವ್ಯೂನಲ್ಲಿ ಹೇಳಿಕೊಂಡಿದ್ದಾರೆ.

 

Image Credit: News9live

 

ಸೌತ್ ಆಫ್ರಿಕಾ ಟೂರ್ ನಲ್ಲಿ ತಮ್ಮ ಬದಲಾಗಿ ಜಿತೇಶ್ ಶರ್ಮ ಅವರಿಗೆ ಅವಕಾಶ ನೀಡಿರುವುದು ಕೂಡ ಆ ಸಂದರ್ಭದಲ್ಲಿ ಇಶಾನ್ ಕಿಶನ್ (Ishan Kishan) ರವರ ಅಸಮಧಾನಕ್ಕೆ ಕಾರಣವಾಗಿತ್ತು ಹಾಗೂ ಇದೇ ಕಾರಣಕ್ಕಾಗಿ ತಮ್ಮ ಹೆಸರನ್ನು ಕೂಡ ಡ್ರಾ ಮಾಡಿಕೊಂಡಿದ್ದರು. ಅದಾದ ನಂತರ ವಿಶ್ವಕಪ್ ನಲ್ಲಿ ಕೂಡ ಅವರಿಗೆ ಯಾವುದೇ ಅವಕಾಶ ಸಿಕ್ಕಿರಲಿಲ್ಲ ಮತ್ತು BCCI ಸೆಂಟ್ರಲ್ ಕಾಂಟ್ರಾಕ್ಟ್ ಇಂದ ಕೂಡ ಅವರ ಹೆಸರನ್ನು ತೆಗೆದುಹಾಕಲಾಗಿತ್ತು.

ಈಗ ಕೊನೆಗೂ ಇಶಾನ್ ಕಿಶನ್ (Ishan Kishan) ಬುದ್ಧಿ ಕಲಿತಿರುವ ಹಾಗೆ ಕಂಡು ಬರುತ್ತಿದ್ದು ಮುಂದಿನ ದಿನಗಳಲ್ಲಿ ಅವರಿಗೆ ಭಾರತೀಯ ಕ್ರಿಕೆಟ್ ತಂಡದಲ್ಲಿ ವಿಕೆಟ್ ಕೀಪಿಂಗ್ ಬ್ಯಾಟ್ಸ್ಮನ್ ಆಗಿ ಕಾಣಿಸಿಕೊಳ್ಳುವಂತಹ ಅವಕಾಶವನ್ನ ಪಡೆದುಕೊಳ್ಳಬಹುದಾಗಿದೆ ಅಥವಾ ಅದಕ್ಕಾಗಿ ಅವರು ಡೊಮೆಸ್ಟಿಕ್ ಕ್ರಿಕೆಟ್ನಲ್ಲಿ ಸರಿಯಾದ ರೀತಿಯಲ್ಲಿ ಪ್ರದರ್ಶನ ತೋರ್ಪಡಿಸಿ ತಮ್ಮ ಸ್ಥಾನವನ್ನು ಪಕ್ಕ ಮಾಡಿಕೊಳ್ಳಬೇಕಾಗಿದೆ ಎಂದು ಹೇಳಬಹುದಾಗಿದೆ.

advertisement

Leave A Reply

Your email address will not be published.