Karnataka Times
Trending Stories, Viral News, Gossips & Everything in Kannada

Highest Number of Zeros: ಟೀಮ್ ಇಂಡಿಯಾದ ಪರವಾಗಿ ಅತ್ಯಂತ ಹೆಚ್ಚು ಜೀರೋ ಬಾರಿಸಿದ್ದು ಯಾರು ಗೊತ್ತಾ?

advertisement

ಭಾರತೀಯ ಕ್ರಿಕೆಟ್ ತಂಡ ಆರಂಭದಲ್ಲಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಒಂದು ಚಿಕ್ಕ ತಂಡವನ್ನು ಸೋಲಿಸಲು ಕೂಡ ಸಾಧ್ಯವಾಗದಂತಹ ಪರಿಸ್ಥಿತಿಯಲ್ಲಿ ಇತ್ತು. ಅದಾದ ನಂತರ 1983 ರಲ್ಲಿ ಮೊದಲ ಬಾರಿಗೆ ಇಂಗ್ಲೆಂಡ್ನಲ್ಲಿ ನಡೆದಿರುವಂತಹ ವಿಶ್ವಕಪ್ ನಲ್ಲಿ ಗೆಲುವನ್ನು ಪಡೆದುಕೊಳ್ಳುವ ಮೂಲಕ ಭಾರತೀಯ ಕ್ರಿಕೆಟ್ ತಂಡ ಇಡೀ ಕ್ರಿಕೆಟ್ ಜಗತ್ತಿನಲ್ಲಿ ತನ್ನದೇ ಆದಂತಹ ಹೊಸ ಅಧ್ಯಾಯವನ್ನು ಬರೆದು ಆ ಅಧ್ಯಾಯದಲ್ಲಿ ಹೊಸ ಪ್ರಯಾಣವನ್ನು ಪ್ರಾರಂಭ ಮಾಡಿತು.

ಇವತ್ತು ಟೀಮ್ ಇಂಡಿಯಾ (Team Indian) ಯಶಸ್ವಿ ಹಾಗೂ ಬಲಿಷ್ಠ ಕ್ರಿಕೆಟ್ ತಂಡಗಳಲ್ಲಿ ಹಾಗೂ ಕ್ರಿಕೆಟ್ ಸಂಸ್ಥೆಗಳಲ್ಲಿ ಒಂದಾಗಿ ಕಾಣಿಸಿಕೊಳ್ಳುತ್ತದೆ ಅನ್ನೋದಕ್ಕೆ ಭಾರತೀಯರಾಗಿ ನಾವು ಹೆಮ್ಮೆ ಪಡಬೇಕು ಎಂದು ಹೇಳಬೇಕಾಗುತ್ತದೆ. ಇನ್ನು ನಮ್ಮ ಭಾರತ ದೇಶ ಸಾಕಷ್ಟು ಖ್ಯಾತ ನಾಮ ಕ್ರಿಕೆಟಿಗರನ್ನು ಈ ಕ್ರಿಕೆಟ್ ಜಗತ್ತಿಗೆ ನೀಡುವಂತಹ ಕೆಲಸವನ್ನು ಮಾಡಿದೆ.

ಕ್ರಿಕೆಟ್ ಲೋಕದ ದೇವರಾಗಿ ಸಚಿನ್ ತೆಂಡೂಲ್ಕರ್ (Sachin Tendulkar) ಅವರನ್ನು ಪ್ರತಿಯೊಬ್ಬರೂ ಪೂಜಿಸುತ್ತಾರೆ. ಮಹೇಂದ್ರ ಸಿಂಗ್ ಧೋನಿ (MS Dhoni) ರವರನ್ನಾ ಮೇರು ವ್ಯಕ್ತಿತ್ವ ಕ್ಯಾಪ್ಟನ್ ಕೂಲ್ ಎಂಬುದಾಗಿ ಪರಿಗಣಿಸುತ್ತಾರೆ ಹಾಗೂ ದಾದಾ ಸೌರವ್ ಗಂಗೂಲಿ ಅವರನ್ನು ಅಗ್ರೆಸ್ಸಿವ್ ಆಟಗಾರ ಎಂಬುದಾಗಿ ಪರಿಗಣಿಸುತ್ತಾರೆ ಹಾಗೂ ವಿರಾಟ್ ಕೊಹ್ಲಿ (Virat Kohli) ಅವರನ್ನು ಕಿಂಗ್ ಹೀಗೆ ಪ್ರತಿಯೊಬ್ಬ ಭಾರತೀಯ ಕ್ರಿಕೆಟಿಗರು ಕೂಡ ಅವರದ್ದೇ ಆಗಿರುವಂತಹ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

 

advertisement

Image Source: The Economic Times

 

ಆದರೆ ಇವತ್ತಿನ ಈ ಲೇಖನದ ಮೂಲಕ ನಿಮಗೆ ನಾವು ಹೇಳೋಕೆ ಹೊರಟಿರುವಂತಹ ಕ್ರಿಕೆಟ್ ಲೋಕದ ಈ ವಿಚಿತ್ರವಾದ ದಾಖಲೆಯನ್ನು ಕೇಳಿದರೆ ನೀವು ಕೂಡ ಆಶ್ಚರ್ಯ ಪಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಬಹುದಾಗಿದೆ. ಹೌದು ಭಾರತದ ಪರವಾಗಿ ಡಕ್ ಔಟ್ ಆಗಿರುವಂತಹ ಅಂದರೆ ಸೊನ್ನೆ ರನ್ನಿಗೆ ಔಟ್ ಆಗಿರುವಂತಹ ಆಟಗಾರರ ಲಿಸ್ಟ್ ಅನ್ನು ನಾವು ನಿಮಗೆ ಹೇಳೋದಕ್ಕೆ ಹೊರಟಿದ್ದೇವೆ.

ಭಾರತದ ಪರವಾಗಿ ಅತ್ಯಂತ ಹೆಚ್ಚು ಬಾರಿ ಸೊನ್ನೆ ರನಿಗೆ ಔಟ್ ಆಗಿರುವ ಆಟಗಾರರು

  • 9ನೇ ಸ್ಥಾನದಲ್ಲಿ ಭಾರತದ ಯಶಸ್ವಿ ಮಾಜಿ ಆಟಗಾರ ಆಗಿರುವಂತಹ ವೀರೇಂದ್ರ ಸೆಹ್ವಾಗ್ (Virender Sehwag) ರವರು ಕಾಣಿಸಿಕೊಳ್ಳುತ್ತಾರೆ ಹಾಗೂ ಅವರು 31 ಬಾರಿ ಔಟ್ ಆಗಿದ್ದಾರೆ.
  • ಎಂಟನೇ ಸ್ಥಾನದಲ್ಲಿ ಜಾವಗಲ್ ಶ್ರೀನಾಥ್ 32 ಬಾರಿ ಔಟ್ ಆಗಿದ್ದಾರೆ.
  • ಏಳನೇ ಸ್ಥಾನದಲ್ಲಿ ಭಾರತೀಯ ಕ್ರಿಕೆಟ್ ತಂಡದ ನಾಯಕ ಹಾಗೂ ಹಿಟ್ಮ್ಯಾನ್ ಆಗಿರುವಂತಹ ರೋಹಿತ್ ಶರ್ಮ 33 ಬಾರಿ ಔಟ್ ಆಗಿದ್ದಾರೆ.
  • ಭಾರತದ ಕ್ರಿಕೆಟ್ ದಂತಕಥೆ ಹಾಗೂ ವಿಶ್ವ ಕ್ರಿಕೆಟ್ ಜಗತ್ತಿನ ದೇವರು ಎಂದು ಕರೆಯಲ್ಪಡುವಂತಹ ಸಚಿನ್ ತೆಂಡೂಲ್ಕರ್ 34 ಬಾರಿ ಔಟ್ ಆಗಿದ್ದಾರೆ.
  • 5ನೇ ಸ್ಥಾನದಲ್ಲಿ ಸ್ಪಿನ್ ಬೌಲರ್ ಆಗಿದ್ದ ಕರ್ನಾಟಕ ಮೂಲದ ಅನಿಲ್ ಕುಂಬಳೆ ಅವರು 35 ಬಾರಿ ಔಟ್ ಆಗಿದ್ದಾರೆ.
  • ನಾಲ್ಕನೇ ಸ್ಥಾನದಲ್ಲಿ ವಿರಾಟ್ ಕೊಹ್ಲಿ (Virat Kohli) ಅವರು 36ನೇ ಬಾರಿ ಔಟ್ ಆಗುವ ಮೂಲಕ ಆಶ್ಚರ್ಯ ಚಕಿತಗೊಳಿಸಿದ್ದಾರೆ.
  • ಮಾಜಿ ಆಟಗಾರ ಹರಭಜನ್ ಸಿಂಗ್ 37 ಬಾರಿ ಔಟ್ ಆಗುವ ಮೂಲಕ ಕೂಡ ಇಲಿಸ್ಟ್ ನಲ್ಲಿ ಕಾಣಿಸಿಕೊಂಡಿದ್ದಾರೆ.
  • ಎರಡನೇ ಹಾಗೂ ಒಂದನೇ ಸ್ಥಾನಗಳನ್ನು ಕ್ರಮವಾಗಿ ಇಶಾಂತ್ ಶರ್ಮ 40 ಬಾರಿ ಹಾಗೂ ಜಹೀರ್ ಖಾನ್ 43 ಬಾರಿ ಔಟ್ ಆಗುವ ಮೂಲಕ ಪಡೆದುಕೊಂಡಿದ್ದಾರೆ.

advertisement

Leave A Reply

Your email address will not be published.