Jadeja-Ashwin: ಟೀಮ್ ಇಂಡಿಯಾದಲ್ಲೂ ನಾಟು ನಾಟು ಸಂಭ್ರಮ, ಡ್ಯಾನ್ಸ್ ಮಾಡಿದ ಜಡೇಜಾ ಅಶ್ವಿನ್

Advertisement
ಎಸ್ ಎಸ್ ರಾಜಮೌಳಿ (S. S. Rajamouli) ಅವರ ಆರ್ ಆರ್ ಆರ್ ಚಿತ್ರ ಮತ್ತೊಮ್ಮೆ ಸೌಂಡ್ ಮಾಡುತ್ತಿದೆ. ಈ ಚಿತ್ರದ ಸೂಪರ್ ಹಿಟ್ ಹಾಡು ನಾಟು ನಾಟು ಅತ್ಯುತ್ತಮ ಮೂಲಗೀತೆ ವಿಭಾಗದಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಸೋಮವಾರ ಬೆಳಿಗ್ಗೆ ಭಾರತೀಯ ಚಿತ್ರವಾದ ಆರ್ ಆರ್ ಆರ್ ಸಿನಿಮಾದ ಹಾಡಿಗೆ ಆಸ್ಕರ್ ಸಿಕ್ಕಿದ್ದಕ್ಕೆ ಇಡೀ ದೇಶವೇ ಸಂಭ್ರಮಿಸಿದೆ. ಆರ್ ಆರ್ ಅರ್ ಸಿನಿಮಾ ತೆರೆ ಕಾಣುತ್ತಿದ್ದಂತೆ ನಾಟು ನಾಟು ಹಾಡು ಸಿಕ್ಕಾಪಟ್ಟೆ ಫೇಮಸ್ ಆಗಿತ್ತು. ಈ ಹಾಡಿಗೆ ಸ್ಟೆಪ್ಸ್ ಹಾಕೋದು ಕಷ್ಟವಾಗಿದ್ದರು ಕೂಡ ಸಾಕಷ್ಟು ಜನ ರೀಲ್ಸ್ ಮಾಡಿದ್ರು. ಜ್ಯೂ. ಎನ್ ಟಿ ಆರ್ ಹಾಗೂ ರಾಮ ಚರಣ್ ಅವರ ಎನರ್ಜಿ ಲೆವಲ್ ಈ ಹಾಡಿನಲ್ಲಿ ಬೇರೆಯದೇ ಆಗಿತ್ತು. ಅಷ್ಟು ಅದ್ಭುತವಾಗಿ ನೃತ್ಯ ಮಾಡಿದ್ದಾರೆ. ನಾಟು ನಾಟು ಹಾಡಿನ ಹುಕ್ ಅಪ್ ಸ್ಟೆಪ್ ದೇಶಾದ್ಯಂತ ಸಂಚಲನ ಮೂಡಿಸಿತ್ತು.
ಈಗ ಮತ್ತೆ ದೇಶದ ಮೂಲೆ ಮೂಲೆಯಲ್ಲಿಯೂ ನಾಟು ನಾಟು ಹಾಡು ಪ್ರತಿದ್ವನಿಸುತ್ತಿದೆ. ಭಾರತೀಯ ಕ್ರಿಕೆಟ್ ತಂಡದ ಕೆಲವು ಆಟಗಾರರು ಕೂಡ ಈ ಹಾಡಿಗೆ ನೃತ್ಯ ಮಾಡೋದನ್ನು ಮರೆತಿಲ್ಲ. ಬಾರ್ಡರ್ ಗವಾಸ್ಕರ್ ಟ್ರೋಫಿ ಗೆದ್ದ ನಂತರ ಸರಣಿ ಆಟಗಾರ ರವೀಂದ್ರ ಜಡೇಜಾ (Ravindra Jadeja) ಹಾಗೂ ಅಶ್ವಿನ್ (Ravichandran Ashwin) ಈ ಹಾಡಿಗೆ ತಮ್ಮದೇ ಆದ ರೀತಿಯಲ್ಲಿ ಸ್ಟೆಪ್ಸ್ ಹಾಕಿದ್ದಾರೆ.
ಕ್ರಿಕೆಟ್ ಆಟಗಾರ ಅಶ್ವಿನ್, ಜಡೇಜಾ ಜೊತೆಗಿನ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇವರಿಬ್ಬರೂ ಅಕ್ಷಯ್ ಕುಮಾರ್ ಅವರ ಡೈಲಾಗ್ ಒಂದಕ್ಕೆ ವಿಕೆಟ್ ಹಂಚುತ್ತಿರುವ ರಿಯಲ್ ಮಾಡಿದ್ದಾರೆ ನಂತರ ನಾಟು ನಾಟು ಹಾಡಿಗೆ ಸ್ಟೆಪ್ಸ್ ಹಾಕಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಅಶ್ವಿನ್ ಈ ಪೋಸ್ಟ್ ಹಂಚಿಕೊಂಡಿದ್ದು ಬನ್ನಿ ಈ ಹಾಡಿನ ಸಕ್ಸಸ್ ಅನ್ನೋ ಸೆಲೆಬ್ರೇಟ್ ಮಾಡಿ ಎಂದು ಬರೆದುಕೊಂಡಿದ್ದಾರೆ. (rashwin99).
Advertisement
ನಾಟು ನಾಟು ಹಾಡಿಗೆ ಆಸ್ಕರ್ ಸಿಕ್ಕಿದ್ದೇ ತಡ ಇಶಾನ್ ಕಿಶನ್ ಕೂಡ ತಿಲಕ್ ವರ್ಮ ಜೊತೆಗೆ ಬುಲೆಟ್ ನಲ್ಲಿ ರೋಡ್ ಟ್ರಿಪ್ ಮಾಡುತ್ತಾ ಸೆಲೆಬ್ರೇಟ್ ಮಾಡಿದ್ದಾರೆ. ಈ ವಿಡಿಯೋವನ್ನು ಮುಂಬೈ ಇಂಡಿಯನ್ಸ್ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದೆ. (@mumbaiindians) ಅಷ್ಟೇ ಅಲ್ಲ ಭಗತ್ ವರ್ಮಾ ಹಾಗೂ ಶೇಕ್ ರಶೀದ್ ಇಬ್ಬರು ಫೀಲ್ಡ್ ನಲ್ಲಿಯೇ ಈ ಹಾಡಿಗೆ ನೃತ್ಯ ಮಾಡಿರುವುದನ್ನು ಚೆನ್ನೈ ಸೂಪರ್ ಕಿಂಗ್ಸ್ ಕೂಡ ಶೇರ್ ಮಾಡಿಕೊಂಡಿದೆ. ಆಸ್ಕರ್ ನಲ್ಲಿ ಡಬಲ್ ವಿಜಯವನ್ನು ಆಚರಿಸುತ್ತಿದ್ದೇವೆ ಎಂದು ಸಿಎಸ್‌ಕೆ ತನ್ನ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದ ಪೋಸ್ಟ್ ನಲ್ಲಿ ಬರೆದುಕೊಂಡಿದೆ.
ಅಷ್ಟೇ ಅಲ್ಲದೆ ಟೀಮ್ ಇಂಡಿಯಾದ ಬಹುತೇಕ ಎಲ್ಲಾ ಆಟಗಾರರು ಆರ್ ಆರ್ ಆರ್ ಸಿನಿಮಾದ ನಿರ್ಮಾತೃ ರಾಜಮೌಳಿಗೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ಕೋರಿದ್ದಾರೆ. ಸಚಿನ್ ತೆಂಡೂಲ್ಕರ್, ಶಿಖರ್ ಧವನ್, ಸುರೇಶ್ ರೈನ, ಕುಂಬ್ಳೆ, ವಿವಿಎಸ್ ಲಕ್ಷ್ಮಣ್ ಸೇರಿದಂತೆ ಎಲ್ಲಾ ಆಟಗಾರರು ಆರ್ ಆರ್ ಆರ್ ತಂಡ ನಿರ್ಮಿಸಿದ ಐತಿಹಾಸಿಕ ದಾಖಲೆಗೆ ಅಭಿನಂದನೆ ಸಲ್ಲಿಸಿದ್ದಾರೆ.
View this post on Instagram
Advertisement