Richest Cricketer: ’ಅತ್ಯಂತ ಶ್ರೀಮಂತ ಕ್ರಿಕೆಟಿಗ’ ಪಟ್ಟಿಯಲ್ಲಿ ಕೊಹ್ಲಿ ನಾಲ್ಕನೇ ಸ್ಥಾನಕ್ಕೆ; ಮೊದಲು ಯಾರಿದ್ದಾರೆ ಗೊತ್ತೇ?
ಜನರು ಎಲ್ಲಾ ಕ್ರೀಡೆಗಳನ್ನು ಗೌರವಿಸುಬಹುದು ಪ್ರೀತಿಸಬಹುದು ಆದರೆ ಕ್ರಿಕೆಟ್ ಅನ್ನು ಇಷ್ಟಪಡುವಷ್ಟು ಬೇರೆ ಯಾವ ಕ್ರೀಡೆಯನ್ನೂ ಇಷ್ಟಪಡುವುದಿಲ್ಲ. ಜಗತ್ತಿನ ಅತ್ಯಂತ ಜನಪ್ರಿಯ ಕ್ರೀಡೆಗಳಲ್ಲಿ ಕ್ರಿಕೆಟ್ ಕೂಡ ಒಂದು. ಬಹಳ ಶ್ರೀಮಂತ ಇತಿಹಾಸ ಕ್ರಿಕೆಟ್ ಗೆ ಇದೆ ಅನೇಕ ದೇಶಗಳಲ್ಲಿ ಇದು ದೊಡ್ಡ ಕ್ರೀಡೆ ಎನಿಸಿದೆ. ಹಳ್ಳಿಯಿಂದಲೂ ಬಂದ ಬಡ ಕುಟುಂಬದವರು ಕೂಡ ಕ್ರಿಕೆಟ್ ತಂಡದಲ್ಲಿ ಇದ್ದಾರೆ ಜೊತೆಗೆ ತಮ್ಮ ಜೀವನವನ್ನೇ ಬದಲಾಯಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಉದಾಹರಣೆಗೆ T20 ಲೀಗ್ ನ ಮೂಲಕ ಅನೇಕ ಕ್ರಿಕೆಟ್ ತಾರೆಯರು ತಳದಿಂದ ಮೇಲೆ ಬಂದವರೇ. ಇಂಥ ಕೆಲವು ಆಟಗಾರರ ಜೀವನ ಶೈಲಿಯೂ ಕೂಡ ಬದಲಾಗಿದೆ ಈ ಸಂದರ್ಭದಲ್ಲಿ ವಿಶ್ವದ ಶ್ರೀಮಂತ ಕ್ರಿಕೆಟಿಗ ಯಾರು ಎನ್ನುವ ಪ್ರಶ್ನೆ ಮೂಡಬಹುದು..
ವಿಶ್ವದ ಶ್ರೀಮಂತ ಕ್ರಿಕೆಟಿಗ ಯಾರು?
ಆಸ್ಟ್ರೇಲಿಯಾದ ಮಾಜಿ ಕ್ರಿಕೆಟರ್ ಆಡಂ ಗಿಲ್ ಕ್ರಿಸ್ಟ್ ವಿಶ್ವದ ಶ್ರೀಮಂತ ಕ್ರಿಕೆಟಿಗರ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ವಿಶ್ವದ ಅತ್ಯಂತ ಶ್ರೀಮಂತ ಟಾಪ್ ಟೆನ್ ಕ್ರಿಕೆಟಿಗರ ಪಟ್ಟಿಯನ್ನು ಸಿಇಓ ವರ್ಲ್ಡ್ ನಿಯತಕಾಲಿಕೆ ಬಿಡುಗಡೆ ಮಾಡಿದೆ. ಇಲ್ಲಿ ಆಶ್ಚರ್ಯವಾಗುವ ಸಂಗತಿ ಏನೆಂದರೆ ಈ ಟಾಪ್ ಟೆನ್ ಪಟ್ಟಿಯಲ್ಲಿ ಐದು ಮಂದಿ ಭಾರತೀಯ ಕ್ರಿಕೆಟಿಗರೇ ಆಗಿದ್ದಾರೆ.
ನಂಬರ್ ಒನ್ ಸ್ಥಾನದಲ್ಲಿ ಗಿಲ್ ಕ್ರಿಸ್ಟ್ ಇದ್ದಾರೆ. 2023ರ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟಿಗ ಎನಿಸಿರುವ ಗಿಲ್ ಕ್ರಿಸ್ಟ್ ಅವರ ಆದಾಯ 380 ಮಿಲಿಯನ್ ಡಾಲರ್. ಅಂದರೆ ಸುಮಾರು 3200 ಕೋಟಿ ರೂಪಾಯಿಗಳು. ಆಸ್ಟ್ರೇಲಿಯಾಕ್ಕೆ ಮೂರು ಬಾರಿ ವಿಶ್ವಕಪ್ (1999 2003, 2007) ಗಳಿಸಿಕೊಡುವಲ್ಲಿ ಗಿಲ್ಕ್ ಕ್ರಿಸ್ಟ್ ಅವರದ್ದು ಬಹು ಮುಖ್ಯ ಪಾಲು ಇದೆ. ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ 100 ಸಿಕ್ಸರ್ ಗಳನ್ನು ಬಾರಿಸಿದ ವಿಶ್ವದ ಮೊದಲ ಬ್ಯಾಟ್ಸ್ ಮ್ಯಾನ್ ಗಿಲ್ ಕ್ರಿಸ್ಟ್. ಸತ್ಯ ಅವರು ಆಸ್ಟ್ರೇಲಿಯಾದ ಕ್ರಿಕೆಟ್ ತಂಡದ ವಿವರಣೆಗಾರ (Commentator) ಆಗಿದ್ದಾರೆ.
ನಾಲ್ಕನೇ ಸ್ಥಾನದಲ್ಲಿ ವಿರಾಟ್ ಕೊಹ್ಲಿ;
ಕ್ರಿಕೆಟ್ ಕಿಂಗ್ ವಿಶ್ವದ ಅತಿ ಶ್ರೀಮಂತ ಕ್ರಿಕೆಟಿಗರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ ಅವರ ಒಟ್ಟು ಆಸ್ತಿಯ ಮೌಲ್ಯ 112 ಮಿಲಿಯನ್ ಅಂದರೆ 922 ಕೋಟಿ. ಅತ್ಯುತ್ತಮ ಬ್ಯಾಟ್ಸ್ ಮ್ಯಾನ್ ಹಾಗೂ ಭಾರತ ತಂಡವನ್ನು ನಿಭಾಯಿಸಿದ ಕೊಹಿಲಿ ಅವರು ಇತ್ತೀಚಿಗೆ ಬಾರ್ಡರ್ ಗವಾಸ್ಕರ್ ಪಂದ್ಯದಲ್ಲಿ ಶತಕ ಸಿಡಿಸಿ ಜನರಿಗೆ ಇನ್ನಷ್ಟು ಹತ್ತಿರವಾಗಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ 25 ಸಾವಿರಕ್ಕೂ ಹೆಚ್ಚು ರನ್ ಗಳಿಸಿದ ವೇಗದ ಆಟಗಾರ ವಿರಾಟ್ ಕೊಹ್ಲಿ. ಇವರ ಅತ್ಯುತ್ತಮ ನಾಯಕತ್ವದ ಕೌಶಲ್ಯ ಟೀಮ್ ಇಂಡಿಯಾ ಹಲವು ಗೆಲುವನ್ನು ನೋಡುವಂತೆ ಮಾಡಿದೆ.
ಟಾಪ್ ಟೆನ್ ಕ್ರಿಕೆಟಿಗರ ಪಟ್ಟಿ ಇಲ್ಲಿದೆ:
- ಗಿಲ್‌ಕ್ರಿಸ್ಟ್: $380 ಮಿಲಿಯನ್ -3200ಕೋಟಿ ರೂ. (ಭಾರತಿಯ ರೂ. ಗಳಲ್ಲಿ ಅಂದಾಜಿ)
- ಸಚಿನ್ ತೆಂಡೂಲ್ಕರ್: $170 ಮಿಲಿಯನ್ -1700 ಕೋಟಿ ರೂ.
- ಎಂಎಸ್ ಧೋನಿ: $115 ಮಿಲಿಯನ್ – 948 ಕೋಟಿ ರೂ.
- ವಿರಾಟ್ ಕೊಹ್ಲಿ: $ 112 ಮಿಲಿಯನ್ – 922 ಕೋಟಿ ರೂ.
- ರಿಕಿ ಪಾಂಟಿಂಗ್: $75 ಮಿಲಿಯನ್ – 618 ಕೋಟಿ ರೂ.
- ಜಾಕ್ವೆಸ್ ಕಾಲಿಸ್: $70 ಮಿಲಿಯನ್ -577 ಕೋಟಿ ರೂ.
- ಬ್ರಿಯಾನ್ ಲಾರಾ: $60 ಮಿಲಿಯನ್ – 494 ಕೋಟಿ ರೂ.
- ವೀರೇಂದ್ರ ಸೆಹ್ವಾಗ್: $40 ಮಿಲಿಯನ್ -329 ಕೋಟಿ ರೂ.
- ಯುವರಾಜ್ ಸಿಂಗ್: $35 ಮಿಲಿಯನ್ – 288 ಕೋಟಿ ರೂ.
- ಸ್ಟೀವ್ ಸ್ಮಿತ್: $ 30 ಮಿಲಿಯನ್ – 258 ಕೋಟಿ ರೂ.